ADVERTISEMENT

Exams: ಹಣದುಬ್ಬರ ತಗ್ಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಳ್ಳುವ ಕ್ರಮಗಳೇನು?

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 19:43 IST
Last Updated 14 ಆಗಸ್ಟ್ 2024, 19:43 IST
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ   

1. ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರ ತಗ್ಗಿಸಲು ಕೆಳಗಿನ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ?

1. ನಗದು ಮೀಸಲು ಅನುಪಾತ ಹೆಚ್ಚಿಸುವುದು.

2. ಹೆಚ್ಚುವರಿ ನಗದು ಮೀಸಲು ಅನುಪಾತವನ್ನು ಜಾರಿಗೆ ತರುವುದು.

ADVERTISEMENT

3. ಶಾಸನೀಯ ದ್ರವ್ಯತಾ ಅನುಪಾತ ಹೆಚ್ಚಿಸುವುದು.

4. ರೆಪೋ ದರವನ್ನು ಹೆಚ್ಚಿಸುವುದು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 2, 3 ಮತ್ತು 4→ ಬಿ. 1 ಮತ್ತು 2

ಸಿ. 2 ಮತ್ತು 3 →ಡಿ. 3 ಮತ್ತು 4

ಉತ್ತರ : ಎ

2. ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಕೆಳಗಿನ ಯಾವ ಸಂದರ್ಭದಲ್ಲಿ ಹೆಚ್ಚುವರಿ ನಗದು ಮೀಸಲು ಅನುಪಾತವನ್ನು ಜಾರಿಗೆ ತಂದಿತ್ತು?

ಎ. ಆಹಾರದ ಹಣದುಬ್ಬರ ಹೆಚ್ಚಳವಾದ ಕಾರಣದಿಂದ.

ಬಿ. ಆಹಾರ ಉತ್ಪನ್ನಗಳ ಬೆಲೆಗಳು ಕಡಿಮೆಯಾದ ಕಾರಣದಿಂದ.

ಸಿ. ₹ 2000 ಮೌಲ್ಯದ ನೋಟುಗಳ ಅಮಾನ್ಯೀಕರಣದ ನಂತರ.

ಡಿ. ರಷ್ಯಾ-ಉಕ್ರೇನ್ ಯುದ್ಧದ ನಂತರ.

ಉತ್ತರ : ಸಿ

3.ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ಸಂವಿಧಾನದ ಅನುಚ್ಛೇದ 32 ಅಡಿಯಲ್ಲಿ ಸುಪ್ರೀಂ ಕೋರ್ಟ್‌ ಗೆ ಯಾವುದೇ ಸಂಬಂಧಪಟ್ಟ ವ್ಯಕ್ತಿ ಅಥವಾ ಬೇರೆಯವರು ಸಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಬಹುದು.

ಬಿ. ಸಂವಿಧಾನದ ಅನುಚ್ಛೇದ 226 ಅಡಿಯಲ್ಲಿ ಹೈಕೋರ್ಟ್‌ಗೆ ಯಾವುದೇ ಸಂಬಂಧಪಟ್ಟ ವ್ಯಕ್ತಿ ಅಥವಾ ಬೇರೆಯವರು ಸಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಬಹುದು.

ಕೆಳಗಿನವುಗಳಲ್ಲಿ ಸರಿ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ : ಡಿ

4. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದರೆ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಜನರ ಹಿತರಕ್ಷಣೆಗಾಗಿ ಹೂಡಲಾದ ಅರ್ಜಿಗಳಾಗಿವೆ.

ಬಿ. ಸಂವಿಧಾನದ ವಿಧಿ 32 ರನ್ವಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಸವೋಚ್ಛ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯ ವಿಸ್ತರಣೆಯಾಗಿದೆ.

ಕೆಳಗಿನವುಗಳಲ್ಲಿ ಸರಿ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ : ಡಿ

5 ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ದುರ್ಬಲ ವರ್ಗಗಳ ಮೂಲಭೂತ ಹಕ್ಕುಗಳ ಅತಿಕ್ರಮಣಗಳ ವಿರುದ್ದ ಇದನ್ನು ಸಲ್ಲಿಸಬಹುದು.

ಬಿ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿರುದ್ಧದ ದೌರ್ಜನ್ಯಗಳ ವಿರುದ್ದ ಇದನ್ನು ಸಲ್ಲಿಸಲು ಬರುವುದಿಲ್ಲ.

ಕೆಳಗಿನವುಗಳಲ್ಲಿ ಸರಿ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ : ಎ

6. 5ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ಭಾರತದಲ್ಲಿ 5ಜಿ ಸೇವೆಗಳನ್ನು ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1, 2023 ರಂದು ಇಂಡಿಯಾ ಮೊಬೈಲ್ ಕಾಂಗ್ರೆಸ್‌ ನಲ್ಲಿ ಉದ್ಘಾಟಿಸಿದರು.

ಬಿ. ಅಲ್ಟ್ರಾ-ಫಾಸ್ಟ್ ಇಂಟರ್‌ನೆಟ್‌ ಮತ್ತು ವರ್ಧಿತ ಮಲ್ಟಿಮೀಡಿಯಾ ಅನುಭವಗಳನ್ನು ನೀಡಲು 5ಜಿ ನೆಟ್‌ವರ್ಕ್ ಸುಧಾರಿತ ತಂತ್ರಜ್ಞಾನಗಳನ್ನು ಬಳಸುತ್ತದೆ.

ಕೆಳಗಿನವುಗಳಲ್ಲಿ ಸರಿ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ : ಬಿ

7. 6ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ಭಾರತ ಸರ್ಕಾರವು 2030ರ ವೇಳೆಗೆ 6ಜಿ ತಂತ್ರಜ್ಞಾನವನ್ನು ಭಾರತದಲ್ಲಿ ಸಕ್ರಿಯಗೊಳಿಸಲು 6ಜಿ ಸಂಶೋಧನೆ ಮತ್ತು ನಾವೀನ್ಯವನ್ನು ವೇಗಗೊಳಿಸುತ್ತಿದೆ.

ಬಿ. ಭಾರತದ ದೂರಸಂಪರ್ಕ ಇಲಾಖೆಯು 1ನೇ ಜೂನ್ 2024 ರಂದು 6ಜಿ ತಂತ್ರಜ್ಞಾನ ಆವಿಷ್ಕಾರ ಗುಂಪನ್ನು ರಚಿಸಿದೆ.

ಕೆಳಗಿನವುಗಳಲ್ಲಿ ಸರಿ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ: ಎ

8. ಸಂವನ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ, LTE (ಲಾಂಗ್-ಟರ್ಮ್ ಎವಲ್ಯೂಷನ್) ಮತ್ತು VoLTE (ವಾಯ್ಸ್ ಓವರ್ ಲಾಂಗ್-ಟರ್ಮ್ ಎವಲ್ಯೂಷನ್) ನಡುವಿನ ವ್ಯತ್ಯಾಸ/ವ್ಯತ್ಯಾಸಗಳು ಯಾವುವು?

ಎ. LTE ಅನ್ನು ಸಾಮಾನ್ಯವಾಗಿ 3ಜಿ ಮತ್ತು VoLTE ಅನ್ನು ಸಾಮಾನ್ಯವಾಗಿ ಸುಧಾರಿತ 3ಜಿ ಎಂದು ಮಾರಾಟ ಮಾಡಲಾಗುತ್ತದೆ.

ಬಿ. LTE ಡೇಟಾ-ಮಾತ್ರ ಒದಗಿಸುವ ತಂತ್ರಜ್ಞಾನವಾಗಿದೆ ಮತ್ತು VoLTE ಧ್ವನಿ-ಮಾತ್ರ ಒದಗಿಸುವ ತಂತ್ರಜ್ಞಾನವಾಗಿದೆ.

ಕೆಳಗಿನ ಕೋಡ್ ಬಳಸಿ ಸರಿ ಉತ್ತರ ಆಯ್ಕೆಮಾಡಿ.

ಎ. 1 ಮಾತ್ರ→→ಬಿ. 2 ಮಾತ್ರ

ಸಿ. 1 ಮತ್ತು 2 ಎರಡೂ→ಡಿ. 1 ಮತ್ತು 2 ಅಲ್ಲ

ಉತ್ತರ: ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.