ಮತದಾನ ಮಾಡುವುದು ತುಂಬಾ ಮುಖ್ಯವಾದ ಹಾಗೂ ಮೂಲಭೂತವಾದ ಹಕ್ಕು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು.
ಮತದಾನದ ದಿನವನ್ನು ರಜೆ ಎಂದು ಯಾರೂ ಪರಿಗಣಿಸಲೇಬಾರದು. ಮತದಾನದಂತಹ ಪವಿತ್ರ ಹಕ್ಕು ಚಲಾಯಿಸುವ ದಿನ ಎಂದು ಪರಿಗಣಿಸಬೇಕು. ಕುಟುಂಬ ಸಮೇತರಾಗಿ ಮತದಾನ ಮಾಡಬೇಕು.
ವಿಶೇಷವಾಗಿ ಯುವ ಸಮುದಾಯದವರು ಹೆಚ್ಚಿನ ಗಮನ ಕೊಡಬೇಕು. ಉಡಾಫೆಯಿಂದ ಮತದಾನ ಮಾಡದೇ ಇರುವುದು ಸರಿಯಲ್ಲ.
ಚುನಾವಣಾ ಆಯೋಗವು ಹಿರಿಯ ನಾಗರಿಕರಿಗೆ ಮನೆಯಲ್ಲೇ ಮತದಾನ ಮಾಡುವಂತಹ ಅವಕಾಶ ಕಲ್ಪಿಸಿತ್ತು. ಯಾರೂ ಸಹ ಸಬೂಬುಗಳನ್ನು ಹೇಳದೇ ಕಡ್ಡಾಯವಾಗಿ ದೇಶಕ್ಕಾಗಿ, ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾನ ಮಾಡಲೇಬೇಕು.
–ಅಶ್ವಿನಿ ನಾಚಪ್ಪ, ಅಂತರರಾಷ್ಟ್ರೀಯ ಅಥ್ಲೀಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.