ADVERTISEMENT

ವಿವಿಧ ವಿದ್ಯಾಭ್ಯಾಸಕ್ಕೆ ಹಲವು ವಿದ್ಯಾರ್ಥಿ ವೇತನ.. ಇಲ್ಲಿದೆ ಮಾಹಿತಿ

ಪ್ರಜಾವಾಣಿ ವಿಶೇಷ
Published 27 ಅಕ್ಟೋಬರ್ 2024, 22:37 IST
Last Updated 27 ಅಕ್ಟೋಬರ್ 2024, 22:37 IST
<div class="paragraphs"><p>ವಿದ್ಯಾರ್ಥಿ ವೇತನ</p></div>

ವಿದ್ಯಾರ್ಥಿ ವೇತನ

   

(ಸಾಂದರ್ಭಿಕ ಚಿತ್ರ)

ಕೆವಿಬಿ ಸ್ಕಾಲರ್‌ಷಿಪ್‌

ADVERTISEMENT

ಮೆಡಿಕಲ್, ಎಂಜಿನಿಯರಿಂಗ್, ಅಗ್ರಿಕಲ್ಚರ್, ಆರ್ಟ್ಸ್ ಅಂಡ್ ಸೈನ್ಸ್ ಮತ್ತು ಎಐ ಆ್ಯಂಡ್‌ ಮಷೀನ್ ಲರ್ನಿಂಗ್ ವಿಭಾಗಗಳಲ್ಲಿ ಮೊದಲ ವರ್ಷದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕರೂರ್ ವೈಶ್ಯ ಬ್ಯಾಂಕ್‌ ಆರ್ಥಿಕ ನೆರವು ನೀಡುತ್ತದೆ.  
ಅರ್ಹತೆ:  ಮೆಡಿಕಲ್, ಎಂಜಿನಿಯರಿಂಗ್, ಅಗ್ರಿಕಲ್ಚರ್, ಆರ್ಟ್ಸ್ ಆ್ಯಂಡ್‌ ಸೈನ್ಸ್, ಬ್ಯಾಂಕಿಂಗ್-ಸಂಬಂಧಿತ ಫೈನಾನ್ಶಿಯಲ್ ಕೋರ್ಸ್‌ಗಳು ಮತ್ತು ಎಐ ಆ್ಯಂಡ್‌ ಮಷೀನ್ ಲರ್ನಿಂಗ್‌ನಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಮೊದಲ ವರ್ಷಕ್ಕೆ ದಾಖಲಾಗಿರಬೇಕು. 
  ಹಿಂದಿನ ತರಗತಿಯಲ್ಲಿ ಕನಿಷ್ಠ ಶೇ 60 ಅಂಕಗಳನ್ನು ಪಡೆದಿರಬೇಕು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ಒಟ್ಟು
₹ 6,00,000ವನ್ನು ಮೀರಬಾರದು.
ಕರೂರ್ ವೈಶ್ಯ ಬ್ಯಾಂಕ್ ಮತ್ತು ಬಡ್ಡಿ4ಸ್ಟಡಿಯ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸುವಂತಿಲ್ಲ.
ಸ್ವ-ಬಂಡವಾಳದ ಕೋರ್ಸ್‌ಗಳು  ಈ ವಿದ್ಯಾರ್ಥಿವೇತನದ ಅಡಿಯಲ್ಲಿ ಬರುವುದಿಲ್ಲ.
ಸರ್ಕಾರಿ ಅಥವಾ ಸರ್ಕಾರಿ-ಅನುದಾನಿತ ಕಾಲೇಜುಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳು ಮಾತ್ರವೇ ಅರ್ಹರಾಗಿರುತ್ತಾರೆ.
ಆರ್ಥಿಕ ಸಹಾಯ:  ವಾರ್ಷಿಕ ₹ 1,00,000  (ಬಹು-ವಾರ್ಷಿಕ ಸ್ಕಾಲರ್‌ಶಿಪ್)
ಅರ್ಜಿ ಸಲ್ಲಿಸಲು ಕೊನೆ ದಿನ:  28-11-2024
ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ:  Short Url: www.b4s.in/pjvi/KVBSP1

ಲೂಯಿಸ್ ಡ್ರೇಫಸ್ ಅಗ್ರಿ-ಸ್ಕಾಲರ್ಸ್‌

ಇದು ಲೂಯಿಸ್ ಡ್ರೇಫಸ್ ಕಂಪನಿಯ ಉಪಕ್ರಮವಾಗಿದ್ದು, ಅಗ್ರಿಕಲ್ಚರ್‌ನಲ್ಲಿ ಪದವಿಪೂರ್ವ ಕೋರ್ಸ್‌ಗಳನ್ನು ಮಾಡುತ್ತಿರುವ ಸೌಲಭ್ಯವಂಚಿತ ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ಒದಗಿಸಲಿದೆ. 
ಅರ್ಹತೆ:  ಅಗ್ರಿಕಲ್ಚರ್‌ನಲ್ಲಿ ಪದವಿಪೂರ್ವ ಕೋರ್ಸ್‌ಗಳ ಮೊದಲನೇ ಅಥವಾ ಎರಡನೇ ವರ್ಷದಲ್ಲಿರುವ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ಅಭ್ಯರ್ಥಿಗಳು ತಮ್ಮ 10 ಮತ್ತು 12ನೇ ತರಗತಿಗಳಲ್ಲಿ ಕನಿಷ್ಠ ಶೇ 60  ಅಂಕಗಳನ್ನು ಪಡೆದಿರಬೇಕು. 

ವಾರ್ಷಿಕ ಆದಾಯವು ₹ 8 ಲಕ್ಷಕ್ಕಿಂತ ಕಡಿಮೆ ಇರಬೇಕು.
ಆರ್ಥಿಕ ಸಹಾಯ: ₹ 50,000ದವರೆಗೆ
ಅರ್ಜಿ ಸಲ್ಲಿಸಲು ಕೊನೆ ದಿನ:  31-10-2024
ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ:  Short Url: www.b4s.in/pjvi/DASPL1

ಜಿಎಸ್‌ಕೆ ಸ್ಕಾಲರ್ಸ್ ಪ್ರೋಗ್ರಾಂ

ಜಿಎಸ್‌ಕೆ ಸ್ಕಾಲರ್ಸ್ ಪ್ರೋಗ್ರಾಂ  ಭಾರತದಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಮೊದಲ ವರ್ಷದ ಎಂಬಿಬಿಎಸ್ ಅಭ್ಯಾಸ ಮಾಡುತ್ತಿರುವಂಥ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಅರ್ಹ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.
ಅರ್ಹತೆ:  12ನೇ ತರಗತಿಯಲ್ಲಿ ಕನಿಷ್ಠ ಶೇ 65 ಅಂಕಗಳನ್ನು ಹೊಂದಿದ್ದ ಮೊದಲ-ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದಲೂ ₹6,00,000ಕ್ಕಿಂತ ಕಡಿಮೆ ಇರಬೇಕು.
ಆರ್ಥಿಕ ಸಹಾಯ:  ವಾರ್ಷಿಕ ₹ 1,00,000ದವರೆಗೆ.
ಅರ್ಜಿ ಸಲ್ಲಿಸಲು ಕೊನೆ ದಿನ:  18-11-2024
ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: Short Url: www.b4s.in/pjvi/GSKP4

ಕೋಟಕ್ ಕನ್ಯಾ

ಕೋಟಕ್ ಮಹೀಂದ್ರಾ ಗ್ರೂಪ್ 12ನೇ ತರಗತಿಯ ನಂತರ ವೃತ್ತಿಪರ ಶಿಕ್ಷಣ ಪಡೆಯಲು ಹಂಬಲಿಸುವ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ನೀಡಲಿದೆ.

ಅರ್ಹತೆ: ಭಾರತದಾದ್ಯಂತ ಇರುವ ಪ್ರತಿಭಾನ್ವಿತ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ 75 ಅಥವಾ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯವು

₹ 6,00,000ಕ್ಕಿಂತ ಕಡಿಮೆ ಇರಬೇಕು.

ಮಾನ್ಯತೆ ಪಡೆದ ಎನ್‌ಆರ್‌ಎಫ್/ ಎನ್‌ಎಎಸಿ ಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ 2024-25 ಶೈಕ್ಷಣಿಕ ವರ್ಷದಲ್ಲಿ ಎಂಜಿನಿಯರಿಂಗ್, ಎಂಬಿಬಿಎಸ್, ಬಿಡಿಎಸ್, ಇಂಟಿಗ್ರೇಟೆಡ್ ಎಲ್‌ಎಲ್‌ಬಿ (5 ವರ್ಷಗಳು), ಬಿ.ಎಸ್‌ಸಿ ನರ್ಸಿಂಗ್, ಬಿ.ಫಾರ್ಮಸಿ, ಇಂಟಿಗ್ರೇಟೆಡ್ ಬಿಎಸ್-ಎಂಎಸ್/ಬಿಎಸ್-ರಿಸರ್ಚ್ ಇನ್ ಐಎಸ್‌ಇಆರ್‌, ಐಐಎಸ್‌ಸಿ (ಬೆಂಗಳೂರು) ಅಥವಾ (ಡಿಸೈನ್, ಆರ್ಕಿಟೆಕ್ಚರ್, ಇತ್ಯಾದಿ) ಇತರ ವೃತ್ತಿಪರ ಕೋರ್ಸ್‌ಗಳ ಮೊದಲ ವರ್ಷಕ್ಕೆ ಪ್ರವೇಶ ಪಡೆದಿರಬೇಕು. ‌

ಆರ್ಥಿಕ ಸಹಾಯ: ವರ್ಷಕ್ಕೆ ₹1.5 ಲಕ್ಷ

ಅರ್ಜಿ ಸಲ್ಲಿಸಲು ಕೊನೆ ದಿನ: 31-10-2024

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: Short Url: www.b4s.in/praja/KKGS3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.