ಬಿವೈಪಿಎಲ್ ಸಶಕ್ತ್ ಸ್ಕಾಲರ್‌ಷಿಪ್
ಸಮಾಜದ ಹಿಂದುಳಿದ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಿಎಸ್‌ಇಎಸ್ ಯಮುನಾ ಪವರ್ ಲಿಮಿಟೆಡ್ ನೀಡುವ ನೆರವು ಇದಾಗಿದೆ. ಉನ್ನತ ಶಿಕ್ಷಣವನ್ನು ಮುಂದುವರಿಸಬೇಕೇ ಅಥವಾ ಉದ್ಯೋಗ ಪಡೆಯಬೇಕೇ ಎಂದು ತಮ್ಮ ಜೀವನದಲ್ಲಿ ನಿರ್ಧರಿಸುವ ಹಂತದಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲ ನೀಡಲಿದೆ.
ಅರ್ಹತೆ: ಸರ್ಕಾರಿ ಕಾಲೇಜಿನಲ್ಲಿ ಕಲಿಯುತ್ತಿರಬೇಕು. ಕೊನೆಯ ಪರೀಕ್ಷೆಯಲ್ಲಿ ಕನಿಷ್ಠ ಶೇ 55ರಷ್ಟು ಅಂಕ ಪಡೆದಿರಬೇಕು. ವಾರ್ಷಿಕ ಆದಾಯ ₹ 6,00,000ವನ್ನು ಮೀರಬಾರದು.
ಆರ್ಥಿಕ ಸಹಾಯ: ₹ 30,000ದವರೆಗೆ
ಅರ್ಜಿ ಸಲ್ಲಿಸಲು ಕೊನೆ ದಿನ: 14-11-2024
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: Short Url: www.b4s.in/pjvi/BYPL5
‘ಶ್ರೀಮತಿ ಶ್ಯಾಮ್ ಲತಾ ಗರ್ಗ್’ ಇಂಡಿಯಾ ಸ್ಕಾಲರ್‌ಷಿಪ್
ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಲು ಸ್ವಾಮಿ ದಯಾನಂದ್ ಎಜುಕೇಶನ್ ಫೌಂಡೇಷನ್ (ಎಸ್‌ಡಿಇಎಫ್)ನ ಉಪಕ್ರಮವಾಗಿದೆ.
ಅರ್ಹತೆ: ಸರ್ಕಾರಿ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳು ಅವಕಾಶ ನೀಡುವ ಎಂಜಿನಿಯರಿಂಗ್, ವೈದ್ಯಕೀಯ, ವಾಸ್ತುಶಿಲ್ಪ ಸೇರಿ ವೃತ್ತಿಪರ ಕೋರ್ಸ್‌ಗಳಿಗೆ ದಾಖಲಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 12ನೇ ತರಗತಿಯಲ್ಲಿ ಸಿಬಿಎಸ್‌ಸಿ ಬೋರ್ಡ್‌ನಲ್ಲಿಯಾದರೆ ಕನಿಷ್ಠ ಶೇ 80 ಅಥವಾ ಇತರ ಬೋರ್ಡ್‌ಗಳಲ್ಲಿಯಾದರೆ ಶೇ 70 ಅಥವಾ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು. ಎರಡನೆಯ ವರ್ಷದ ವಿದ್ಯಾರ್ಥಿಗಳಿಗೆ ಕನಿಷ್ಠ 8.0 ಸಿಜಿಪಿಎ ಅವಶ್ಯಕ. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹ 8 ಲಕ್ಷವನ್ನು ಮೀರಬಾರದು.
ಆರ್ಥಿಕ ಸಹಾಯ: 2500ಕ್ಕಿಂತ ಒಳಗಿನ ಎಐಆರ್ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ₹ 50,000 ಮೊತ್ತದ ವಿದ್ಯಾರ್ಥಿವೇತನ.
2501ರಿಂದ 5,000ದೊಳಗಿನ ಎಐಆರ್ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ₹ 40,000 ಮೊತ್ತದ ವಿದ್ಯಾರ್ಥಿವೇತನ.
5,001ರಿಂದ 7500ರೊಳಗಿನ ಎಐಆರ್ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ₹ 30,000 ಮೊತ್ತದ ವಿದ್ಯಾರ್ಥಿವೇತನ.
7500ರ ಮೇಲಿನ ಎಐಆರ್ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ
₹ 20,000 ಮೊತ್ತದ ವಿದ್ಯಾರ್ಥಿವೇತನ.
ಬಿ.ಎ., ಬಿ.ಎಸ್‌ಸಿ, ಬಿ.ಕಾಂ, ಬಿಬಿಎ ಇತ್ಯಾದಿಯಂತಹ ನಾನ್-ಟೆಕ್ನಿಕಲ್ ಕೋರ್ಸ್‌ಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ
₹ 10,000 ಮೊತ್ತದ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
l→ಅರ್ಜಿ ಸಲ್ಲಿಸಲು ಕೊನೆ ದಿನ: 31-12-2024
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: Short Url: www.b4s.in/pjvi/SDEFSL1
ಓಕ್‌ನಾರ್ತ್ ಸ್ಟೆಮ್ ಸ್ಕಾಲರ್‌ಷಿಪ್
ಓಕ್‌ನಾರ್ತ್ ಸ್ಟೆಮ್ ಸ್ಕಾಲರ್‌ಶಿಪ್ ಅಂಡ್ ಮೇಂಟೊರ್‌ಶಿಪ್ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಆರ್ಥಿಕ ಸಹಾಯ ನೀಡುವ ಗುರಿ ಹೊಂದಿದೆ.
ಅರ್ಹತೆ: 12ನೇ ತರಗತಿಯಲ್ಲಿ ಉತ್ತೀರ್ಣರಾದಂತಹ ಮತ್ತು ಪ್ರಸ್ತುತ ಸರ್ಕಾರಿ ಕಾಲೇಜುಗಳು / ವಿಶ್ವವಿದ್ಯಾಲಯಗಳಲ್ಲಿ ಸ್ಟೆಮ್-ಸಂಬಂಧಿತ ವಿಷಯಗಳಲ್ಲಿ ಪದವಿ ಅಧ್ಯಯನ (ಯಾವುದೇ ವರ್ಷ) ಮಾಡುತ್ತಿರುವಂತಹ ವಿದ್ಯಾರ್ಥಿನಿಯರು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದಲೂ ಸೇರಿ₹ 3.5 ಲಕ್ಷಕ್ಕಿಂತ ಕಡಿಮೆ ಇರಬೇಕು. ಅಭ್ಯರ್ಥಿಯು ಗಳಿಸಿದ ಒಟ್ಟು ಅಂಕಗಳು 12ನೇ ತರಗತಿಯ (ಅಥವಾ ತತ್ಸಮಾನ) ಪರೀಕ್ಷೆಯಲ್ಲಿ ಶೇ 80 ಅಥವಾ ಅದಕ್ಕಿಂತ ಹೆಚ್ಚಿರಬೇಕು.
ಆರ್ಥಿಕ ಸಹಾಯ: ₹ 30,000 (ನಿಗದಿತ ಮೊತ್ತ)
ಅರ್ಜಿ ಸಲ್ಲಿಸಲು ಕೊನೆ ದಿನ: 18-11-2024
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: Short Url: www.b4s.in/pjvi/ONSS3
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.