ADVERTISEMENT

UPSC, KPSC ಬಹುಆಯ್ಕೆಯ ಪ್ರಶ್ನೆಗಳು

ಪ್ರಜಾವಾಣಿ ವಿಶೇಷ
Published 12 ಜೂನ್ 2024, 20:11 IST
Last Updated 12 ಜೂನ್ 2024, 20:11 IST
   

ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಬಹುಆಯ್ಕೆಯ ಪ್ರಶ್ನೋತ್ತರಗಳು ಇಲ್ಲಿವೆ...

1. ಆಗ್ನೇಯ ಏಷ್ಯಾದ ರಾಷ್ಟ್ರಗಳಿಂದ ಉಂಟಾಗುತ್ತಿರುವ ಸೈಬರ್ ಅಪರಾಧವನ್ನು ತಡೆಗಟ್ಟಲು ಸ್ಥಾಪಿಸಿರುವ ಸಮಿತಿಯಲ್ಲಿ ಕೆಳಗಿನ ಯಾವ ಸಂಸ್ಥೆ ಸದಸ್ಯತ್ವವನ್ನು ಹೊಂದಿರುವುದಿಲ್ಲ?

1. ಭಾರತೀಯ ರಿಸರ್ವ್ ಬ್ಯಾಂಕಿನ ಪ್ರತಿನಿಧಿ.
2. ಫೈನಾನ್ಸಿಯಲ್ ಇಂಟೆಲಿಜೆನ್ಸ್
ಯೂನಿಟ್ ನ ಪ್ರತಿನಿಧಿ.
3. ಭಾರತೀಯ ಬ್ಯಾಂಕ್‌ಗಳ ಪ್ರತಿನಿಧಿ.
4. ಕೇಂದ್ರ ಸಮಾಜ ಕಲ್ಯಾಣ ಸಚಿವಾಲಯದ ಪ್ರತಿನಿಧಿ.

ADVERTISEMENT

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 2 ಮತ್ತು 3
ಬಿ. 1 ಮತ್ತು 2
ಸಿ. 1 ಮತ್ತು 3 ಡಿ. 4 ಮಾತ್ರ

ಉತ್ತರ : ಡಿ


2. ವಿಶ್ವಸಂಸ್ಥೆಯ ಮಿಲಿಟರಿ ಜೆಂಡರ್ ಅಡ್ವೊಕೇಟ್-2023 ಪ್ರಶಸ್ತಿಯನ್ನು ಕೆಳಗಿನ ಯಾರು ಪಡೆದುಕೊಂಡರು?

ಎ. ಮೇಜರ್ ರಾಧಿಕಾ ಸೇನ್.
ಬಿ. ಮೇಜರ್ ಧ್ಯಾನ್ ಚಂದ್.
ಸಿ. ಮೇಜರ್ ಸನತ್.
ಡಿ. ಲೆಫ್ಟಿನೆಂಟ್ ಜನರಲ್ ಹಿಮಾನ್ಶೂ ಪಟೇಲ್.

ಉತ್ತರ : ಎ


3. ಡಿಜಿಲಾಕರ್ ತಂತ್ರಾಂಶಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. ಇದು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ (MeitY) ಸಚಿವಾಲಯದ ಅಡಿಯಲ್ಲಿ ಬರುತ್ತದೆ.

ಬಿ. ಡಿಜಿಲಾಕರ್ ಸಕಾ೯ರದ ಕಾಗದರಹಿತ ಆಡಳಿತದ ಉದ್ದೇಶವನ್ನು ಸಾಧಿಸಲು ಸಹಾಯಕವಾಗಿದೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
ಎ. ಹೇಳಿಕೆ ಎ ಸರಿಯಾಗಿದೆ.
ಬಿ. ಹೇಳಿಕೆ ಬಿ ಸರಿಯಾಗಿದೆ.
ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.
ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ : ಡಿ

4. ಇ-ಕಚೇರಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. ಇ-ಕಚೇರಿಯು ಭಾರತ ಸಕಾ೯ರದ ರಾಷ್ಟ್ರೀಯ ಇ-ಆಡಳಿತ ಕಾಯ೯ಕ್ರಮದ ಮೀಷನ್ ಮೋಡ್ ಯೋಜನೆಯಾಗಿದೆ.
ಬಿ. ಇ-ಕಚೇರಿ ತಂತ್ರಾಂಶವನ್ನು ನ್ಯಾಷನಲ್ ಇನ್ಫಾಮ್ಯಾ೯ಟಿಕ್ಸ್ ಸೆಂಟರ್(ಎನ್.ಐ.ಸಿ)ನವರು ಅಭಿವೃದ್ಧಿಪಡಿಸಿದ್ದಾರೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.
ಬಿ. ಹೇಳಿಕೆ ಬಿ ಸರಿಯಾಗಿದೆ.
ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.
ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ: ಡಿ

5. ಇ-ಕನ್ನಡ ಯೋಜನೆಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. ಇ-ಕನ್ನಡ ಯೋಜನೆಯು ರಾಜ್ಯ ಸಕಾ೯ರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ.
ಬಿ. ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ಭಾಷೆಯನ್ನು ಪರಿಣಾಮಕಾರಿ ಅಳವಡಿಕೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
ಎ. ಹೇಳಿಕೆ ಎ ಸರಿಯಾಗಿದೆ.
ಬಿ. ಹೇಳಿಕೆ ಬಿ ಸರಿಯಾಗಿದೆ.
ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.
ಡಿ ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ : ಡಿ


6. ಪಾಕ್ ಆಕ್ರಮಿತ ಪ್ರದೇಶದ ಆಡಳಿತಾತ್ಮಕ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಪಾಕ್ ಆಕ್ರಮಿತ ಪ್ರದೇಶವನ್ನು ತನ್ನ ಭೂಪ್ರದೇಶವೆಂದು ಪಾಕಿಸ್ತಾನ ತನ್ನ ಔಪಚಾರಿಕ ನಕ್ಷೆಯಲ್ಲಿ ತೋರಿಸಿದೆ.
2. ಪಾಕ್ ಆಕ್ರಮಿತ ಪ್ರದೇಶವನ್ನು ಪಾಕಿಸ್ತಾನ ತನ್ನ ಔಪಚಾರಿಕ ಪ್ರದೇಶವೆಂದು ತೋರಿಸದೆ ಸ್ವಾಯುತ್ತತೆ ಹೊಂದಿರುವ ಪ್ರದೇಶಗಳಾಗಿ ತೋರಿಸಿದೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1 ಮಾತ್ರ ಬಿ. 2 ಮಾತ್ರ
ಸಿ. 1 ಮತ್ತು 2 ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.

ಉತ್ತರ : ಬಿ


7. ಭಾರತದಿಂದ ಪಾಕಿಸ್ತಾನಕ್ಕೆ ಕೆಳಗಿನ ಯಾವ ಉತ್ಪನ್ನಗಳು 2019ಕ್ಕೂ ಮುನ್ನ ಹೆಚ್ಚಾಗಿ ರಫ್ತಾಗುತ್ತಿತ್ತು?
1. ಪೆಟ್ರೋಲಿಯಂ ಉತ್ಪನ್ನಗಳು.
2. ಮೆಕ್ಯಾನಿಕಲ್ ಬಿಡಿಭಾಗಗಳು.
3. ಪ್ಲಾಸ್ಟಿಕ್ ಉತ್ಪನ್ನಗಳು.
4. ರಾಸಾಯನಿಕಗಳು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 2, 3 ಮತ್ತು 4 ಬಿ. 1 ಮತ್ತು 2
ಸಿ. 2 ಮತ್ತು 4 ಡಿ. 4 ಮಾತ್ರ

ಉತ್ತರ : ಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.