ಪ್ರಜಾಪ್ರಭುತ್ವದಲ್ಲಿ ಮತದಾನ ಬಹಳ ಮುಖ್ಯವಾದುದು. ಎಲ್ಲರೂ ಕರ್ತವ್ಯ ಎಂದು ಭಾವಿಸಿ ಮತದಾನ ಮಾಡಬೇಕು. ಅದನ್ನು ಹಕ್ಕು ಎಂದು ತಿಳಿಯುವುದಕ್ಕಿಂತಲೂ ಹೆಚ್ಚಾಗಿ ಕರ್ತವ್ಯ ಎಂದು ಅರಿತುಕೊಂಡರೆ ಮತದಾರರ ಜವಾಬ್ದಾರಿಯ ಅರಿವಾಗುತ್ತದೆ. ಮತದಾನದ ಜವಾಬ್ದಾರಿಯನ್ನು ಚಾಚೂತಪ್ಪದೆ ನಿರ್ವಹಿಸುವುದು ಎಲ್ಲ ಮತದಾರರ ಪ್ರಾಥಮಿಕ ಕರ್ತವ್ಯ.
ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಯಾರೊಬ್ಬರೂ ಸೂಕ್ತ ಅಲ್ಲ ಎಂಬ ಭಾವನೆ ಇದ್ದರೂ ಮತದಾನಕ್ಕೆ ಗೈರು ಹಾಜರಾಗಬಾರದು. ಮತಗಟ್ಟೆಗೆ ಹೋಗಿ ‘ನೋಟಾ’ ಆಯ್ಕೆಗೆ ಮತ ಚಲಾಯಿಸಬೇಕು. ಯಾವಾಗಲೂ ನಮ್ಮ ದೇಶದಲ್ಲಿ ಚುನಾವಣೆಗಳು ನಡೆದಾಗ ಗ್ರಾಮೀಣ ಪ್ರದೇಶದ ಜನರು ಮತ ಚಲಾಯಿಸುವುದನ್ನು ಕರ್ತವ್ಯ ಎಂದು ಭಾವಿಸಿ ಸಂಭ್ರಮಿಸುತ್ತಾರೆ. ಆದರೆ, ನಗರ ಪ್ರದೇಶಗಳ ಜನರು ಮತದಾನಕ್ಕೂ ತಮಗೂ ಸಂಬಂಧ ಇಲ್ಲ ಎಂಬಂತೆ ವರ್ತಿಸಿ, ಮತಗಟ್ಟೆಯಿಂದ ದೂರ ಉಳಿಯುತ್ತಾರೆ.
ಈ ಲೋಕಸಭಾ ಚುನಾವಣೆಯಲ್ಲಿ ಮತದಾನದ ಅವಕಾಶ ಹೊಂದಿರುವ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಲಿ. ಮತದಾನ ಮಾಡದವರು ರಾಜಕೀಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಮಾತನಾಡುವ ಅಧಿಕಾರವನ್ನೇ ಹೊಂದಿರುವುದಿಲ್ಲ ಎಂಬುದು ನನ್ನ ಭಾವನೆ.
ಎನ್. ಸಂತೋಷ್ ಹೆಗ್ಡೆ,
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮತ್ತು ಕರ್ನಾಟಕದ ಮಾಜಿ ಲೋಕಾಯುಕ್ತರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.