ADVERTISEMENT

ಶಿಕ್ಷಣ: ಗೂಗಲ್ ಕಂಪನಿಯಲ್ಲಿ ಇಂಟರ್ನ್‌ಶಿಪ್‌ ಮಾಡಬೇಕೆ?

2025ರ ಸಾಲಿನ ಆರು ತಿಂಗಳ ಇಂಟರ್ನ್‌ಶಿಪ್‌ಗೆ ಗೂಗಲ್‌ ಪ್ರಕಟಣೆ ಹೊರಡಿಸಿದೆ. ಅದರ ವಿವರ ಹೀಗಿದೆ.

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2024, 16:08 IST
Last Updated 3 ನವೆಂಬರ್ 2024, 16:08 IST
ಗೂಗಲ್
ಗೂಗಲ್    

ಕಂಪ್ಯೂಟರ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆಲ್ಲ ಕನಸಿನ ಉದ್ಯೋಗವೆಂದರೆ ಅದು ಗೂಗಲ್‌ ಕಂಪನಿ. ಆದರೆ, ಖುಷಿಯ ವಿಷಯವೆಂದರೆ 2025ರ ಸಾಲಿನ ಆರು ತಿಂಗಳ ಇಂಟರ್ನ್‌ಶಿಪ್‌ಗೆ ಗೂಗಲ್‌ ಪ್ರಕಟಣೆ ಹೊರಡಿಸಿದೆ. ಅದರ ವಿವರ ಹೀಗಿದೆ. 

ಬೇಕಾದ ಕನಿಷ್ಠ ವಿದ್ಯಾರ್ಹತೆ: ಯಾವುದೇ ಕ್ಷೇತ್ರದಲ್ಲಿ ಪದವೀಧರರಾಗಿರಬೇಕು ಅಥವಾ ಅದಕ್ಕೆ ಸಮಾನವಾದ ಅನುಭವವನ್ನು ಕಂಪ್ಯೂಟರ್ ಕ್ಷೇತ್ರದಲ್ಲಿ ಹೊಂದಿರಬೇಕು.

* C, C ++, Java ಅಥವಾ Python ಪ್ರೋಗ್ರಾಮಿಂಗ್ ಭಾಷೆಯನ್ನು ಕಲಿತಿರಬೇಕು.

ADVERTISEMENT

* Windows, Linux /Unix ಅಥವಾ Mac-OS ತಂತ್ರಾಂಶಗಳಲ್ಲಿ ಕಾರ್ಯನಿರ್ವಹಣೆ ಮಾಡುವ ಪರಿಣತಿ ಇರಬೇಕು. TCP /IP, ಮಾಹಿತಿ ನಿರ್ವಹಣೆ ಮತ್ತು ಸಂಗ್ರಹ ಮಾಡುವ ಮತ್ತು ಮಷೀನ್ ಲರ್ನಿಂಗ್ ಬಗ್ಗೆ ತಿಳಿವಳಿಕೆ ಹೊಂದಿರಬೇಕು.

ಕಂಪನಿಯ ಆದ್ಯತೆಯೇನು?
* 2025ನೇ ಶೈಕ್ಷಣಿಕ ವರ್ಷದಲ್ಲಿ ಕಂಪ್ಯೂಟರ್ ವಿಜ್ಞಾನ ಅಥವಾ ಅದಕ್ಕೆ ಸಂಬಂಧಪಟ್ಟ ಕೋರ್ಸ್‌ನಲ್ಲಿ ಪದವಿ ಅಥವಾ ಸ್ನಾತಕೋತ್ತರ/ಉನ್ನತ ಪದವಿ ಪಡೆದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. 

ತರಬೇತಿ ಸ್ಥಳ: ಬೆಂಗಳೂರು, ಹೈದರಾಬಾದ್‌, ಮುಂಬೈ, ಪುಣೆ, ಅಥವಾ ಗುರುಗ್ರಾಮ (Guragoan ) ಕಚೇರಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ತರಬೇತಿಯ ಉದ್ದೇಶವೇನು?
ಗೂಗಲ್ ಕಂಪನಿಯಲ್ಲಿ ತರಬೇತಿ ಪಡೆಯುವ ಶಿಕ್ಷಾರ್ಥಿಗಳು ಮುಂದಿನ ಪೀಳಿಗೆಯ ಕೋಟ್ಯಂತರ ಮಂದಿ ಬಳಸುವ ತಂತ್ರಾಂಶಗಳ ವಿನ್ಯಾಸ, ಪರೀಕ್ಷೆ, ಅಳವಡಿಕೆ, ಕಾರ್ಯಸಿದ್ಧತೆ, ಮತ್ತು ನಿರ್ವಹಣೆ ಬಗ್ಗೆ ಕಲಿಯಲಿದ್ದಾರೆ. 

ತರಬೇತಿ ಕೇವಲ ಸರ್ಚ್‌ ಎಂಜಿನ್‌ಗೆ ಸೀಮಿತವಾಗಿರದೆ ಕೃತಕ ಬುದ್ದಿಮತ್ತೆ (ಎ.ಐ ), ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್, ಡಿಸ್ಟ್ರಿಬ್ಯುಟೆಡ್ ಕಂಪ್ಯೂಟಿಂಗ್, ನೆಟ್‌ವರ್ಕಿಂಗ್‌, ಕಂಪ್ಯೂಟರ್ ಸೆಕ್ಯೂರಿಟಿ, ಡೇಟಾ ಬೇಸ್  ಕ್ಷೇತ್ರಗಳಲ್ಲಿ ಪರಿಣತಿ ನೀಡುವ ಉದ್ದೇಶ ಹೊಂದಿದೆ. ಆ ಕಾರಣಕ್ಕಾಗಿ ಸಂಸ್ಥೆ ಪ್ರತಿಭಾನ್ವಿತರ ಶೋಧನೆಯಲ್ಲಿ ನಿರತವಾಗಿದೆ.

ತರಬೇತಿಯಲ್ಲಿ ಏನಿರುತ್ತೆ?
 ಗೂಗಲ್‌ನ ಉದ್ದೇಶಿತ ಹೊಸ ಪ್ರಾಡಕ್ಟ್/ತಂತ್ರಾಂಶಗಳ ಬಗ್ಗೆ ಸಂಶೋಧನೆ, ಪರಿಕಲ್ಪನೆ, ಮತ್ತು ನಿರ್ಮಾಣ ಮಾಡುವ ನಿಪುಣತೆ ಗಳಿಸುವುದು.

ಗೂಗಲ್‌ನ  ಪ್ರಾಡಕ್ಟ್ ಗಳನ್ನು ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್, ಮಷೀನ್‌ ಲರ್ನಿಂಗ್‌, ಡೇಟಾ ಕಂಪ್ರೆಷನ್‌, ಮತ್ತು ಸರ್ಚ್ ಟೆಕ್ನಾಲಜೀಸ್ ಬಳಸಿ ಅಭಿವೃದ್ಧಿಪಡಿಸುವುದು.

 ಇದರ ಜೊತೆಗೆ ಗೂಗಲ್ ಪರಿಣತ ತಂಡಗಳು ನೀಡುವ ಕ್ಲಿಷ್ಟಕರ  ಸವಾಲುಗಳನ್ನು ನಿರ್ವಹಿಸುವ ಕಲೆಯನ್ನು ಕಲಿಯಲು ಅವಕಾಶ ಇರುತ್ತದೆ. 

 ಅರ್ಜಿ ಸಲ್ಲಿಸಲು ಈ ವೆಬ್ ಕೊಂಡಿ ಬಳಸಿ:

ಇಂಟರ್ನ್‌ಶಿಪ್‌ಗೆ ಬಗ್ಗೆ  ಇನ್ನಷ್ಟು ಮಾಹಿತಿ

ಇಂಟರ್ನ್‌ಶಿಪ್‌ನ ಕಾಲಾವಧಿ: ಆರು ತಿಂಗಳ ಅವಧಿಯದ್ದಾಗಿರುತ್ತದೆ. 

ಈ ಇಂಟರ್ನ್‌ಶಿಪ್‌ಗೆ ಕಲಿಯುವ ಜತೆಗೆ ಸಂಭಾವನೆ ಪಡೆಯುವ ಅವಕಾಶ ಇರುತ್ತದೆ. 

ಆಯ್ಕೆಯಾದವರಿಗೆ ಆನ್‌ಲೈನ್‌ ಅಥವಾ ದೂರವಾಣಿಯ ಮೂಲಕವೇ ಸಂದರ್ಶನ ನಡೆಯುತ್ತದೆ. 

ಅರ್ಜಿ ಸ್ವೀಕೃತಗೊಂಡಿರುವ ಬಗ್ಗೆ ಆನ್‌ಲೈನ್‌ನಲ್ಲಿ ಪರಿಶೀಲನೆ ಮಾಡಲು ಅವಕಾಶ ಇಲ್ಲ. ಅರ್ಜಿ ಸಲ್ಲಿಸಿದ ನಂತರ ಶಾರ್ಟ್‌ಲಿಸ್ಟ್‌ ಮಾಡಲಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಗೂಗಲ್‌ ಕಂಪನಿಯೇ ಸಂದೇಶ ಅಥವಾ ಕರೆ ಮಾಡಿ ತಿಳಿಸುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.