ADVERTISEMENT

ರದ್ದು ಮಾಡಿಕೊಂಡ ವೈದ್ಯಕೀಯ ಸೀಟು 107: ಕೆಇಎ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 16:01 IST
Last Updated 20 ಸೆಪ್ಟೆಂಬರ್ 2024, 16:01 IST
<div class="paragraphs"><p>ಕರ್ನಾಟಕ ಪರೀಕ್ಷಾ ಪ್ರಾಧಿಕಾರ</p></div>

ಕರ್ನಾಟಕ ಪರೀಕ್ಷಾ ಪ್ರಾಧಿಕಾರ

   

ಬೆಂಗಳೂರು: ಅಖಿಲ ಭಾರತಮಟ್ಟದಲ್ಲಿನ ವೈದ್ಯಕೀಯ ಸೀಟು ಉಳಿಸಿಕೊಳ್ಳಲು ನಿರ್ಧರಿಸಿದ 107 ವಿದ್ಯಾರ್ಥಿಗಳೂ ಸೇರಿದಂತೆ 206 ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ತಮಗೆ ಹಂಚಿಕೆಯಾಗಿದ್ದ ಸೀಟುಗಳನ್ನು ಶುಕ್ರವಾರ ರದ್ದು ಮಾಡಿಕೊಂಡಿದ್ದಾರೆ.

ವೈದ್ಯಕೀಯ ಕೋರ್ಸ್‌ನಲ್ಲಿ 107, ದಂತ ವೈದ್ಯಕೀಯದಲ್ಲಿ 20, ಆಯುಷ್‌ ಕೋರ್ಸ್‌ನಲ್ಲಿ 33, ಎಂಜಿನಿಯರಿಂಗ್‌ನಲ್ಲಿ ಐದು ಮತ್ತು ನರ್ಸಿಂಗ್‌ನಲ್ಲಿ 4 ಮಂದಿ ಸೀಟು ರದ್ದು ಮಾಡಿಕೊಂಡಿದ್ದಾರೆ ಎಂದು ಕೆಇಎ ಹೇಳಿದೆ. 

ADVERTISEMENT

ರದ್ದಾದ ಸೀಟುಗಳನ್ನು ಅರ್ಹತಾ ಪಟ್ಟಿ ಆಧಾರದಲ್ಲಿ ಇತರರಿಗೆ ಹಂಚಿಕೆ ಮಾಡಲಾಗುತ್ತದೆ. ಎರಡನೇ ಸುತ್ತಿನ ಸೀಟುಗಳನ್ನು ಪುನರ್‌ ಹಂಚಿಕೆ ಮಾಡಲು ಆರಂಭಿಸಿದ್ದು, ನಂತರ ಫಲಿತಾಂಶ ಪ್ರಕಟಿಸಲಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.