ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್‌ಷಿಪ್
ಟಾಟಾ ಕ್ಯಾಪಿಟಲ್ ಲಿಮಿಟೆಡ್‌ನ ಉಪಕ್ರಮವಾಗಿದ್ದು, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ನೆರವು ನೀಡಲಿದೆ.
ಅರ್ಹತೆ: ಪ್ರಸ್ತುತ 11, 12ನೇ ತರಗತಿಗಳಲ್ಲಿರುವ, ಸಾಮಾನ್ಯ ಗ್ರಾಜುಯೇಶನ್ (ಬಿ.ಕಾಂ., ಬಿ.ಎಸ್‌ಸಿ, ಬಿಎ ಇತ್ಯಾದಿ), ಡಿಪ್ಲೊಮಾ ಮತ್ತು ಐಟಿಐ ಕೋರ್ಸ್‌ಗಳನ್ನು ಅಭ್ಯಾಸ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಅರ್ಜಿದಾರರು ತಮ್ಮ ಹಿಂದಿನ ತರಗತಿಯಲ್ಲಿ ಕನಿಷ್ಠ ಶೇ 60 ಅಂಕಗಳನ್ನು ಗಳಿಸಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹2.5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು.
ಆರ್ಥಿಕ ಸಹಾಯ: ₹10,000ದಿಂದ ರೂ.12,000ದ ವರೆಗಿನ ಮೊತ್ತ ಅಥವಾ ಕೋರ್ಸ್ ಶುಲ್ಕದ ಶೇ 80(ಯಾವುದು ಕಡಿಮೆಯೋ ಅದು).
ಅರ್ಜಿ ಸಲ್ಲಿಸಲು ಕೊನೆ ದಿನ: 15-10-2024
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: www.b4s.in/praja/TCPS27
ಸಂತೂರ್ ಸ್ಕಾಲರ್‌ಷಿಪ್
ಹಿಂದುಳಿದ ಹಿನ್ನೆಲೆಗೆ ಸೇರಿದ ಯುವತಿಯರಿಗೆ ನೆರವು ನೀಡಲಿದೆ.
ಅರ್ಹತೆ: ಹಿಂದುಳಿದ ಹಿನ್ನೆಲೆಗೆ ಸೇರಿದ ಯುವತಿಯರಿಗೆ ಲಭ್ಯವಿರುತ್ತದೆ. ಸ್ಥಳೀಯ ಸರ್ಕಾರಿ ಶಾಲೆಯಿಂದ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. 2023-24ರ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆ ಅಥವಾ ಜೂನಿಯರ್ ಕಾಲೇಜಿನಿಂದ 12ನೇ ತರಗತಿಯಲ್ಲಿ ಉತೀರ್ಣರಾಗಿರಬೇಕು. ಹ್ಯುಮಾನಿಟೀಸ್, ಲಿಬರಲ್ ಆರ್ಟ್ಸ್ ಅಂಡ್ ಸೈನ್ಸ್‌ನಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಅತ್ಯಂತ ಆಸಕ್ತರಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಆರ್ಥಿಕ ಸಹಾಯ: ₹ 24,000
ಅರ್ಜಿ ಸಲ್ಲಿಸಲು ಕೊನೆ ದಿನ: 15-10-2024
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಅರ್ಜಿಗಳು ಮಾತ್ರ! ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಬಡ್ಡಿ4ಸ್ಟಡಿಯಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ www.santoorscholarship.com ನಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.