ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ₹1,20,000 ಸಿಗುವ ಸ್ಕಾಲರ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 23:30 IST
Last Updated 24 ನವೆಂಬರ್ 2024, 23:30 IST
<div class="paragraphs"><p>ವಿದ್ಯಾರ್ಥಿ ವೇತನ</p></div>

ವಿದ್ಯಾರ್ಥಿ ವೇತನ

   

(ಸಾಂದರ್ಭಿಕ ಚಿತ್ರ)

ಶ್ರೀ ತುಳಸಿ ತಂತಿ ಸ್ಕಾಲರ್‌ಷಿಪ್‌

ಆರ್ಥಿಕವಾಗಿ ದುರ್ಬಲರಾಗಿರುವ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸಲು ಸುಜ್ಲಾನ್‌ ಗ್ರೂಪ್‌ ನೀಡುವ ನೆರವು ಇದಾಗಿದೆ. 

ADVERTISEMENT

ಅರ್ಹತೆ: 9ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಬಿಇ/ಬಿ.ಟೆಕ್ ಪದವಿ ಅಥವಾ ಡಿಪ್ಲೊಮಾ ಇನ್ ಎಂಜಿನಿಯರಿಂಗ್‌ನ ಮೊದಲ ವರ್ಷಕ್ಕೆ ದಾಖಲಾಗಿರುವ ವಿದ್ಯಾರ್ಥಿನಿಯರಿಗೆ ಲಭ್ಯವಿರುತ್ತದೆ.
ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದಲೂ ₹ 6 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು.

ಬಿಇ/ಬಿ.ಟೆಕ್ ಪದವಿ ಅಥವಾ ಡಿಪ್ಲೊಮಾ ಕೋರ್ಸ್‌ಗಳನ್ನು ಮಾಡುತ್ತಿರುವ ವಿದ್ಯಾರ್ಥಿನಿಯರು 10ನೇ ತರಗತಿ ಮತ್ತು 12ನೇ ತರಗತಿಗಳಲ್ಲಿ ಕನಿಷ್ಠ ಶೇ 50 ಅಂಕಗಳನ್ನು ಗಳಿಸಿರಬೇಕು.

ಆರ್ಥಿಕ ನೆರವು: 9ನೇ ತರಗತಿಯ ವಿದ್ಯಾರ್ಥಿನಿಯರಿಗೆ- ವಾರ್ಷಿಕ ₹  6,000 (ಗಮನಿಸಿ: 9 ಮತ್ತು 10ನೇ ತರಗತಿಗಳೆರಡಕ್ಕೂ ವಿದ್ಯಾರ್ಥಿವೇತನ ನೀಡಲಾಗುತ್ತದೆ).

ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ- ವಾರ್ಷಿಕ ₹60,000.

ಬಿಇ/ಬಿ.ಟೆಕ್ ಪದವಿ ವಿದ್ಯಾರ್ಥಿಗಳಿಗೆ- ವಾರ್ಷಿಕ ₹1,20,000

ಅರ್ಜಿ ಸಲ್ಲಿಸಲು ಕೊನೆ ದಿನ: 10-12-2024

ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ:  Short Url: www.b4s.in/pjvi/SZSP1

ಡಿಎಕ್ಸ್‌ಸಿ ಪ್ರೋಗ್ರೆಸಿಂಗ್ ಮೈಂಡ್ಸ್

ಡಿಎಕ್ಸ್‌ಸಿ ಟೆಕ್ನಾಲಜಿಯ ಉಪಕ್ರಮವಾಗಿದ್ದು, ಶೈಕ್ಷಣಿಕ ಹಾಗೂ ಕ್ರೀಡಾ ವೆಚ್ಚಗಳಿಗೆ ಸಹಾಯ ಮಾಡುತ್ತದೆ. 

ಅರ್ಹತೆ: ಸ್ಟೆಮ್-ಸಂಬಂಧಿತ ಕ್ಷೇತ್ರಗಳಲ್ಲಿ ಯಾವುದೇ ವರ್ಷದ ಪದವಿ ಅಭ್ಯಾಸ ಮಾಡುತ್ತಿರುವ ಮಹಿಳೆಯರು ಮತ್ತು ಲಿಂಗ ಪರಿವರ್ತಿತ ವಿದ್ಯಾರ್ಥಿಗಳು ಅರ್ಹರು. 13ರಿಂದ 25 ವರ್ಷ ವಯಸ್ಸಿನೊಳಗಿನ  ರಾಜ್ಯ/ ರಾಷ್ಟ್ರೀಯ / ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ / ದೇಶವನ್ನು ಪ್ರತಿನಿಧಿಸಿರುವ ಮಹಿಳಾ ಕ್ರೀಡಾ ಪಟುಗಳು ಕೂಡ ಅರ್ಜಿ‌ ಸಲ್ಲಿಸಬಹುದು.

ಪದವಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಹಿಂದಿನ ತರಗತಿ/ಸೆಮಿಸ್ಟರ್‌ನಲ್ಲಿ ಕನಿಷ್ಠ ಶೇ 60 ಅಂಕಗಳನ್ನು ಪಡೆದಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹4,00,000ಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು (ಕ್ರೀಡಾಪಟುಗಳಿಗೆ ₹5,00,000)

ಆರ್ಥಿಕ ಸಹಾಯ: ಸ್ಟೆಮ್‌ನಲ್ಲಿ ಪದವಿಗೆ - ₹50,000, ಕ್ರೀಡಾಪಟುಗಳಿಗೆ - ₹1,25,000

ಅರ್ಜಿ ಸಲ್ಲಿಸಲು ಕೊನೆ ದಿನ: 30-11-2024

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: Short Url: www.b4s.in/pjvi/DXCS4

ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್ಸ್ ‌

ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಭಾವಂತ ಮತ್ತು ಅಗತ್ಯವಿರುವ ವಿದ್ಯಾರ್ಥಿಗಳಿಗೆ ನೆರವು ನೀಡುತ್ತದೆ.

ಅರ್ಹತೆ: ವಿದ್ಯಾರ್ಥಿವೇತನವು ಭಾರತೀಯ ಪ್ರಜೆಗಳಿಗೆ ಮುಕ್ತವಾಗಿದೆ. ವಿದ್ಯಾರ್ಥಿಗಳು 1 ರಿಂದ 12ನೇ ತರಗತಿಯಲ್ಲಿ ಓದುತ್ತಿರಬೇಕು ಅಥವಾ ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್, ಪದವಿ ಅಥವಾ ಸ್ನಾತಕೋತ್ತರ (ಸಾಮಾನ್ಯ ಮತ್ತು ವೃತ್ತಿಪರ ಸೇರಿದಂತೆ) ಕೋರ್ಸ್‌ಗಳನ್ನು ಅಭ್ಯಾಸ ಮಾಡುತ್ತಿರಬೇಕು.

ಅರ್ಜಿದಾರರು ತಮ್ಮ ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇ 55 ಅಂಕ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯವು ₹ 2.5 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು. 

ಆರ್ಥಿಕ ಸಹಾಯ: ₹ 75,000ದ ವರೆಗೆ

ಅರ್ಜಿ ಸಲ್ಲಿಸಲು ಕೊನೆ ದಿನ: 31-12-2024

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಮಾಹಿತಿಗೆ: Short Url: www.b4s.in/pjvi/HDFC54

ಟಿಎಸ್‌ಡಿಪಿಎಲ್ ಸಿಲ್ವರ್ ಜುಬಿಲಿ ಸ್ಕಾಲರ್‌ಷಿಪ್

ಟಾಟಾ ಸ್ಟೀಲ್ ಡೌನ್‌ಸ್ಟ್ರೀಮ್ ಪ್ರಾಡಕ್ಟ್ಸ್ ಲಿಮಿಟೆಡ್‌ ನೀಡುವ ವಿದ್ಯಾರ್ಥಿವೇತನ ಇದಾಗಿದೆ.

ಅರ್ಹತೆ: ಸರ್ಕಾರಿ-ಮಾನ್ಯತೆ ಪಡೆದ ಸಂಸ್ಥೆಗಳಿಂದ ಫಿಟ್ಟರ್, ಎಲೆಕ್ಟ್ರಿಕಲ್, ವೆಲ್ಡರ್ಸ್, ಸೇಫ್ಟಿ ಇತ್ಯಾದಿ ಕ್ಷೇತ್ರಗಳಲ್ಲಿ   ಐಟಿಐ/ಡಿಪ್ಲೊಮಾವನ್ನು ಅಭ್ಯಾಸ ಮಾಡುತ್ತಿರಬೇಕು. ಅಭ್ಯರ್ಥಿಗಳು ತಮ್ಮ 10ನೇ ತರಗತಿಯ ಪರೀಕ್ಷೆಯಲ್ಲಿ ಕನಿಷ್ಠ ಶೇ 50  ಅಂಕಗಳನ್ನು ಗಳಿಸಿರಬೇಕು. ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದಲೂ ₹ 5,00,000ಕ್ಕಿಂತ ಹೆಚ್ಚಿರಬಾರದು.

ಆರ್ಥಿಕ ಸಹಾಯ: 1 ವರ್ಷಕ್ಕೆ ₹ 50,000

ಅರ್ಜಿ ಸಲ್ಲಿಸಲು ಕೊನೆ ದಿನ: 03-12-2024

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಮಾಹಿತಿಗೆ:  Short Url: www.b4s.in/pjvi/TSDPL4

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.