ADVERTISEMENT

ಎಂಜಿನಿಯರಿಂಗ್‌ ವಿದ್ಯಾರ್ಥಿನಿಯರಿಗೆ ರೋಲ್ಸ್‌–ರಾಯ್ಸ್‌ನಿಂದ ವಿದ್ಯಾರ್ಥಿ ವೇತನ

ಪ್ರಜಾವಾಣಿ ವಿಶೇಷ
Published 16 ಜುಲೈ 2023, 23:30 IST
Last Updated 16 ಜುಲೈ 2023, 23:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಎಐಸಿಟಿಇ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಪದವಿ ಕಲಿಯುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಬೆಂಬಲಿಸುವುದಕ್ಕಾಗಿ ರೋಲ್ಸ್‌ ರಾಯ್‌ ಇಂಡಿಯಾ ರೂಪಿಸಿರುವ ಸ್ಕಾಲರ್‌ಷಿಪ್‌ ಯೋಜನೆ ‘ರೋಲ್ಸ್‌–ರಾಯ್ಸ್‌ ಉನ್ನತಿ ಸ್ಕಾಲರ್‌ಷಿಪ್‌ ಫಾರ್‌ ವಿಮೆನ್ ಎಂಜಿನಿಯರಿಂಗ್ ಸ್ಟೂಡೆಂಟ್ಸ್‌'.

ಅರ್ಹತೆ

1, 2,3ನೇ ವರ್ಷದಲ್ಲಿ ಎಂಜಿನಿಯರಿಂಗ್ ಪದವಿ ಓದುತ್ತಿರುವ (ಏರೋಸ್ಪೇಸ್, ​​ಮೆರೈನ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ಸ್ ಇತ್ಯಾದಿ ಕ್ಷೇತ್ರಗಳಲ್ಲಿ) ವಿದ್ಯಾರ್ಥಿನಿಯರು ಈ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು 10 ಮತ್ತು 12ನೇ ತರಗತಿಯಲ್ಲಿ ಶೇ 60ರಷ್ಟು ಅಂಕ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ ₹ 4 ಲಕ್ಷ ಮೀರಬಾರದು.  

ADVERTISEMENT

ಅಂಗವಿಕಲರು, ಏಕಪೋಷಕರ (ಸಿಂಗಲ್‌ ಪೇರೆಂಟ್‌) ಮಕ್ಕಳು, ಅನಾಥರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಈ ಹಿಂದೆ ಇದೇ ವಿದ್ಯಾರ್ಥಿವೇತನ ಪಡೆದ ಹಾಗೂ ಅಂತಿಮ ವರ್ಷದಲ್ಲಿರುವ ಎಂಜಿನಿಯರಿಂಗ್ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.  

ಆರ್ಥಿಕ ನೆರವು: ₹ 35 ಸಾವಿರ

ಅರ್ಜಿ ಸಲ್ಲಿಸಲು ಕೊನೆ ದಿನ: 31.8.2023 

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ ಅರ್ಜಿ ಹಾಕಿ.

ಮಾಹಿತಿಗೆ: www.b4s.in/praja/UNS5

ಎಚ್‍ಡಿಎಫ್‌ಸಿ’ ಪರಿವರ್ತನ್ಸ್ ಪ್ರೋಗ್ರಾಂ

1ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ರೂಪಿಸಿರುವ ಕಾರ್ಯಕ್ರಮ ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್‌ ಪ್ರೋಗ್ರಾಂ.

ಅರ್ಹತೆ

ಇದು ಭಾರತೀಯ ಪ್ರಜೆಗಳಿಗೆ ಮಾತ್ರ ಮುಕ್ತವಾಗಿದೆ. ವಿದ್ಯಾರ್ಥಿಗಳು 1 ರಿಂದ 12ನೇ ತರಗತಿ, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್, ಪದವಿಪೂರ್ವ ಅಥವಾ ಸ್ನಾತಕೋತ್ತರ (ಸಾಮಾನ್ಯ ಮತ್ತು ವೃತ್ತಿಪರ ಸೇರಿದಂತೆ) ಕೋರ್ಸ್‌ಗಳಲ್ಲಿ ಓದುತ್ತಿರಬೇಕು. ಅರ್ಜಿದಾರರು ತಮ್ಮ ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇ 55  ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ಕುಟುಂಬದ ವಾರ್ಷಿಕ ಆದಾಯವು ₹ 2.5 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು. 

ಆರ್ಥಿಕ ಸಹಾಯ: ₹ 75,000ದವರೆಗೆ
ಅರ್ಜಿ ಸಲ್ಲಿಸಲು ಕೊನೆ ದಿನ:  30-09-2023

ಹೆಚ್ಚಿನ ಮಾಹಿತಿಗೆ: 
ಆನ್‌ಲೈನ್‌ :
www.b4s.in/praja/HDFC44

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.