ಪ್ರಜಾತಂತ್ರ ವ್ಯವಸ್ಥೆಯಲ್ಲಿ, ತನ್ನ ಸಮಾಜದ ಒಳಿತಿಗಾಗಿ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಂವಿಧಾನ ಕೊಟ್ಟಿರುವ ಅತ್ಯಂತ ಪ್ರಬಲ ಅಸ್ತ್ರ ಮತದಾನ. ಮೂಲ ಸೌಲಭ್ಯಗಳ ಆದಿಯಾಗಿ, ಸಮಾಜದ ಪ್ರತಿಯೊಂದು ಅಗತ್ಯಗಳನ್ನು ಪೂರೈಸಬೇಕಾದ, ಅದಕ್ಕೆ ಪೂರಕವಾದ ಶಾಸನಗಳನ್ನು ರೂಪಿಸಲು ‘ಮಾನವೀಯ’ ಗುಣವುಳ್ಳ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ.
ನಮ್ಮೆಲ್ಲರ ಹಕ್ಕಿನ ಮತವನ್ನು ಜವಾಬ್ದಾರಿಯುತವಾಗಿ ಚಲಾಯಿಸಿ ಉತ್ತಮ, ಸೌಹಾರ್ದಯುತ ಸಮಾಜ ಕಟ್ಟಲು ಪ್ರತಿಯೊಬ್ಬರೂ ಮತದಾನ ಮಾಡಬೇಕಿದೆ. ಒಂದು ವೇಳೆ ನಿಮ್ಮ ಕ್ಷೇತ್ರದ ಯಾವ ಅಭ್ಯರ್ಥಿಯೂ ನಿಮಗೆ ಸೂಕ್ತ ಅಲ್ಲ ಎಂದು ಎನಿಸಿದರೆ, ನಿಮಗೆ N.O.T.A ಆಯ್ಕೆ ಇದೆಯಲ್ಲವೇ. ಆ ಮೂಲಕ ನಿಮ್ಮ ಅಭಿಪ್ರಾಯವನ್ನು ನಿಮ್ಮ ಹಕ್ಕಿನ ಮೂಲಕವೇ ದಾಖಲಿಸಿ.
ಸಿನಿಕತನ ಬಿಟ್ಟು, ಆಶಾವಾದಿಗಳಾಗೋಣ. ಪ್ರಜಾಪ್ರಭುತ್ವ ಉಳಿಯಲು ಎಲ್ಲರೂ ಮತದಾನ ಮಾಡೋಣ.
-ಮಂಸೋರೆ, ಚಿತ್ರನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.