1. ನಾನು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿದ್ದೇನೆ ಎಂಬ ನಂಬಿಕೆ ಇದೆ. ಮುಂದೆ ಪಿಯುಸಿ ವಿಜ್ಞಾನ (ಪಿಸಿಎಂಬಿ) ಆಯ್ಕೆಮಾಡಿಕೊಳ್ಳುತ್ತೇನೆ. ಪಿಯುಸಿ ನಂತರದ ಕೋರ್ಸ್ ಅವಕಾಶಗಳ ಬಗ್ಗೆ ತಿಳಿಸಿಕೊಡಿ.
ವಿವೇಕ್ ವೈಭವ್ ಎ, ಊರು ತಿಳಿಸಿಲ್ಲ
ನಿಮಗೆ ಆಸಕ್ತಿಯಿರುವ, ಇಷ್ಟವಿರುವ, ಸ್ವಾಭಾವಿಕ ಪ್ರತಿಭೆಯಿರುವ ವೃತ್ತಿಯನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ಅನುಗುಣವಾಗಿ ಕೋರ್ಸ್ ಮಾಡಬೇಕು. ಹಾಗಾಗಿ, ವೃತ್ತಿ ಯೋಜನೆಯನ್ನು ಮಾಡದೆ ಕೋರ್ಸ್ ಆಯ್ಕೆ ಸಮಂಜಸವಲ್ಲ. ಪಿಯುಸಿ ನಂತರ ನೀವು ಮಾಡಬಹುದಾದ ಕೆಲವು ಪ್ರಮುಖ ಕೋರ್ಸ್‌ಗಳೆಂದರೆ ಎಂಬಿಬಿಎಸ್, ಬಿಇ/ಬಿಟೆಕ್, ಬಿಎಸ್‌ಸಿ (ವಿಜ್ಞಾನ, ಕೃಷಿ ಸಂಬಂಧಿತ, ಬಯೋಟೆಕ್, ಪ್ಯಾರಾ ಮೆಡಿಕಲ್, ಫ್ಯಾಷನ್ ಡಿಸೈನ್, ಫೋರೆನ್ಸಿಕ್ ಇತ್ಯಾದಿ), ಬಿವಿಎಸ್‌ಸಿ, ಬಿಬಿಎ, ಸಿಎ, ಎಸಿಎಸ್ ಸೇರಿದಂತೆ ವೈವಿಧ್ಯಮಯ ಕೋರ್ಸ್ ಆಯ್ಕೆಗಳಿವೆ. ಪಿಯುಸಿ ನಂತರದ ಕೋರ್ಸ್ ಆಯ್ಕೆಗಳ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:
https://www.youtube.com/c/EducationalExpertManagementCareerConsultant
2. ನಾನು ಕಳೆದ ಅಕ್ಟೋಬರ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪೂರ್ಣಗೊಳಿಸಿರುವೆ. ಈಗ, ನನಗೆ ಖಾಸಗಿ ಕಂಪನಿಗಳಲ್ಲಿ ಅವಕಾಶ ಸಿಕ್ಕರೂ ಉದ್ಯೋಗಕ್ಕೆ ಸೇರಲು ಇಷ್ಟವಿಲ್ಲ. ಏಕೆಂದರೆ, ನಾನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವೆ. ನನ್ನ ಈ ನಿರ್ಧಾರ ಸರಿಯೇ ಅಥವಾ ತಪ್ಪೇ?
ವೇಣುಗೋಪಾಲ ಬಿ, ಊರು ತಿಳಿಸಿಲ್ಲ
ಇತ್ತೀಚಿನ ವರ್ಷಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಪೈಪೋಟಿ ತೀಕ್ಷ್ಮವಾಗಿದೆ ಹಾಗೂ ಕೆಲವು ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿಗೆ ಏಕಾಗ್ರತೆ, ಸಮಯದ ನಿರ್ವಹಣೆ ಮತ್ತು ನಿರಂತರ ಪರಿಶ್ರಮದ ಅಗತ್ಯವಿದ್ದು, ಉದ್ಯೋಗದಲ್ಲಿದ್ದರೆ ನಿಭಾಯಿಸುವುದು ಕಷ್ಟವಾಗಬಹುದು.
ನೀವು ತಯಾರಾಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಹಂತಗಳು, ಮಾದರಿ, ಪಠ್ಯಕ್ರಮ, ಪ್ರಶ್ನೆಪತ್ರಿಕೆಗಳ ಸ್ವರೂಪ, ಅಧ್ಯಯನದ ಪುಸ್ತಕಗಳ ಪಟ್ಟಿ, ಗುಂಪು ಚರ್ಚೆ, ವೈಯಕ್ತಿಕ ಸಂದರ್ಶನ ಇತ್ಯಾದಿಗಳನ್ನು ಅರಿತು ನಿಮ್ಮ ಸಾಮರ್ಥ್ಯ, ದೌರ್ಬಲ್ಯಗಳನ್ನು ಗುರುತಿಸಿ, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಬೇಕು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ನಿಮಗಿರುವ ಅವಕಾಶಗಳು, ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದು ಒಳ್ಳೆಯದು.
ಪ್ರದೀಪ್ ಕುಮಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.