‘ಲೈಫ್’ಸ್ ಗುಡ್’ ಪ್ರೋಗ್ರಾಂ 2024
ಭಾರತದಾದ್ಯಂತ ಆಯ್ದ ಕಾಲೇಜು/ಸಂಸ್ಥೆಗಳಲ್ಲಿ ಅಂಡರ್‌ಗ್ರಾಜುಯೇಟ್ ಮತ್ತು ಪೋಸ್ಟ್‌ಗ್ರಾಜುಯೇಟ್ ಕೋರ್ಸ್‌ಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅರ್ಜಿಗಳನ್ನು ಆಹ್ವಾನಿಸುತ್ತದೆ.
ವಿದ್ಯಾರ್ಥಿಗಳು ಭಾರತದಾದ್ಯಂತ ಆಯ್ದ ಕಾಲೇಜು/ಸಂಸ್ಥೆಗಳಲ್ಲಿ ಅಂಡರ್‌ಗ್ರಾಜುಯೇಟ್ ಮತ್ತು ಪೋಸ್ಟ್‌ಗ್ರಾಜುಯೇಟ್ ಕೋರ್ಸ್‌ಗಳನ್ನು (ಯಾವುದೇ ಶೈಕ್ಷಣಿಕ ವರ್ಷದಲ್ಲಿ) ಅಭ್ಯಾಸ ಮಾಡುತ್ತಿರಬೇಕು. ಮೊದಲನೆಯ ವರ್ಷದಲ್ಲಿರುವ ವಿದ್ಯಾರ್ಥಿಗಳು ತಮ್ಮ 12ನೇ ತರಗತಿಯ ಪರೀಕ್ಷೆಗಳಲ್ಲಿ ಕನಿಷ್ಠ 60% ಅಂಕಗಳನ್ನು, 2, 3 ಮತ್ತು 4ನೇ ವರ್ಷದಲ್ಲಿರುವ ವಿದ್ಯಾರ್ಥಿಗಳು ತಮ್ಮ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅಂಕಗಳನ್ನು ಗಳಿಸಿರಬೇಕು. ಪ್ರತಿಭಾವಂತ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಮತ್ತು ರೂ. 8ಲಕ್ಷ ಮೀರದಂತೆ ಕುಟುಂಬದ ವಾರ್ಷಿಕ ಆದಾಯವನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಆದ್ಯತೆಯನ್ನು ನೀಡಲಾಗುತ್ತದೆ. ಮೊದಲು ಬಂದವರಿಗೆ ಮೊದಲ ಅವಕಾಶದ ರೀತಿಯಲ್ಲಿ ಆಯ್ಕೆ ಪ್ರಕ್ರಿಯೆಯು ನಡೆಯುತ್ತದೆ.
ಶೂನ್ಯ ಟ್ಯೂಷನ್ ಶುಲ್ಕವಿರುವ ಮತ್ತು ರೂ.8 ಲಕ್ಷಕ್ಕಿಂತ ಕಡಿಮೆ ಕುಟುಂಬ ಆದಾಯವನ್ನು ಹೊಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ: ಯುಜಿ ವಿದ್ಯಾರ್ಥಿಗಳಿಗೆ- ರೂ. 50,000; ಪಿಜಿ ವಿದ್ಯಾರ್ಥಿಗಳಿಗೆ- ರೂ. 1 ಲಕ್ಷ
ಅರ್ಜಿ ಸಲ್ಲಿಸಲು ಕೊನೆಯ ದಿನ ಅ.31, ಹೆಚ್ಚಿನ ಮಾಹಿತಿಗೆ: www.b4s.in/praja/LGIGS2
ಎಸ್‌ಡಿಇಎಫ್ ‘ಶ್ಯಾಮ್ ಲತಾ ಗರ್ಗ್’ ಇಂಡಿಯಾ 2024-25
ಎಂಜಿನಿಯರಿಂಗ್, ಮೆಡಿಕಲ್, ಆರ್ಕಿಟೆಕ್ಚರ್ ಇತ್ಯಾದಿ ಸೇರಿದಂತೆ ವೃತ್ತಿಪರ ಕೋರ್ಸ್‌ಗಳು ಮತ್ತು ಇತರ ಅಂಡರ್‌ಗ್ರಾಜುಯೇಟ್ ಕಾರ್ಯಕ್ರಮಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಲು ಸ್ವಾಮಿ ದಯಾನಂದ್ ಎಜುಕೇಶನ್ ಫೌಂಡೇಶನ್ (ಎಸ್‌ಡಿಇಎಫ್)ನ ಉಪಕ್ರಮವಾಗಿದೆ.
ಅರ್ಹತೆ: ಸರ್ಕಾರಿ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳು ಅವಕಾಶ ನೀಡುವ ಎಂಜಿನಿಯರಿಂಗ್, ಮೆಡಿಕಲ್, ಆರ್ಕಿಟೆಕ್ಚರ್ ಇತ್ಯಾದಿ ಸೇರಿದಂತೆ ವೃತ್ತಿಪರ ಕೋರ್ಸ್‌ಗಳು ಮತ್ತು ಇತರ ಪದವಿ ಕಾರ್ಯಕ್ರಮಗಳಿಗೆ ದಾಖಲಾದ ಭಾರತೀಯ ವಿದ್ಯಾರ್ಥಿಗಳು. ಅಭ್ಯರ್ಥಿಗಳು ತಮ್ಮ 12ನೇ ತರಗತಿಯಲ್ಲಿ ಸಿಬಿಎಸ್‌ಸಿ ಬೋರ್ಡ್‌ನಲ್ಲಿಯಾದರೆ ಕನಿಷ್ಠ 80% ಅಥವಾ ಇತರ ಬೋರ್ಡ್‌ಗಳಲ್ಲಿಯಾದರೆ 70% ಅಥವಾ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು. ಎರಡನೆಯ ವರ್ಷದ ವಿದ್ಯಾರ್ಥಿಗಳಿಗೆ ಕನಿಷ್ಠ 8.0 ಸಿಜಿಪಿಎ ಅವಶ್ಯಕ. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ.8 ಲಕ್ಷವನ್ನು ಮೀರಬಾರದು.
ಅರ್ಜಿ ಸಲ್ಲಿಸಲು ಕೊನೆಯ ದಿನ ಅ.31, ಹೆಚ್ಚಿನ ಮಾಹಿತಿಗೆ: www.b4s.in/praja/SDEFSL1
ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ 2024-25
ಅರ್ಹತೆ: ಮಾನ್ಯತೆ ಹೊಂದಿರುವ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಪ್ರಸಕ್ತ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (ಬಿಡಿಎಸ್) (ಯಾವುದೇ ವರ್ಷ) ಅಥವಾ ಮಾಸ್ಟರ್ ಆಫ್ ಡೆಂಟಲ್ ಸರ್ಜರಿ (ಎಂಡಿಎಸ್) ಕೋರ್ಸ್‌ಗಳಿಗೆ ದಾಖಲಾಗಿರುವ ಭಾರತೀಯ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಅರ್ಜಿದಾರರು 12ನೇ ತರಗತಿಯಲ್ಲಿ ಕನಿಷ್ಠ 65% ಅಂಕಗಳನ್ನು ಗಳಿಸಿರಬೇಕು. ಎಂಡಿಎಸ್ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ತಮ್ಮ ಬಿಡಿಎಸ್‌ನಲ್ಲಿ 60%ಕ್ಕಿಂತ ಹೆಚ್ಚಿನ ಸಮಗ್ರ ಅಂಕಗಳನ್ನು ಪಡೆದಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದಲೂ ರೂ. 8 ಲಕ್ಷವನ್ನು ಮೀರಬಾರದು.
₹ 75,000ದ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಅ.31 ಅರ್ಜಿ ಸಲ್ಲಿಸುವ ಕೊನೆಯದಿನವಾಗಿದೆ.
ಹೆಚ್ಚಿನ ಮಾಹಿತಿಗೆ: www.b4s.in/praja/CKISSP3
ಲೂಯಿಸ್ ಡ್ರೇಫಸ್ ಅಗ್ರಿ-2024-25
ಅರ್ಹತೆ: ಆಯ್ಕೆ ಮಾಡಲಾದ ಸಂಸ್ಥೆಗಳಲ್ಲಿ ಅಗ್ರಿಕಲ್ಚರ್‌ನಲ್ಲಿ ಪದವಿಪೂರ್ವ ಕೋರ್ಸ್‌ಗಳ ಮೊದಲನೇ ಅಥವಾ ಎರಡನೇ ವರ್ಷದಲ್ಲಿರುವ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ಅಭ್ಯರ್ಥಿಗಳು ತಮ್ಮ 10 ಮತ್ತು 12ನೇ ತರಗತಿಗಳಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯವು ರೂ.8 ಲಕ್ಷಕ್ಕಿಂತ ಕಡಿಮೆ ಇರಬೇಕು.
₹ 50,000ದವರೆಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಅ.31 ಅರ್ಜಿಸಲ್ಲಿಸಲು ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ: www.b4s.in/praja/DASPL1
ನಿಕಾನ್ ಪ್ರೋಗ್ರಾಂ 2024-25
ಇದು ಸಮಾಜದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಛಾಯಾಗ್ರಹಣ-ಸಂಬಂಧಿತ ಕೋರ್ಸ್‌ಗಳನ್ನು ಅಭ್ಯಾಸ ಮಾಡಲು ಆರ್ಥಿಕವಾಗಿ ಬೆಂಬಲ ನೀಡಲು ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಉಪಕ್ರಮವಾಗಿದೆ.
ಅರ್ಹತೆ: 12ನೇ ತರಗತಿಯನ್ನು ಪೂರ್ಣಗೊಳಿಸಿರುವ ಮತ್ತು ಮೂರು ತಿಂಗಳು ಅಥವಾ ಹೆಚ್ಚಿನ ಸಮಯದ ಛಾಯಾಗ್ರಹಣ-ಸಂಬಂಧಿತ ಕೋರ್ಸ್‌ಗಳನ್ನು ಅಭ್ಯಾಸ ಮಾಡುತ್ತಿರುವಂತಹ ಭಾರತೀಯ ವಿದ್ಯಾರ್ಥಿಗಳಿಗೆ ಲಭ್ಯವಿದೆ. ಕುಟುಂಬದ ವಾರ್ಷಿಕ ಆದಾಯವು (ಎಲ್ಲಾ ಮೂಲಗಳಿಂದ) ರೂ.6 ಲಕ್ಷಕ್ಕಿಂತ ಕಡಿಮೆ ಇರಬೇಕು.
₹10,000ದ ವರೆಗೆ ವಿದ್ಯಾರ್ಥಿವೇತನ ನೀಡಲಾಗುವುದು. ಅ.20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ: www.b4s.in/praja/NIKON12
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.