ಸಂವಿಧಾನ
1. ರಾಜ್ಯದ ಮುಖ್ಯಮಂತ್ರಿಗಳನ್ನು ಈ ಕೆಳಗಿನ ಯಾರು ನೇಮಕ ಮಾಡುತ್ತಾರೆ ?
ಎ) ಪ್ರಧಾನಿ
ಬಿ) ರಾಷ್ಟ್ರಪತಿ
ಸಿ) ರಾಜ್ಯಪಾಲ ಡಿ) ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು
ಉತ್ತರ : ಸಿ
2.ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ?
ಎ ) ರಾಜ್ಯ ಸರ್ಕಾರದ ಕಾರ್ಯಾಂಗೀಯ ಅಧಿಕಾರಗಳು ರಾಜ್ಯಪಾಲರ ಹೆಸರಿನಲ್ಲಿ ನಡೆಯುತ್ತವೆ.
ಬಿ ) ಆದರೆ ನೈಜ ಕಾರ್ಯಾಂಗ ಮಾತ್ರ ಮುಖ್ಯಮಂತ್ರಿಗಳೇ ಆಗಿರುತ್ತಾರೆ.
ಸಿ) ರಾಜ್ಯ ಸರ್ಕಾರದ ಸಾಂವಿಧಾನಿಕ ಮುಖ್ಯಸ್ಥರು ರಾಜ್ಯಪಾಲರಾಗಿರುತ್ತಾರೆ.
ಡಿ) ಆದರೆ ನೈಜ ಮುಖ್ಯಸ್ಥರು ಮುಖ್ಯಮಂತ್ರಿಗಳೇ ಆಗಿರುತ್ತಾರೆ.
1) ಹೇಳಿಕೆ ಎ,ಬಿ ಸರಿಯಾಗಿದೆ ಆದರೆ ಸಿ,ಡಿ ತಪ್ಪಾಗಿದೆ
2 )ಹೇಳಿಕೆ ಎ,ಬಿ, ಸಿ ಸರಿಯಾಗಿದೆ ಆದರೆ ಡಿ ತಪ್ಪಾಗಿದೆ.
3 )ಎಲ್ಲಾ ಹೇಳಿಕೆಗಳು ತಪ್ಪಾಗಿವೆ.
4 ) ಎಲ್ಲಾ ಹೇಳಿಕೆಗಳು ಸರಿಯಾಗಿದೆ.
ಉತ್ತರ : 4
3. ಭಾರತದ ಸರ್ವೋಚ್ಛ ನ್ಯಾಯಾಲಯವು ಪ್ರಥಮವಾಗಿ ಎಲ್ಲಿ ಸ್ಥಾಪಿತವಾಯಿತು ?
ಎ ) ದೆಹಲಿ ಬಿ )ಕೋಲ್ಕತ್ತಾ
ಸಿ )ಮದ್ರಾಸ್ ಡಿ ) ಉತ್ತರಾಖಂಡ್
ಉತ್ತರ : ಬಿ
4. ಬಂಗಾಳದ ಮೊದಲ ಗವರ್ನರ್ ಜನರಲ್ ಯಾರಾಗಿದ್ದರು ?
ಎ ) ವಾರನ್ ಹೇಸ್ಟಿಂಗ್ಸ್
ಬಿ ) ಲಾರ್ಡ್ ಮೆಕಾಲೆ
ಸಿ ) ರಾಬರ್ಟ್ ಕ್ಲೈವ್
ಡಿ ) ಲಾರ್ಡ್ ವಿಲಿಯಂ ಬೆಂಟಿಂಕ್
ಉತ್ತರ : ಎ
5 .ಈ ಕೆಳಗಿನ ಯಾವ ಕಾಯ್ದೆಯ ಮೂಲಕ ಭಾರತದಲ್ಲಿದ್ದ ಈಸ್ಟ್ ಇಂಡಿಯಾ ಕಂಪನಿಯ ಭೂಪ್ರದೇಶಗಳನ್ನು ಪ್ರಪ್ರಥಮವಾಗಿ ಬ್ರಿಟಿಷ್ ಸ್ವಾಮ್ಯಕ್ಕೆ ಒಳಪಟ್ಟ ಪ್ರದೇಶಗಳೆಂದು ಕರೆಯಲಾಯಿತು ?
ಎ ) ರೆಗ್ಯುಲೇಟಿಂಗ್ ಕಾಯ್ದೆ 1773
ಬಿ ) ಪಿಟ್ಸ್ ಇಂಡಿಯಾ ಕಾಯ್ದೆ 1784
ಸಿ) ಮಿಂಟೋ ಮಾರ್ಲೆ ಕಾಯಿದೆ 1919
ಡಿ ) 1857 ರ ಭಾರತ ಸರಕಾರದ ಶಾಸನ
ಉತ್ತರ: ಬಿ
6. ಈ ಕೆಳಗಿನ ಯಾವ ಕಾಯ್ದೆಯ ಮೂಲಕ ಬ್ರಿಟಿಷ್ ಸರಕಾರವು ಪ್ರಪ್ರಥಮ ಬಾರಿಗೆ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ
ವ್ಯವಹಾರಗಳನ್ನು ನಿಯಂತ್ರಿಸಲು ಆರಂಭಿಸಿತು?
ಎ) ಮಿಂಟೋ ಮಾರ್ಲೆ ಕಾಯಿದೆ 1919
ಬಿ) ರೆಗ್ಯುಲೇಟಿಂಗ್ ಕಾಯ್ದೆ 1773
ಸಿ ) ಪಿಟ್ಸ್ ಇಂಡಿಯಾ ಕಾಯ್ದೆ 1784
ಡಿ ) 1853ರ ಭಾರತ ಸರ್ಕಾರದ ಶಾಸನ
ಉತ್ತರ :ಬಿ
7. ಸರಕಾರಿ ಸೇವೆಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜಾರಿಗೆ ತಂದ ಶಾಸನ ಯಾವುದು ?
ಎ) ಚಾರ್ಟರ್ ಕಾಯಿದೆ 1853
ಬಿ) ರೆಗ್ಯುಲೇಟಿಂಗ್ ಕಾಯಿದೆ 1773
ಸಿ )ಮಿಂಟೋ ಮಾರ್ಲೆ ಶಾಸನ 1919
ಡಿ ) 1935ರ ಭಾರತ ಸರ್ಕಾರದ ಕಾಯ್ದೆ
ಉತ್ತರ:ಎ
8. ಈ ಕೆಳಗಿನ ಯಾವ ಕಾಯ್ದೆ ಮೂಲಕ ಭಾರತದಲ್ಲಿ ಚುನಾವಣಾ ಪದ್ಧತಿಯ ಆರಂಭಕ್ಕೆ ನಾಂದಿ ಹಾಡಲಾಯಿತು ?
ಎ. ಭಾರತ ಸರ್ಕಾರ ಕಾಯ್ದೆ 1858
ಬಿ. ಭಾರತದ ಕೌನ್ಸಿಲ್ ಕಾಯ್ದೆ1861
ಸಿ. ಭಾರತದ ಕೌನ್ಸಿಲ್ ಕಾಯ್ದೆ 1892
ಡಿ. ಭಾರತದ ಕೌನ್ಸಿಲ್ ಕಾಯ್ದೆ 1909
ಉತ್ತರ :ಸಿ
9. ಈ ಕೆಳಗಿನ ಯಾವ ಕಾಯ್ದೆಯನ್ನು ಮಾರ್ಲೆ ಮಿಂಟೋ ಸುಧಾರಣೆಗಳು ಎನ್ನುತ್ತಾರೆ ?
ಎ. ಭಾರತದ ಕೌನ್ಸಿಲ್ ಕಾಯ್ದೆ 1892
ಬಿ.ಭಾರತ ಸರ್ಕಾರ ಕಾಯ್ದೆ 1919
ಸಿ. ಭಾರತದಸರ್ಕಾರ ಕಾಯ್ದೆ 1935
ಡಿ. ಭಾರತದ ಕೌನ್ಸಿಲ್ ಕಾಯ್ದೆ 1909
ಉತ್ತರ :ಡಿ
10.ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
ಎ. ಭಾರತ ಕೌನ್ಸಿಲ್ ಕಾಯ್ದೆ 1909 ಅನ್ನು ಮಾರ್ಲೆ ಮಿಂಟೋ ಸುಧಾರಣೆಗಳು ಎಂದು ಹೇಳುತ್ತಾರೆ.
ಬಿ. ಈ ಕಾಯ್ದೆ ಜಾರಿಗೆ ಬಂದ ಸಂದರ್ಭದಲ್ಲಿ ಲಾರ್ಡ್ ಮಾರ್ಲೆ ಭಾರತದ ಕಾರ್ಯದರ್ಶಿ ಯಾಗಿದ್ದರು ಮತ್ತು ಲಾರ್ಡ್ ಮಿಂಟೋ
ಭಾರತದ ವೈಸ್‌ರಾಯ್ ಆಗಿದ್ದರು.
1. ಹೇಳಿಕೆ ಎ ಸರಿಯಾಗಿದೆ ಬಿ ತಪ್ಪಾಗಿದೆ.
2.ಹೇಳಿಕೆ ಬಿ ಸರಿಯಾಗಿದೆ ಎ ತಪ್ಪಾಗಿದೆ.
3. ಎರಡೂ ಹೇಳಿಕೆಗಳು ತಪ್ಪಾಗಿವೆ
4. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ : 4
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.