ADVERTISEMENT

ಬರಹಗಾರರಿಗೆ ಸೋನಿ ಮತ್ತು ಗೀತಾ ಮೆಹ್ತಾ ಸ್ಕಾಲರ್‌ಶಿಪ್ 2024

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 15:05 IST
Last Updated 7 ಏಪ್ರಿಲ್ 2024, 15:05 IST
<div class="paragraphs"><p> ಸ್ಕಾಲರ್‌ಶಿಪ್</p></div>

ಸ್ಕಾಲರ್‌ಶಿಪ್

   

ವಿವರ:  ಭಾರತ, ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾದ ಮಹತ್ವಾಕಾಂಕ್ಷಿ ಬರಹಗಾರರನ್ನು ಸಾಹಿತ್ಯ, ನಾಟಕ ಸೇರಿ ವಿವಿಧ ಸೃಜನಾತ್ಮಕ ಪ್ರಕಾರದ ಬರವಣಿಗೆಯ ಬಗ್ಗೆ ಅಧ್ಯಯನ ನಡೆಸಲು ಈಸ್ಟ್‌ ಆಂಗ್ಲಿಯಾ ವಿಶ್ವವಿದ್ಯಾಲಯ ನೀಡುವ ಅವಕಾಶವಾಗಿದೆ. 

ಅರ್ಹತೆ: ಅತ್ಯುತ್ತಮ ಬರವಣಿಗೆ ಸಾಮರ್ಥ್ಯವನ್ನು ಪ್ರದರ್ಶಿಸಲು ಬರಹಗಾರರಿಗೆ ಮುಕ್ತವಾಗಿದೆ. 

ADVERTISEMENT

ಆರ್ಥಿಕ ಸಹಾಯ: ₹28,500 ಬೋಧನಾ ಶುಲ್ಕ ಮತ್ತು ನಿರ್ವಹಣೆ ಶುಲ್ಕ
ಅರ್ಜಿ ಸಲ್ಲಿಸಲು ಕೊನೆ ದಿನ:  01-05-2024
ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ:  www.b4s.in/praja/SOIS6

---------

ಐಸಿಆರ್‌ಒ ಅಮೃತ್ ಇಂಟರ್ನ್‌ಶಿಪ್ ಪ್ರೋಗ್ರಾಂ

ವಿವರ: 12ನೇ ತರಗತಿ ಪಾಸಾಗಿರುವವರು, ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು, ಪದವೀಧರರು ಮತ್ತು ಡಿಪ್ಲೊಮಾ ಪದವೀಧರರಿಗಾಗಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಉಪಕ್ರಮವಾಗಿದೆ.

ಅರ್ಹತೆ: 18 ರಿಂದ 45 ವರ್ಷ ವಯಸ್ಸಿನೊಳಗಿನ ಭಾರತೀಯ ಪ್ರಜೆಗಳಿಗೆ ಮುಕ್ತವಾಗಿದೆ. ಅರ್ಜಿದಾರರು 12ನೇ ತರಗತಿ,  ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು, ಪದವೀಧರರು ಅಥವಾ ಡಿಪ್ಲೊಮಾ ಪದವೀಧರರಾಗಿರಬೇಕು.
ಆರ್ಥಿಕ ಸಹಾಯ:  ₹6,000ದ ಮಾಸಿಕ ಸ್ಟೈಪಂಡ್ ಮತ್ತು ಪೂರ್ಣಗೊಳಿಸಿದಕ್ಕಾಗಿ ಪ್ರಮಾಣಪತ್ರ.
ಅರ್ಜಿ ಸಲ್ಲಿಸಲು ಕೊನೆ ದಿನ:  01-10-2024
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ:  www.b4s.in/praja/ICRA1


 
ಡೈರೆಕ್ಟರೇಟ್ ಜನರಲ್ ಆಫ್ ಟ್ರೇಡ್ ರೆಮಿಡೀಸ್ (ಡಿಜಿಟಿಆರ್) ಇಂಟರ್ನ್‌ಶಿಪ್  

ವಿವರ:  ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಸ್ನಾತಕೋತ್ತರ ವಿದ್ಯಾರ್ಥಿಗಳು/ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುವ ಅವಕಾಶವಾಗಿದೆ

ಅರ್ಹತೆ:  ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು/ಸಂಸ್ಥೆಗಳ ಸ್ನಾತಕೋತ್ತರ ವಿದ್ಯಾರ್ಥಿಗಳು/ಸಂಶೋಧನಾ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ.
ನೆರವು:  ಪೂರ್ಣಗೊಂಡ ಪ್ರಮಾಣಪತ್ರ
ಅರ್ಜಿ ಸಲ್ಲಿಸಲು ಕೊನೆ ದಿನ: ವರ್ಷಪೂರ್ತಿ
ಅರ್ಜಿ ಸಲ್ಲಿಸುವ ವಿಧಾನ: ಇ-ಮೇಲ್ ಅಥವಾ ಅಂಚೆಯ ಮೂಲಕ ‌

ಹೆಚ್ಚಿನ ಮಾಹಿತಿಗೆ: www.b4s.in/praja/DGCI1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.