ADVERTISEMENT

ಶಿಕ್ಷಣ | ಪರೀಕ್ಷೆ ಸಮಯದಲ್ಲಿ ಓದಿನ ರಜೆ ಹೀಗಿರಲಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 23:30 IST
Last Updated 4 ಫೆಬ್ರುವರಿ 2024, 23:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ, ಶಾಲಾ ಕಾಲೇಜುಗಳಲ್ಲಿ ಓದಿನ ರಜೆ ಘೋಷಿಸಲಾಗುತ್ತದೆ. ಈ ಓದಿನ ರಜೆಯಲ್ಲಿ ಸಮಯ ಪರಿಪಾಲಿಸದಿದ್ದಲ್ಲಿ ರಜೆಯ ಉದ್ದೇಶವೇ ಈಡೇರುವುದಿಲ್ಲ.

ಓದಿನ ರಜೆ ನಿಮಗೆ ಅರ್ಥವಾಗದ ಅಥವಾ ಕಠಿಣವೆನಿಸುವ ವಿಷಯಗಳನ್ನು ಮನನ ಮಾಡಿಕೊಳ್ಳಲು ನೀಡಲಾಗುತ್ತದೆ. ಇಂಥ ಸಂದರ್ಭದಲ್ಲಿ ಶಾಲಾ ಕಾಲೇಜುಗಳಿಗೆ ಹೋಗಿ, ಸಂಬಂಧಿಸಿದ ವಿಷಯಗಳ ಶಿಕ್ಷಕರೊಂದಿಗೆ ಸಮಾಲೋಚಿಸಿ. ಶಿಕ್ಷಕರ ಬಳಿ ಹೋಗುವ ಮೊದಲೇ ಕಠಿಣವೆನಿಸುವ ವಿಷಯಗಳನ್ನು ಪಟ್ಟಿ ಮಾಡಿಕೊಳ್ಳಿ ಗುಂಪು ಚರ್ಚೆ ಅಗತ್ಯವೆನಿಸಿದರೆ, ಸ್ನೇಹಿತರನ್ನೂ ಭೇಟಿಯಾಗಿ.

ಓದಿನ ರಜೆಯಲ್ಲಿ ಸಾಮಾನ್ಯವಾಗಿ ನಿದ್ದೆಗೆಟ್ಟು ಓದುವುದು, ಹಗಲಿಡೀ ಮಲಗುವುದು ಮಾಡಲಾಗುತ್ತದೆ. ಅದರ ಬದಲಿಗೆ ಸಮಯ ಪರಿಪಾಲನೆಯ ಶಿಸ್ತನ್ನು ಅಳವಡಿಸಿಕೊಂಡರೆ ಅನುಕೂಲ ಆಗುವುದು. ದೇಹದ ಜೈವಿಕ ಸಮಯವೂ ಅದಕ್ಕೇ ಹೊಂದಿಕೊಳ್ಳುವುದು. ಪರೀಕ್ಷಾ ಸಮಯದಲ್ಲಿ ನಿದ್ದೆ ಆವರಿಸದಂಥ ಅಭ್ಯಾಸದ ಸಮಯವನ್ನು ಯೋಜಿಸಿಕೊಳ್ಳಿ.

ADVERTISEMENT

ಓದಿನ ರಜೆಯ ಸಮಯದಲ್ಲಿ ಬೆಳಗ್ಗೆ ಮತ್ತು ಇಳಿಸಂಜೆಯಲ್ಲಿ ವಾಕ್‌ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಪರೀಕ್ಷಾ ಒತ್ತಡ ನಿರ್ವಹಣೆಗೆ ಸಹಾಯವಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನೆಯಿಂದ ಆಚೆ ಓದಲು ಹೋಗುವ ಅಭ್ಯಾಸವಿದ್ದವರು, ಸಾಕಷ್ಟು ನೀರನ್ನು ತೆಗೆದುಕೊಂಡು ಹೋಗುವುದು ಮರೆಯದಿರಿ. ಮತ್ತು ನಿಯಮಿತವಾಗಿ ನೀರು ಸೇವಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.