ADVERTISEMENT

‘ಕನ್ನಡದ ಕಣ್ವ’ ಎಂದು ಹೆಸರಾದವರು ಯಾರು?

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 7 ಜನವರಿ 2020, 19:30 IST
Last Updated 7 ಜನವರಿ 2020, 19:30 IST
   

1. ‘ಕನ್ನಡದ ಕಣ್ವ’ ಎಂದು ಹೆಸರಾದವರು ಯಾರು?
ಅ) ಕುವೆಂಪು ಆ)ಬೇಂದ್ರೆ
ಇ) ಬಿಎಂಶ್ರೀ ಈ) ಅನಕೃ

2. ಕಂಪ್ಯೂಟರ್‌ ಪರಿಭಾಷೆಯಲ್ಲಿ ‘ಲ್ಯಾನ್’ ಎಂದರೇನು?
ಅ) ಲೋಕಲ್ ಏರಿಯಾ ನೆಟ್‌ವರ್ಕ್
ಆ) ಲಾಜಿಕಲ್ ಏರಿಯಾ ನೆಟ್‌ವರ್ಕ್
ಇ) ಲೋಕಲ್ ಆರ್ಟಿಫಿಶಿಯಲ್ ನೆಟ್‌ವರ್ಕ್‌
ಆ) ಲಾಂಗ್ವೇಜ್ ಅಸೋಸಿಯೇಟೆಡ್ ನೆಟ್‌ವರ್ಕ್

3. ಕೆಳದಿಯ ಶಿವಪ್ಪನಾಯಕ ಜಾರಿಗೆ ತಂದ ಕಂದಾಯ ವ್ಯವಸ್ಥೆ ಯಾವುದು?
ಅ) ರೈತ್ವಾರಿ ಆ) ಅಮಲ್ದಾರಿ
ಇ) ಜಮೀನ್ದಾರಿ ಈ) ಶಿಸ್ತು

4. ಯಾವ ರಾಜ್ಯದಿಂದ ವಿಭಜನೆ ಹೊಂದಿ ಜಾರ್ಖಂಡ್ ಪ್ರತ್ಯೇಕ ರಾಜ್ಯವಾಯಿತು?
ಅ) ಬಿಹಾರ ಆ) ಅಸ್ಸಾಂ
ಇ) ಬಂಗಾಳ ಈ) ನಾಗಾಲ್ಯಾಂಡ್

ADVERTISEMENT

5. ಪ್ರಸ್ತುತ ಜೀವಂತವಿರುವ ಅತಿ ಭಾರದ ಹಾರುವ ಹಕ್ಕಿ ಯಾವುದು?
ಅ) ರಿಯಾ ಆ) ಎಮು
ಇ) ಬಸ್ಟರ್ಡ್ ಈ) ಆಸ್ಟ್ರಿಚ್

6. ಇದರಲ್ಲಿ ಎಲ್. ಎಸ್. ಶೇಷಗಿರಿ ರಾವ್‌ ಅವರಿಂದ ಸಂಪಾದಿತವಾದ ಕೃತಿ ಸರಣಿ ಯಾವುದು?
ಅ) ಬಾಲ ಪ್ರಪಂಚ
ಆ) ವಿಜ್ಞಾನ ಪ್ರಪಂಚ
ಇ) ಅಕ್ಷರ ಹೊಸ ಕಾವ್ಯ
ಈ) ಭಾರತ - ಭಾರತಿ ಪುಸ್ತಕ ಸಂಪದ

7. ‘ಶೋಲೆ’ - ಹಿಂದಿ ಚಲನಚಿತ್ರದ ನಿರ್ದೇಶಕರು ಯಾರು?
ಅ) ಗುರುದತ್ ಆ) ರಮೇಶ್ ಸಿಪ್ಪಿ
ಇ) ರಾಜಕಪೂರ್ ಈ) ಬಿಮಲ್ ರಾಯ್

8. ಹಾವೇರಿ ಜಿಲ್ಲೆಯ ದೇವರಗುಡ್ಡದಲ್ಲಿ ಪೂಜೆಗೊಳ್ಳುವ ದೈವ ಯಾವುದು?
ಅ) ಮಹಾಂತೇಶ ಆ) ಚನ್ನೇಶ
ಇ) ಮಾಲತೇಶ ಈ) ಓಬಳೇಶ‌

9. ಜಪಾನ್ ದೇಶದ ರಾಷ್ಟ್ರೀಯ ಕ್ರೀಡೆ ಯಾವುದು?
ಅ) ಜೂಡೋ ಆ) ಸುಮೋ
ಇ) ಕರಾಟೆ ಈ) ಜುಜುಟ್ಸು

10. ‘ಕೊರವಂಜಿ’ ಯಾರು ಸಂಪಾದಿಸುತ್ತಿದ್ದ ನಗೆಪತ್ರಿಕೆ?
ಅ) ದಾಶರಥಿ ದೀಕ್ಷಿತ್
ಆ) ಪರ್ವತ ವಾಣಿ
ಇ) ರಾಶಿ ಈ) ವೈಎನ್ಕೆ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಒಸಡು 2. ಕದಂಬ 3. ಮಕ್ಕಳು 4. ಬೆಳಗಿನಿಂದ ರಾತ್ರಿವರೆಗೆ 5. ಚೆಸ್ . ಸಿ. ಎಚ್. ಹನುಮಂತ ರಾಯ
7. ರಾಗಿ 8. ವೆಂಕಟರಮಣ . 9. ಅಂತರರಾಷ್ಟ್ರೀಯ ಅಪರಾಧಿಗಳ ಪತ್ತೆ 10. 1971

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.