ADVERTISEMENT

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: ಅಂತಿಮವಾಗಿ 13 ಅಭ್ಯರ್ಥಿಗಳು ಕಣದಲ್ಲಿ

ಪಕ್ಷೇತರರಿಗೆ ಚಿಹ್ನೆ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 16:47 IST
Last Updated 30 ಏಪ್ರಿಲ್ 2019, 16:47 IST
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಭ್ಯರ್ಥಿಗಳ ಚಿಹ್ನೆ ಹಂಚಿಕೆ ಸಂಬಂಧ ಸೋಮವಾರ ಸಭೆ ನಡೆಯಿತು. ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶಕುಮಾರ್, ಸ್ವೀಪ್ ಸಮಿತಿ ಅಧ್ಯಕ್ಷ ಮೊಹಮ್ಮದ್ ರೋಶನ್, ಚುನಾವಣಾ ವೀಕ್ಷಕ ನವೀನ್ ಎಸ್.ಎಲ್ ಚಿತ್ರದಲ್ಲಿದ್ದಾರೆ.
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಭ್ಯರ್ಥಿಗಳ ಚಿಹ್ನೆ ಹಂಚಿಕೆ ಸಂಬಂಧ ಸೋಮವಾರ ಸಭೆ ನಡೆಯಿತು. ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶಕುಮಾರ್, ಸ್ವೀಪ್ ಸಮಿತಿ ಅಧ್ಯಕ್ಷ ಮೊಹಮ್ಮದ್ ರೋಶನ್, ಚುನಾವಣಾ ವೀಕ್ಷಕ ನವೀನ್ ಎಸ್.ಎಲ್ ಚಿತ್ರದಲ್ಲಿದ್ದಾರೆ.   

ಕಾರವಾರ: ಉತ್ತರ ಕನ್ನಡಲೋಕಸಭಾ ಕ್ಷೇತ್ರದ ಚುನಾವಣಾ ಕಣದಿಂದ ಇಬ್ಬರು ನಾಮಪತ್ರವನ್ನು ಸೋಮವಾರ ಹಿಂತೆಗೆದುಕೊಂಡಿದ್ದಾರೆ.ಅಂತಿಮವಾಗಿ 13 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾದ ದಾಂಡೇಲಿಯ ರಾಜಶೇಖರ ಬೆಳ್ಳಿಗಟ್ಟಿ ಹಾಗೂ ಶಿರಸಿಯ ನೈಮುರ್ ರೆಹಮಾನ್ ಜೈಲರ್ ಅವರು ತಮ್ಮಉಮೇದುವಾರಿಕೆಯನ್ನುಹಿಂಪಡೆದಿದ್ದಾರೆ. ಸ್ಪರ್ಧೆ ಬಯಸಿ ಇಬ್ಬರುಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 17 ಮಂದಿಯಿಂದ 27 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿಇಬ್ಬರ ನಾಮಪತ್ರತಿರಸ್ಕೃತಗೊಂಡಿದ್ದವು.

ಇದೀಗ ಅಂತಿಮವಾಗಿ ರಾಷ್ಟ್ರೀಯ ಪಕ್ಷದ ಒಬ್ಬ ಅಭ್ಯರ್ಥಿ, ಪ್ರಾದೇಶಿಕ ಪಕ್ಷಗಳ ಇಬ್ಬರು, ನೋಂದಾಯಿತ ರಾಜಕೀಯ ಪಕ್ಷಗಳಿಂದ ನಾಲ್ವರು ಹಾಗೂ ಆರು ಮಂದಿ ಪಕ್ಷೇತರರು ಈ ಬಾರಿಯ ಲೋಕಸಭಾ ಚುನಾವಣೆಯಕಣದಲ್ಲಿದ್ದಾರೆ.

ADVERTISEMENT

ಚಿಹ್ನೆ ಹಂಚಿಕೆ:

ಚುನಾವಣಾವೀಕ್ಷಕ ನವೀನ್ ಎಸ್.ಎಲ್.,ಜಿಲ್ಲಾ ಚುನಾವಣಾ ಅಧಿಕಾರಿ ಡಾ.ಕೆ.ಹರೀಶಕುಮಾರ್,ಜಿಲ್ಲಾ ‘ಸ್ವೀಪ್’ ಸಮಿತಿ ಅಧ್ಯಕ್ಷ ಮೊಹಮ್ಮದ್ ರೋಶನ್, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್ ಸಿಂಗ್ರೇರ್ ಅವರ ಉಪಸ್ಥಿತಿಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿಅಭ್ಯರ್ಥಿಗಳಿಗೆ ಚಿಹ್ನೆಹಂಚಿಕೆ ಸಂಬಂಧಸಭೆ ನಡೆಯಿತು.

ಈ ವೇಳೆ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂಕೆಲವರ ಅನುಪಸ್ಥಿತಿಯಲ್ಲಿ ಅವರ ಪ್ರತಿನಿಧಿಗಳುಹಾಜರಿದ್ದರು. ಇದೇ ವೇಳೆ ಅಭ್ಯರ್ಥಿಗಳಿಗೆ ಚಿಹ್ನೆಯನ್ನೂ ಹಂಚಿಕೆ ಮಾಡಲಾಯಿತು.ಕ್ರಮಸಂಖ್ಯೆಗೆ ಅನುಗುಣವಾಗಿರಾಷ್ಟ್ರೀಯ ಪಕ್ಷದ (ಬಿಜೆಪಿ) ಅಭ್ಯರ್ಥಿಯಾದಅನಂತಕುಮಾರ್ ಹೆಗಡೆ ಮೊದಲ ಸ್ಥಾನದಲ್ಲಿದ್ದರೆ, ಪ್ರಾದೇಶಿಕ ಪಕ್ಷದ (ಜೆಡಿಎಸ್‌) ಆನಂದ ಅಸ್ನೋಟಿಕರ್ ಎರಡನೇ ಸ್ಥಾನದಲ್ಲಿ ಇದ್ದಾರೆ.

ಅ.ಸಂ; ಅಭ್ಯರ್ಥಿ; ಪಕ್ಷ; ಚಿಹ್ನೆ

1.;ಅನಂತಕುಮಾರ್ ಹೆಗಡೆ; ಬಿಜೆಪಿ; ಕಮಲ

2.;ಆನಂದ ಅಸ್ನೋಟಿಕರ್; ಜೆಡಿಎಸ್‌; ತೆನೆ ಹೊತ್ತ ರೈತ ಮಹಿಳೆ

3.;ಸುಧಾಕರ್ ಜೊಗಳೇಕರ್; ಬಿಎಸ್‌ಪಿ; ಆನೆ

4.;ನಾಗರಾಜ ನಾಯ್ಕ; ಆರ್‌ಎಸ್‌ಪಿ; ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ

5.;ನಾಗರಾಜ ಶೇಟ್; ಆರ್‌ಜೆಪಿ; ಹೂಕೋಸು

6.;ಮಂಜುನಾಥ ಸದಾಶಿವ; ಬಿಬಿಪಿ; ಹಲ್ಲುಜ್ಜುವ ಬ್ರಶ್

7.;ಸುನೀಲ್ ಪವಾರ್; ಯುಪಿಪಿ; ಆಟೊ ರಿಕ್ಷಾ

8.;ಅನಿತಾ ಶೇಟ್; ಪಕ್ಷೇತರ; ಹಡಗು

9.;ಕುಂದಾಬಾಯಿ ಪರುಳೇಕರ್; ಪಕ್ಷೇತರ; ಸೀಟಿ

10.;ಚಿದಾನಂದ ಹರಿಜನ್; ಪಕ್ಷೇತರ; ಟಿಲ್ಲರ್

11.;ನಾಗರಾಜ ಶಿರಾಲಿ; ಪಕ್ಷೇತರ; ವಜ್ರ

12.;ಬಾಲಕೃಷ್ಣ ಪಾಟೀಲ್; ಪಕ್ಷೇತರ; ತೆಂಗಿನ ತೋಟ

13.;ಮೊಹಮ್ಮದ್ ಜಬ್ರೂರ್ ಖತೀಬ್; ಪಕ್ಷೇತರ; ಗ್ಯಾಸ್ ಸಿಲಿಂಡರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.