ADVERTISEMENT

ವಿದ್ಯಾರ್ಥಿ ವೇತನ: ಎಟಿಐಎನ್‌ಎಫ್‌–2023

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2023, 19:30 IST
Last Updated 16 ಏಪ್ರಿಲ್ 2023, 19:30 IST
   

ಎಟಿಐಎನ್‌ಎಫ್‌–2023

ಅಬ್ದುಲ್‌ ಕಲಾಂ ಟೆಕ್ನಾಲಜಿ ಇನ್ನೋವೇಷನ್‌ ನ್ಯಾಷನಲ್‌ ಫೆಲೊಷಿಪ್‌–2023(ಎಟಿಐಎನ್‌ಎಫ್‌), – ಇದು ಎಂಜಿನಿಯರಿಂಗ್, ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಉನ್ನತ ಸಾಧನೆ ಮಾಡುವಂತಹ ಎಂಜಿನಿಯರ್‌ಗಳನ್ನು ಗುರುತಿಸಿ, ಪ್ರೋತ್ಸಾಹಿಸಿ, ಅವರ ಸಂಶೋಧನೆಗೆ ನೆರವು ನೀಡುವುದಕ್ಕಾಗಿ ಇಂಡಿಯನ್‌ ನ್ಯಾಷನಲ್‌ ಅಕಾಡೆಮಿ ಆಫ್ ಎಂಜಿನಿಯರಿಂಗ್‌ (ಐಎನ್‌ಎಇ) ಸಂಸ್ಥೆ ರೂಪಿಸಿರುವ ಫೆಲೊಷಿಪ್‌ ಕಾರ್ಯಕ್ರಮ.

ಅರ್ಹತೆ: ಭಾರತ ಅಥವಾ ವಿದೇಶದಲ್ಲಿ ವೃತ್ತಿಪರ ಶಿಕ್ಷಣ ಕಲಿತಿರುವ ಅಭ್ಯರ್ಥಿಗಳು ಈ ಫೆಲೊಷಿಪ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಎಂಜಿನಿಯ ರಿಂಗ್ ಪದವಿ ಪಡೆದಿರಬೇಕು. ಫೆಲೊಷಿಪ್‌ ನೀಡುವ ಸಮಯದಲ್ಲಿ ತಾವು ಕೆಲಸ ಮಾಡುವ ಸಂಸ್ಥೆಯಲ್ಲಿ ಐದು ವರ್ಷಗಳ ಸೇವೆ ಬಾಕಿ ಇರಬೇಕು. ಅಭ್ಯರ್ಥಿಗಳು ಫೆಲೊಷಿಪ್‌ ಪಡೆಯುವ ಅವಧಿಯಲ್ಲಿ, ಬೇರೆ ಯಾವುದೇ ಫೆಲೊಷಿಪ್‌ ಹೊಂದಿರಬಾರದು.

ADVERTISEMENT

ಆರ್ಥಿಕ ನೆರವು: ಮಾಸಿಕ ₹25 ಸಾವಿರ ಮತ್ತು ಇತರೆ ಸೌಲಭ್ಯಗಳು

ಅರ್ಜಿ ಸಲ್ಲಿಸಲು ಕೊನೆ ದಿನ: 30-06-2023

ಅರ್ಜಿ ಸಲ್ಲಿಸುವ ವಿಧಾನ: ಇಮೇಲ್‌ ಮೂಲಕ ಮಾತ್ರ(inaehq@inae.in)

ಹೆಚ್ಚಿನ ಮಾಹಿತಿಗೆ: www.b4s.in/praja/AKTINF2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.