ADVERTISEMENT

ವಿದ್ಯಾರ್ಥಿ ವೇತನ: ಒಎನ್‌ಜಿಸಿ ಸ್ಫೋರ್ಟ್ಸ್ ಸ್ಕಾಲರ್‌ಷಿಪ್‌ ಸ್ಕೀಮ್‌

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 16:04 IST
Last Updated 19 ಮಾರ್ಚ್ 2023, 16:04 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಪ್ರತಿಭಾವಂತ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ನೀಡಿ ಯುವ ಸಮೂಹವನ್ನು ದೇಶದ ಕ್ರೀಡಾಕ್ಷೇತ್ರದತ್ತ ಆಕರ್ಷಿಸಲು ಆಯಿಲ್ ಆ್ಯಂಡ್ ನ್ಯಾಚುರಲ್‌ ಗ್ಯಾಸ್ ಕಾರ್ಪೊರೇಷನ್‌(ಒಎನ್‌ಜಿಸಿ) ಕಂಪನಿ ಮುಂದಾಗಿದೆ. ಈ ಸಂಬಂಧ ಕಂಪನಿಯ ಕಾರ್ಪೊರೇಟ್‌ ಕ್ರೀಡಾ ವಿಭಾಗವು ‘ಒಎನ್‌ಜಿಸಿ ಸ್ಪೋರ್ಟ್ಸ್ ಸ್ಕಾಲರ್‌ಷಿಪ್‌ ಸ್ಕೀಮ್‌ 2023–24’ ಎಂಬ ಯೋಜನೆ ರೂಪಿಸಿದೆ.

ಅರ್ಹತೆ: 14 ರಿಂದ 25 ವರ್ಷಗಳವರೆಗಿನ ಭಾರತೀಯ ಕ್ರೀಡಾಪಟುಗಳಿಗೆ ಈ ಸ್ಕಾಲರ್‌ಷಿಪ್‌ ಯೋಜನೆ ಮುಕ್ತವಾಗಿದೆ(ಗಮನಿಸಿ: ಏಪ್ರಿಲ್ 1, 2023ಕ್ಕೆ ಕನಿಷ್ಠ ವಯೋಮಿತಿ ಪರಿಗಣಿಸಲಾಗುತ್ತದೆ. ಚೆಸ್‌, ಜೆಮ್ನಾಸ್ಟಿಕ್‌ ಮತ್ತು ಈಜು ಕ್ರೀಡೆಯಲ್ಲಿರುವ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಾನವನ್ನು 10 ವರ್ಷಗಳಿಗೆ ನಿಗದಿಪಡಿಸಲಾಗಿದೆ). ವಿದ್ಯಾರ್ಥಿವೇತನ ನೀಡುವ ಅವಧಿಯಲ್ಲಿ ಅರ್ಜಿದಾರರು ಇತರೆ ಯಾವುದೇ ಸಂಸ್ಥೆಯಿಂದ ವಿದ್ಯಾರ್ಥಿವೇತನ/ ಸ್ಟೈಫಂಡ್‌ ಪಡೆಯಬಾರದು(ಗಮನಿಸಿ: ಈ ನಿಟ್ಟಿನಲ್ಲಿ ಅರ್ಜಿದಾರರು ಲಿಖಿತ ಪತ್ರವನ್ನು ಅರ್ಜಿಯ ಜೊತೆ ಸಲ್ಲಿಸಬೇಕು).

ಆರ್ಥಿಕ ನೆರವು: ₹ 15 ಸಾವಿರದಿಂದ ₹30 ಸಾವಿರ ಮಾಸಿಕ ವಿದ್ಯಾರ್ಥಿ ವೇತನ.

ADVERTISEMENT

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ

ಅರ್ಜಿ ಸಲ್ಲಿಕೆಗೆ ಕೊನೆ ದಿನ: ಮಾರ್ಚ್ 27, 2023

ಹೆಚ್ಚಿನ ಮಾಹಿತಿಗೆ : www.b4s.in/praja/ONGC1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.