ಮಂಗಳೂರು: ಎಸ್ಎಸ್ಎಲ್‌ಸಿ ಪರೀಕ್ಷೆಗಳು ಇದೇ 25ರಿಂದ ಆರಂಭವಾಗಲಿದ್ದು, ಜಿಲ್ಲೆಗೆ ಸಂಬಂಧಿಸಿದ ಮಕ್ಕಳು ಮತ್ತು ಪೋಷಕರು ಪರೀಕ್ಷೆಯ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪರೀಕ್ಷಾ ಸಹಾಯವಾಣಿ ಪ್ರಾರಂಭಿಸಲಾಗಿದೆ.
ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ, ಪ್ರತಿದಿನ ಕಚೇರಿ ಸಮಯದಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 5.30ರವರೆಗೆ ಎಸ್ಎಸ್ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಸಂದೇಹಗಳಿದ್ದಲ್ಲಿ ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ಈ ಸಹಾಯವಾಣಿಗಳು ಇದೇ 8ರಿಂದ ಆರಂಭವಾಗಲಿವೆ.
ಸಹಾಯವಾಣಿಯ ವಿವರ
ಸಹಾಯವಾಣಿ; ಸ್ಥಿರ ದೂರವಾಣಿ; ಮೊಬೈಲ್
ಜಿಲ್ಲಾ ಕೇಂದ್ರ; 180042511017; 9845651353
ಬಂಟ್ವಾಳ; 08255-232579; 9449020453
ಬೆಳ್ತಂಗಡಿ; 08256-232004; 9008763829
ಮಂ.ಉತ್ತರ; 0824-2423627; 9449946810
ಮಂ.ದಕ್ಷಿಣ; 0824-2451250; 9740028090
ಮೂಡುಬಿದಿರೆ; 08258-236461; 948315753
ಪುತ್ತೂರು; 08251-230827; 7619564178
ಸುಳ್ಯ; 08257-230419; 9481720143
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.