ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಿದ್ಧತೆಗೆ ಹಲವು ಆ್ಯಪ್‌ಗಳು

ಕುಬೇರ ನೀರ್ಥಡಿ
Published 30 ಜನವರಿ 2020, 7:51 IST
Last Updated 30 ಜನವರಿ 2020, 7:51 IST
   

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಈಗಾಗಲೇ ಹೊರಬಿದ್ದಿದೆ. ವಿದ್ಯಾರ್ಥಿ ಜೀವನದಲ್ಲಿ ಈ ಪರೀಕ್ಷೆಯು ಒಂದು ಪ್ರಮುಖ ಘಟ್ಟವಾಗಿದ್ದು, ಹೆಚ್ಚಿನ ಅಂಕ ಪಡೆಯಲು ವಿದ್ಯಾರ್ಥಿಗಳು ಹಗಲಿರುಳು ಶ್ರಮಿಸುತ್ತಾರೆ.

ವಿದ್ಯಾರ್ಥಿಗಳು ನಿರಂತರ ಓದು, ಪುನರ್‌ಮನನ, ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಳ್ಳುವ ಬಗೆ, ಉತ್ತರಿಸುವ ವಿಧಾನ ಹೇಗೆ ಎಂಬುದನ್ನು ಕಲಿಯಬೇಕು. ಶಿಸ್ತುಬದ್ಧವಾದ ಓದು ಮತ್ತು ಅಭ್ಯಾಸದಿಂದ ಎಂಥ ಪರೀಕ್ಷೆಯನ್ನಾದರೂ ಸುಲಭವಾಗಿ ಎದುರಿಸಬಹುದು. ಇದಕ್ಕೆ ಪೂರಕವಾಗಿ ಕೆಲವು ಉಪಯುಕ್ತ ಕಿರುತಂತ್ರಾಂಶಗಳು ಲಭ್ಯವಿದೆ. ಇವು ಪರೀಕ್ಷಾ ತಯಾರಿಗೆ ಉತ್ತಮ ರೀತಿಯಲ್ಲಿ ನೆರವಾಗುತ್ತವೆ.

10ನೇ ತರಗತಿಯ ಪಠ್ಯಕ್ರಮಕ್ಕೆ ಸಂಬಂಧಿಸಿದ ಕಲಿಕಾ ಪಠ್ಯಗಳು, ಬೋಧನಾ ವಿಡಿಯೋಗಳು, ಪ್ರಶ್ನೋತ್ತರಗಳು, ಪ್ರಶ್ನೆಪತ್ರಿಕೆಗಳು, ಪರಿಕ್ಷಾ ಮಾರ್ಗಸೂಚಿಗಳಿರುವ ಆ್ಯಪ್‌ಗಳನ್ನು ನೋಡೋಣ. ಇವೆಲ್ಲವೂ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ.

ADVERTISEMENT

SSLC TOPPER 2020 - Karnataka State | Study Guide: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಲು ನೆರವಾಗುವ ಆ್ಯಪ್. ಹೆಚ್ಚಿನ ಅಂಕ ಗಳಿಕೆಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಅಳವಡಿಸಿದ್ದಾರೆ. ಇದೊಂದು ಅಧ್ಯಯನ ಮಾರ್ಗದರ್ಶಿ ಆಗಿದ್ದು, ಪಠ್ಯಕ್ರಮ, ಮಾದರಿ ಪ್ರಶ್ನೆಪತ್ರಿಕೆಗಳು, ಪುನರಾವರ್ತನೆಯ ನೋಟ್ಸ್‌ಗಳು, ಪಠ್ಯಗಳು, ಹಳೆಯ ಪ್ರಶ್ನೆ ಪತ್ರಿಕೆ, ಪ್ರಶ್ನೋತ್ತರಗಳು, ಕಲಿಕಾ ನೀಲಿನಕ್ಷೆಯನ್ನು ಒಳಗೊಂಡಿದೆ. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಲಭ್ಯವಿದೆ. ಇದನ್ನು Manzil Media Developers ಎಂಬ ಕಂಪನಿ ರಚಿಸಿದೆ.

Sslc question papers karnataka: ಕರ್ನಾಟಕ ಪರೀಕ್ಷಾ ಮಂಡಳಿ ನಡೆಸುವ ಹತ್ತನೇ ತರಗತಿಯ ಹಳೆಯ ಮತ್ತು ಇತ್ತೀಚಿನ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡ ಆ್ಯಪ್. ಎಸ್ಸೆಸ್ಸೆಲ್ಸಿ ತರಗತಿಯ ಎಲ್ಲಾ ವಿಷಯಗಳ ಮೇಲಿನ ಪ್ರಶ್ನೆಪತ್ರಿಕೆಗಳನ್ನು, ಹಳೆಯ ಪಠ್ಯಕ್ರಮದ ಪ್ರಶ್ನೆಪತ್ರಿಕೆಗಳು, ಕಳೆದ ವರ್ಷದ ಪ್ರಶ್ನೆಪತ್ರಿಕೆ, ಕಳೆದ ಹತ್ತು ವರ್ಷಗಳ ಪ್ರಶ್ನೆಪತ್ರಿಕೆಗಳು, ಟಿಪ್ಪಣಿಗಳನ್ನು ಅಳವಡಿಸಿದ್ದಾರೆ. Technical studio ಎಂಬ ಕಂಪನಿಯ ಆ್ಯಪ್.

Excel for SSLC (Karnataka): ಎಲ್ಲಾ ವಿಷಯಗಳ ಮೇಲೆ ಬಹುಆಯ್ಕೆಯ ಪ್ರಶ್ನೆಗಳು, ಅಧ್ಯಾಯವಾರು ಪ್ರಶ್ನೆಗಳು, ವಿಜ್ಞಾನ ವಿಷಯದಲ್ಲಿನ ಎಲ್ಲಾ ಪಾಠಗಳಿಗೆ ಸಂಬಂಧಿಸಿದ ಸುಮಾರು 1,500 ಪ್ರಶ್ನೆಗಳು, ಅಭ್ಯಾಸ ಪ್ರಶ್ನೆಪತ್ರಿಕೆ, ಮಾದರಿ ಪ್ರಶ್ನೆಪತ್ರಿಕೆ, ಪೂರ್ವಭಾವಿ ಪರೀಕ್ಷೆಗೆ ಪಶ್ನೆಗಳು ಮತ್ತು ಕಳೆದ ಸಲದ ಪ್ರಶ್ನೆಪತ್ರಿಕೆಗಳನ್ನು ಅಳವಡಿಸಿದ್ದಾರೆ. ಅಭ್ಯಾಸ ಕಲಿಕೆಯನ್ನು ಪರಿಷ್ಕರಿಸಿಕೊಳ್ಳಲು ನೆರವಾಗುತ್ತದೆ.Rao's Tutorial Institute ಎಂಬ ಸಂಸ್ಥೆ ರಚಿಸಿದೆ.

SSLC Papers Karnataka: 2013ರಿಂದ 2019ರವರೆಗಿನ ಭಾಷಾ ವಿಷಯಗಳು, ಸಮಾಜ ವಿಜ್ಞಾನ, ಗಣಿತ ಮತ್ತು ವಿಜ್ಞಾನ ವಿಷಯಗಳ ಮೇಲೆ ಪ್ರಶ್ನೆಪತ್ರಿಕೆಗಳನ್ನು ಅಳವಡಿಸಿದ್ದಾರೆ. ಜೊತೆಗೆ ಈ ಎಲ್ಲಾ ವಿಷಯಗಳ ಮೇಲೆ ಮಾದರಿ ಪ್ರಶ್ನೆಪತ್ರಿಕೆಗಳನ್ನು ಅಳವಡಿಸಿದ್ದಾರೆ. ಇವುಗಳನ್ನು ಡೌನ್‌ ಲೋಡ್ ಮಾಡಿಕೊಳ್ಳಬಹುದು ಹಾಗೂ ಆಫ್ ಲೈನ್‌ ನಲ್ಲಿ ಬಳಸುವಂತೆ ರಚಿಸಲಾಗಿದೆ. BOOKS N SOLUTIONS ಎಂಬ ಸಂಸ್ಥೆ ರಚಿಸಿದ ಆ್ಯಪ್.

SSLC Question Papers Karnataka: ಹಳೆಯ ಪ್ರಶ್ನೆಪತ್ರಿಕೆಗಳ ಸಂಗ್ರಹವಿದು. 2015ರಿಂದ ಕಳೆದ ವರ್ಷದವರೆಗಿನ ಪ್ರಶ್ನೆಪತ್ರಿಕೆಗಳನ್ನು ನೋಡಬಹುದು. ಎಲ್ಲ ವಿಷಯಗಳ ಮೇಲೆ ಹಳೆ ಮಾದರಿಯ ಪ್ರಶ್ನೆಗಳು ಮತ್ತು ಹೊಸ ಪಠ್ಯಕ್ರಮದ ಮೇಲಿನ ಪ್ರಶ್ನೆಗಳನ್ನು ನೋಡಬಹುದು.Sigma Studio Corp ಎಂಬ ಕಂಪನಿ ರಚಿಸಿದ ಆ್ಯಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.