ಐಎಎಸ್, ಕೆಎಎಸ್, ಕೆಪಿಎಸ್‌ಸಿ ಸೇರಿದಂತೆ ವಿವಿಧ ಹುದ್ದೆಗಳಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.
----------
1) ಸಿಕಲ್ ಸೆಲ್ ಅನೀಮಿಯಾ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
ಎ. ಕುಡಗೋಲು ಆಕಾರದ ಜೀವಕೋಶದ ರಕ್ತಹೀನತೆಯು ಕುಡಗೋಲು ಕಣ ಕಾಯಿಲೆಯ ಆನುವಂಶಿಕ ಅಸ್ವಸ್ಥತೆಗಳ ಗುಂಪಿನಲ್ಲಿ ಒಂದಾಗಿದೆ.
ಬಿ. ಇದು ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ವನ್ನು ಸಾಗಿಸುವ ಕೆಂಪು ರಕ್ತ ಕಣಗಳ ಆಕಾರದ ಮೇಲೆ ಪರಿಣಾಮ ಬೀರುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ?
1) ಎ ಮಾತ್ರ 2) ಬಿ ಮಾತ್ರ
3) ಎ ಮತ್ತು ಬಿ ಎರಡೂ ಸರಿ
4) ಎ ಅಥವಾ ಬಿ ಅಲ್ಲ
⇒ಉತ್ತರ: 3
2) ಮಿನರಲ್ಸ್ ಸೆಕ್ಯುರಿಟಿ ಪಾಲುದಾರಿಕೆ (MSP) ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
ಎ. ಇದು ಅಭಿವೃದ್ಧಿ ಹೊಂದಿದ ದೇಶಗಳ ಪ್ರಾಬಲ್ಯ ಹೊಂದಿರುವ ಅಮೆರಿಕ ನೇತೃತ್ವದ ಒಕ್ಕೂಟವಾಗಿದೆ.
ಬಿ. ನಿರ್ಣಾಯಕ ಖನಿಜಗಳನ್ನು ಸಂಗ್ರಹಿಸಲು ಚೀನಾದ ಮೇಲೆ ಜಾಗತಿಕ ಅವಲಂಬನೆಯನ್ನು ಕಡಿಮೆ ಮಾಡುವುದು ಈ ಪಾಲುದಾರಿಕೆಯ ಪ್ರಮುಖ ಗುರಿಯಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
1) ಎ ಮಾತ್ರ 2) ಬಿ ಮಾತ್ರ
3) ಎ ಮತ್ತು ಬಿ ಎರಡೂ ಸರಿ
4) ಎ ಅಥವಾ ಬಿ ಅಲ್ಲ
ಉತ್ತರ:3
3) ಈ ಕೆಳಗಿನವುಗಳಲ್ಲಿ ಯಾವುದು ಮಿನರಲ್ಸ್ ಸೆಕ್ಯುರಿಟಿ ಪಾಲುದಾರಿಕೆಯ (MSP) ಉದ್ದೇಶಗಳಾಗಿವೆ ?
ಎ. ಪಾಲುದಾರ ರಾಷ್ಟ್ರಗಳ ನಡುವೆ ಮಾಹಿತಿ ಹಂಚಿಕೆಯನ್ನು ಬಲಪಡಿಸುವುದು
ಬಿ. ಸುರಕ್ಷಿತ ನಿರ್ಣಾಯಕ ಖನಿಜಗಳ ಪೂರೈಕೆ ಸರಪಳಿಗಳಲ್ಲಿ ಹೆಚ್ಚಿದ ಹೂಡಿಕೆ
ಸಿ. ಮರುಬಳಕೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು
ಕೆಳಗಿನ ಕೋಡ್ ಬಳಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿ.
1) ಎ ಮತ್ತು ಬಿ ಮಾತ್ರ 2) ಬಿ ಮತ್ತು ಸಿ ಮಾತ್ರ
3) ಎ ಮತ್ತು ಸಿ ಮಾತ್ರ 4) ಎ, ಬಿ ಮತ್ತು ಸಿ
ಉತ್ತರ: 4
4) ಇತ್ತೀಚೆಗೆ ಪ್ರಸ್ತಾಪದಲ್ಲಿರುವ ‘ನಾರಿ ಅದಾಲತ್’ ವ್ಯವಸ್ಥೆಯಲ್ಲಿ ಯಾವ ಸ್ವರೂಪದ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ?
1. ಆಸ್ತಿಯ ಹಕ್ಕುಗಳು
2. ಕೌಟುಂಬಿಕ ಹಿಂಸಾಚಾರ
3. ಮಹಿಳೆಯರ ಸಾಮಾಜಿಕ ಸ್ಥಾನಮಾನ ಹೆಚ್ಚಿಸುವುದು.
4. ಮಹಿಳೆಯರ ಉದ್ಯೋಗ ಸೃಷ್ಟಿ
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ
ಎ. 1 ಮತ್ತು 2 ಬಿ. 2 ಮತ್ತು 3
ಸಿ. 1 ಮತ್ತು 4 ಡಿ. 3 ಮತ್ತು 4
ಉತ್ತರ : ಎ
5. ಪ್ರಾಥಮಿಕ ಹಂತದಲ್ಲಿ ‘ನಾರಿ ಅದಾಲತ್‘ ವ್ಯವಸ್ಥೆಯನ್ನು ಕೆಳಗಿನ ಯಾವ ರಾಜ್ಯಗಳಲ್ಲಿ ಸ್ಥಾಪಿಸಲು ಸರ್ಕಾರ ಚಿಂತಿಸಿದೆ?
1. ಅಸ್ಸಾಂ 2. ಮಣಿಪುರ
3. ಜಮ್ಮು ಮತ್ತು ಕಾಶ್ಮೀರ 4. ಮೇಘಾಲಯ
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ
ಎ. 1 ಮತ್ತು 2 ಬಿ. 1 ಮತ್ತು 3
ಸಿ. 2 ಮತ್ತು 3 ಡಿ. 2 ಮತ್ತು 4.
ಉತ್ತರ : ಬಿ
6. ಇತ್ತೀಚೆಗೆ ಚೀನಾ ಕೆಳಗಿನ ಯಾವ ಪ್ರಮುಖ ಖನಿಜಗಳ ರಫ್ತಿನ ಮೇಲೆ ನಿಯಂತ್ರಣ ಹೇರಿದೆ?
1. ಗ್ಯಾಲಿಯಮ್ 2. ಜರ್ಮೇನಿಯಂ
3. ಇಂಡಿಎಂ 4. ಸಿಲಿಕಾನ್
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ
ಎ. 1 ಮತ್ತು 2 ಬಿ. 1 ಮತ್ತು 3
ಸಿ. 2 ಮತ್ತು 3 ಡಿ. 3 ಮತ್ತು 4
ಉತ್ತರ : ಎ
7. ಚೀನಾ ಸರ್ಕಾರ ವಿಧಿಸಿರುವ ರಫ್ತಿನ ನಿಯಂತ್ರಣಗಳಿಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳನ್ನು ಗುರುತಿಸಿ
1. ಚೀನಾದ ರಫ್ತುದಾರರು ಚೀನಾ ಸರ್ಕಾರದಿಂದ ವಿಶೇಷ ಪರವಾನಗಿಯನ್ನು ಪಡೆದುಕೊಳ್ಳತಕ್ಕದ್ದು.
2. ರಫ್ತುದಾರರು, ಆಮದುದಾರರು ಸಂಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸುವುದು ಕಡ್ಡಾಯ.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ
ಎ. 1 ಮಾತ್ರ ಸರಿ ಬಿ. 2 ಮಾತ್ರ ಸರಿ
ಸಿ. 1 ಮತ್ತು 2 ಸರಿ
ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.
ಉತ್ತರ : ಸಿ
8. ಇತ್ತೀಚೆಗೆ ಭಾರತದ ರಕ್ಷಣಾ ಸ್ವಾಧೀನ ಮಂಡಳಿ ಕೆಳಗಿನ ಯಾವುದನ್ನು ಖರೀದಿಸಲು ಮತ್ತು ಭಾರತದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ?
1. ರಫೆಲ್-ಎಂ ಯುದ್ಧ ವಿಮಾನಗಳು
2. ಸ್ಕಾರ್ಪಿನ್ ವರ್ಗದ ಜಲಂತರ್ಗಾಮಿಗಳು
3. ನೌಕಾಪಡೆಯಲ್ಲಿ ಬಳಕೆಯಾಗುವ ಗಸ್ತು ತಿರುಗುವ ವಾಹನಗಳು
4. ನಾಗರಿಕ ವಿಮಾನಗಳು
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ
ಎ. 1 ಮತ್ತು 2 ಬಿ. 1 ಮತ್ತು 3
ಸಿ. 2 ಮತ್ತು 3 ಡಿ. 3 ಮತ್ತು 4.
ಉತ್ತರ : ಎ
9.ಕೆಳಗಿನ ಯಾವ ಹಡಗು ನಿರ್ಮಾಣ ಕೇಂದ್ರ ಪ್ರಾಜೆಕ್ಟ್-75 ಅನ್ನು ಅನುಷ್ಠಾನಗೊಳಿಸುತ್ತಿದೆ?
ಎ. ಕೊಚ್ಚಿನ್ ಬಿ. ಮಡಗಾವ್
ಸಿ. ವಿಶಾಖಪಟ್ಟಣ ಡಿ. ಮಂಗಳೂರು
ಉತ್ತರ : ಬಿ
10. ಇತ್ತೀಚಿಗೆ ಯಾವ ಪಾಶ್ಚಿಮಾತ್ಯ ರಾಷ್ಟ್ರ ವಸಾಹತುಶಾಹಿ ಆಡಳಿತದ ಸಂದರ್ಭದಲ್ಲಿ ಪಡೆದುಕೊಂಡಿದ್ದ ಕಲಾಕೃತಿಗಳನ್ನು ಹಿಂದಿರುಗಿಸಲು ಅನುಮೋದಿಸಿದೆ?
ಎ. ನೆದರ್ಲ್ಯಾಂಡ್ಸ್ ಬಿ. ಸ್ಪೇನ್
ಸಿ. ಪೋರ್ಚುಗಲ್ ಡಿ. ಇಟಲಿ.
ಉತ್ತರ : ಎ
11. ವಿಶ್ವದಲ್ಲಿ ಕೋಬಾಲ್ಟ್‌ನ ಪ್ರಮುಖ ಉತ್ಪಾದಕ ದೇಶ ಯಾವುದು?
1) ಆಸ್ಟ್ರೇಲಿಯಾ
2) ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯ
3) ಚೀನಾ 4) ಬ್ರೆಜಿಲ್
ಉತ್ತರ: 2
11. ವಿಶ್ವದಲ್ಲಿ ಕೋಬಾಲ್ಟ್‌ನ ಪ್ರಮುಖ ಉತ್ಪಾದಕ ದೇಶ ಯಾವುದು?
1) ಆಸ್ಟ್ರೇಲಿಯಾ
2) ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯ
3) ಚೀನಾ 4) ಬ್ರೆಜಿಲ್
ಉತ್ತರ: 2
12. ಇತ್ತೀಚಿಗೆ ‘ಭಾರತ್’ (BHART) ಎಂಬ ಅಭಿಯಾನವನ್ನು ಕೆಳಗಿನ ಯಾವ ಉದ್ದೇಶಗಳಿಗಾಗಿ ಪ್ರಾರಂಭಿಸಲಾಗಿದೆ?
ಎ. ಕೃಷಿಮೂಲ ಸೌಕರ್ಯ ನಿಧಿಯ ಹಣ ಸಂಗ್ರಹಣೆಗಾಗಿ.
ಬಿ. ರೈತ ಸಮುದಾಯದಲ್ಲಿ ಸಹಕಾರಿ ಸಂಘಗಳ ಉಪಯುಕ್ತತೆಯ ಬಗ್ಗೆ ಅರಿವು ಮೂಡಿಸಲು.
ಸಿ. ಕೃಷಿ ವಲಯದಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆಸಲು ಉತ್ತೇಜನ ನೀಡಲು.
ಡಿ. ಕಟಾವಿನ ನಂತರದ ಕೃಷಿ ಉತ್ಪನ್ನಗಳ ನಿರ್ವಹಣೆ ಸಂಬಂಧಿತ ಅಭಿಯಾನ.
ಉತ್ತರ : ಎ
(ವಿವರಣೆ: ಭಾರತ್(BHARAT)ನ ವಿಸ್ತೃತ ರೂಪ – Banks Heralding Accelerated Rural & Agriculture Transformation)
13. ಇತ್ತೀಚೆಗೆ ಭಾರತದ ಮುಖ್ಯ ಚುನಾವಣಾ ಆಯುಕ್ತರು ಕೆಳಗಿನ ಯಾವ ಸಮಾವೇಶದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು?
ಎ. ಅಂತರರಾಷ್ಟ್ರೀಯ ಚುನಾವಣಾ ಒಕ್ಕೂಟ
ಬಿ. ವಿಶ್ವ ಚುನಾವಣಾ ಆಯೋಗಗಳ ಸಂಘಟನೆ.
ಸಿ. ದಕ್ಷಿಣ ಏಷ್ಯಾ ಚುನಾವಣಾ ಆಯೋಗಗಳ ಸಂಘಟನೆ.
ಡಿ. ಏಷ್ಯಾ ಚುನಾವಣಾ ಆಯೋಗದ ಸಂಘಟನೆ.
ಉತ್ತರ : ಬಿ
(ವಿವರಣೆ: ವಿವಿಧ ರಾಷ್ಟ್ರಗಳಲ್ಲಿರುವ ಚುನಾವಣಾ ನಿರ್ವಹಣೆಗೆ ಸಂಬಂಧಿಸಿದ ಉತ್ತಮ ಅಂಶಗಳು ಮತ್ತು ಆಚರಣೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದಕ್ಕಾಗಿ ಆಯೋಜಿಸಿದ್ದ ವಿಶ್ವ ಚುನಾವಣಾ ಆಯೋಗಗಳ ಸಂಘಟನೆಯ ಸಮಾವೇಶ ಇದು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.