ನವದೆಹಲಿ: ದೆಹಲಿ ಸರ್ಕಾರಿ ಶಾಲೆಗಳ 'ಹ್ಯಾಪಿನೆಸ್ ಕ್ಲಾಸ್'ವಿಶ್ವದ ಗಮನ ಸೆಳೆದಿದ್ದು ಡೊನಾಲ್ಡ್ ಟ್ರಂಪ್ ಅವರ ಪತ್ನಿಮೆಲೇನಿಯಾ ಇಲ್ಲಿನ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿ ಮಕ್ಕಳ ಜೊತೆ ಕಾಲ ಕಳೆದರು.
ಇಲ್ಲಿನ ನಾನಾಕ್‌ಪುರದಲ್ಲಿರುವ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು ಮಕ್ಕಳ ಜೊತೆ ಸಂವಾದ ನಡೆಸಿದರು. ಸುಮಾರು 1 ಗಂಟೆಗೂ ಹೆಚ್ಚುಅಲ್ಲಿಯೇ ಕಾಲ ಕಳೆದರು.
ಭಾರತ ಭೇಟಿ ಸಂದರ್ಭದಲ್ಲಿಮೆಲೇನಿಯಾ ಸರ್ಕಾರಿ ಶಾಲೆಗೆ ಭೇಟಿ ನೀಡುವುದು ಅವರ ಕಾರ್ಯಕ್ರಮದ ಒಂದು ಭಾಗವಾಗಿತ್ತು. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನಿಸೆಪ್ ಸೇರಿದಂತೆ ಜಾಗತಿಕ ಶೈಕ್ಷಣಿಕ ಸಮ್ಮೇಳನಗಳಲ್ಲಿಹ್ಯಾಪಿನೆಸ್ ಕ್ಲಾಸ್ ಬಗ್ಗೆ ಚರ್ಚೆಯಾಗಿತ್ತು. ಹ್ಯಾಪಿನೆಸ್ ಕ್ಲಾಸ್‌ಗೆ ಜಾಗತಿಕ ಮಟ್ಟದ ಶಿಕ್ಷಣ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿಮೆಲೇನಿಯಾ ಇಲ್ಲಿನ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದು ವಿಶೇಷವಾಗಿತ್ತು.
ಏನಿದುಹ್ಯಾಪಿನೆಸ್ ಕ್ಲಾಸ್?
ಮುಖ್ಯಮಂತ್ರಿಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ಕಳೆದ ಎರಡು ವರ್ಷಗಳ ಹಿಂದೆ ಸರ್ಕಾರಿ ಶಾಲೆಗಳಲ್ಲಿ ‘ಹ್ಯಾಪಿನೆಸ್ ಕ್ಲಾಸ್‘ ಅನ್ನು ಪರಿಚಯಿಸಿತ್ತು. ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವುದು ಮತ್ತು ಒತ್ತಡವನ್ನು ನಿವಾರಣೆ ಮಾಡುವ ಉದ್ದೇಶದಿಂದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ‘ಹ್ಯಾಪಿನೆಸ್ ಕ್ಲಾಸ್‘ ಅನ್ನು ಪರಿಚಯಿಸಿದ್ದರು.
1 ರಿಂದ 8 ನೇ ತರಗತಿವರೆಗೂ‘ಹ್ಯಾಪಿನೆಸ್ ಕ್ಲಾಸ್‘ ಅನ್ನು ನಡೆಸಲಾಗುತ್ತದೆ. 40 ನಿಮಿಷಗಳ ಈ ತರಗತಿಯಲ್ಲಿ ಮಕ್ಕಳಿಗೆ ಮನರಂಜನೆ, ವಿಶ್ರಾಂತಿ, ಯೋಗಾ, ಧ್ಯಾನ, ಆಟ, ಸಂಗೀತ ಸೇರಿದಂತೆ ಪಠ್ಯೇತರ ಚಟುವಟಿಕೆಗಳನ್ನುಹೇಳಿ ಕೊಡಲಾಗುತ್ತದೆ. ಇದರಿಂದಾಗಿಮಕ್ಕಳ ಪಠ್ಯ ಚಟುವಟಿಕೆಯ ಒತ್ತಡದಿಂದ ಹೊರ ಬಂದು ಉಲ್ಲಾಸಿತರಾಗುತ್ತಾರೆ.
ಈ ಹ್ಯಾಪಿನೆಸ್ ಕ್ಲಾಸ್ ಮಕ್ಕಳ ಕ್ರಿಯಶೀಲತೆಗೆ ಪೂರಕವಾಗಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.