ಷೇಫ್ಲರ್ ಇಂಡಿಯಾ ಫೆಲೋಶಿಪ್ ಪ್ರೋಗ್ರಾಂ
ವಿವರ: ಸಮಾಜದ ಅಭಿವೃದ್ಧಿಗೆ ಪೂರಕವಾಗುವ ವಿಶೇಷ ಸುಸ್ಥಿರ ಹಾಗೂ ಸಕಾರಾತ್ಮಕ ಪರಿಹಾರಗಳನ್ನು ಕಂಡುಹಿಡಿಯುವಂತಹ ಯುವಕರನ್ನು ಗುರುತಿಸಿ ಗೌರವಿಸುವುದಕ್ಕಾಗಿ ರೂಪಿಸಿರುವ ವಿಶೇಷ ಕಾರ್ಯಕ್ರಮ ‘ಷೇಫ್ಲರ್ ಇಂಡಿಯಾ ಸೋಷಿಯಲ್ ಇನ್ನೋವೇಟಿವ್ ಫೆಲೊಷಿಪ್ ಪ್ರೋಗ್ರಾಂ 2023.
ಅರ್ಹತೆ: ಅರ್ಜಿದಾರರು 18 ರಿಂದ 35 ವರ್ಷ ವಯಸ್ಸಿನವರಾಗಿರಬೇಕು (2023ರ ಸೆಪ್ಟೆಂಬರ್ 1ಕ್ಕೆ). ಭಾರತದ ನಿವಾಸಿಗಳಾಗಿರಬೇಕು. ಪರಿಣಾಮಕಾರಿ ಸುಸ್ಥಿರ ಪರಿಹಾರಗಳ ಮೂಲ ಮಾದರಿಗಳನ್ನು ರೂಪಿಸುವ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು ಅಥವಾ ಆರಂಭಿಕ ಹಂತ ಸ್ಟಾರ್ಟ್ ಅಪ್‌ಗಳು ಅರ್ಜಿ ಸಲ್ಲಿಸಬಹುದು.
ಆರ್ಥಿಕ ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ₹10 ಲಕ್ಷ ಮೌಲ್ಯದ ಫೆಲೊಷಿಪ್ ಅನುದಾನ ಜೊತೆಗೆ, ಅಹಮದಾಬಾದ್‌ನ ಐಐಎಂ ಅಡಿಯಲ್ಲಿ ರೂಪುಗೊಂಡಿರುವ ‘ಕ್ಯಾಪಿಟಲ್ ಇನ್‌ಕ್ಯುಬೇಷನ್ ಇನ್‌ಸೈಟ್ಸ್ ಎವೆರಿಥಿಂಗ್(CIIE) ಮತ್ತು ನೆಟ್‌ವರ್ಕಿಂಗ್‌ನಿಂದ ವಿಶೇಷ ಮಾರ್ಗದರ್ಶನ.
ಅರ್ಜಿ ಸಲ್ಲಿಸಲು ಕೊನೆ ದಿನ: 10-09-2023
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: www.b4s.in/praja/SIA2
***
ಲೆಗ್ರಾಂಡ್ ಎಂಪವರಿಂಗ್ ಸ್ಕಾಲರ್‌ಷಿಪ್ ಪ್ರೋಗ್ರಾಂ
ಟೆಕ್ನಾಲಜಿ, ಆರ್ಕಿಟೆಕ್ಟ್ ಸೇರಿದಂತೆ ವಿವಿಧ ಎಂಜಿನಿಯರಿಂಗ್ ಪದವಿ ಕೋರ್ಸ್‌ಗಳ ಜೊತೆಗೆ, ಬಿಎಸ್ಸಿ, ಬಿಕಾಂ ಮತ್ತು ಬಿಬಿಎ ಕೋರ್ಸ್‌ಗಳಂತಹ ಪದವಿಗಳನ್ನು ಕಲಿಯಲು ಆಸಕ್ತಿಯಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಬೆಂಬಲಿಸುವುದಕ್ಕಾಗಿ ರೂಪಿಸಿರುವ ಸ್ಕಾಲರ್‌ಷಿಪ್ ಕಾರ್ಯಕ್ರಮ ‘ಲೆಗ್ರಾಂಡ್ ಎಂಪವರಿಂಗ್ ಪ್ರೊಗ್ರಾಂ‘.
ಅರ್ಹತೆ: ಬಿ.ಟೆಕ್/ಬಿ.ಇ/ಬಿ.ಆರ್ಕ್ ಎಂಜನಿಯರಿಂಗ್ ಅಥವಾ ಬಿಬಿಎ/ ಬಿ.ಕಾಂ/ ಬಿ.ಎಸ್‍ಸಿ (ಗಣಿತ ಮತ್ತು ವಿಜ್ಞಾನ) ಪದವಿಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು 2022–2023 ರಲ್ಲಿ 12ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು. 10 ಮತ್ತು 12ನೇ ತರಗತಿಗಳಲ್ಲಿ ಶೇ 70ಕ್ಕಿಂತ ಹೆಚ್ಚು ಅಿಂಕಗಳನ್ನು ಗಳಿಸಿರಬೇಕು. ಅರ್ಜಿದಾರರ ಕುಟುಂಬದ ಆದಾಯ ಎಲ್ಲಾ ಮೂಲಗಳಿಂದ ₹ 5ಲಕ್ಷಕ್ಕಿಂತ ಕಡಿಮೆಯಿರಬೇಕು.
ಆರ್ಥಿಕ ಸಹಾಯ: ಶೈಕ್ಷಣಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ಕೋರ್ಸ್ ಪೂರ್ಣಗೊಳ್ಳುವವರೆಗೆ ಪ್ರತಿ ವರ್ಷ ಕೋರ್ಸ್ ಶುಲ್ಕದ ಶೇ 60 ಹಣವನ್ನು(₹ 60 ಸಾವಿರದವರೆಗೆ) ನೀಡಲಾಗತ್ತದೆ
ವಿಶೇಷ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ಕೋರ್ಸ್ ಪೂರ್ಣಗೊಳ್ಳುವವರೆಗೆ ಪ್ರತಿ ವರ್ಷ ಕೋರ್ಸ್ ಶುಲ್ಕದ ಶೇ 80ರಷ್ಟು(₹ 1ಲಕ್ಷದವರೆಗೆ) ನೀಡಲಾಗುತ್ತದೆ.
ವಿಶೇಷ ವರ್ಗ: ಅಂಗವಿಕಲ ವಿದ್ಯಾರ್ಥಿಗಳು/ಟ್ರಾನ್ಸ್ ಜೆಂಡರ್ ವಿದ್ಯಾರ್ಥಿಗಳು/ ಒಂಟಿ ಪೋಷಕರನ್ನು ಹೊಂದಿರುವ ವಿದ್ಯಾರ್ಥಿಗಳು/ ಕೋವಿಡ್‌ನಿಂದಾಗಿ ತಮ್ಮ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳು.
ಅರ್ಜಿ ಸಲ್ಲಿಸಲು ಕೊನೆ ದಿನ: 31-08-2023
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ. ಹೆಚ್ಚಿನ ಮಾಹಿತಿಗೆ: www.b4s.in/praja/LFLS7
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.