ಉತ್ತರ ಪ್ರದೇಶದ 9 ಲೋಕಸಭಾ ಕ್ಷೇತ್ರಗಳಲ್ಲಿ ಮಹಾಮೈತ್ರಿಯ ಅಭ್ಯರ್ಥಿಗೆ ಕಾಂಗ್ರೆಸ್ ಸೋಲುಣಿಸಿತೇ? ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಇಂಥಹದ್ದೊಂದು ಚರ್ಚೆ ಆರಂಭವಾಗಿದೆ. ಮಹಾಮೈತ್ರಿ ಅಭ್ಯರ್ಥಿಯ ವಿರುದ್ಧ ಬಿಜೆಪಿ ಅಭ್ಯರ್ಥಿ ಪಡೆದ ಗೆಲುವಿನ ಅಂತರಕ್ಕಿಂತ ಕಾಂಗ್ರೆಸ್ ಹೆಚ್ಚು ಮತಗಳನ್ನು ಪಡೆದ 9 ಕ್ಷೇತ್ರಗಳ ಮತಹಂಚಿಕೆಯ ವಿವರ ಇದರಲ್ಲಿದೆ.
* ಎಸ್‌ಪಿ ಮತ್ತು ಬಿಎಸ್‌ಪಿಗಳು ಮೈತ್ರಿ ಮಾಡಿಕೊಂಡಿದ್ದವು. ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧೆಗೆ ಇಳಿದಿತ್ತು
* ‘ಕಾಂಗ್ರೆಸ್ ನಮ್ಮ ಮತಗಳನ್ನು ಕಸಿಯುತ್ತದೆ. ಇದರಿಂದ ಬಿಜೆಪಿಗೆ ಅನುಕೂಲವಾಗಲಿದೆ’ ಎಂಬುದು ಮಹಾಮೈತ್ರಿಕೂಟದ ನಾಯಕರ ಆರೋಪವಾಗಿತ್ತು
* ‘ನಾವು ಸ್ವತಂತ್ರವಾಗಿ ಸ್ಪರ್ಧಿಸುವುದರಿಂದ ಬಿಜೆಪಿಯ ಮತಗಳನ್ನು ಕಸಿಯುತ್ತೇವೆ. ಇದರಿಂದ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗೆ ಅನುಕೂಲವಾಗಲಿದೆ’ ಎಂಬುದು ಕಾಂಗ್ರೆಸ್‌ನ ಪ್ರತಿಪಾದನೆಯಾಗಿತ್ತು
* ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸದೇ ಇದ್ದಿದ್ದರೆ, ಕಾಂಗ್ರೆಸ್‌ಗೆ ಬಂದಿರುವ ಮತಗಳೆಲ್ಲವೂ ಮೈತ್ರಿಕೂಟದ ಅಭ್ಯರ್ಥಿಗೇ ಬರುತ್ತಿತ್ತು ಎಂಬುದಕ್ಕೆ ಖಾತರಿ ಇರಲ್ಲ. ಆದರೆ ಹಾಗೆ ಆಗುವ ಸಾಧ್ಯತೆ ಇತ್ತು
* ಕಾಂಗ್ರೆಸ್‌ಗೆ ಬಂದಿರುವ ಮತಗಳು ಬಿಜೆಪಿ ಮತ್ತು ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ಹಂಚಿಹೋಗುವ ಸಾಧ್ಯತೆಯೂ ಇತ್ತು
* ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಅವರು ಫಿರೋಜಾಬಾದ್‌ನಲ್ಲಿ ತಮ್ಮದೇ ಪ್ರತ್ಯೇಕ ಪಕ್ಷದ ಮೂಲಕ ಕಣಕ್ಕೆ ಇಳಿದಿದ್ದರು. ಇಲ್ಲಿಯೂ ಮೈತ್ರಿಕೂಟದ ಅಭ್ಯರ್ಥಿಗೆ ಸೋಲಾಗಿದೆ. ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳನ್ನು ಶಿವಪಾಲ್ ಯಾದವ್ ಪಡೆದಿದ್ದಾರೆ
* ಈ ಎಲ್ಲಾ ಕ್ಷೇತ್ರಗಳಲ್ಲೂ ಮೈತ್ರಿಕೂಟದ ಅಭ್ಯರ್ಥಿಗಳು ಗೆದಿದ್ದರೂ, ಅದರಿಂದ ಬಿಜೆಪಿಗೆ ಯಾವುದೇ ನಷ್ಟವಿರಲಿಲ್ಲ. ಈ 10 ಕ್ಷೇತ್ರಗಳಲ್ಲಿ ಸೋತಿದ್ದರೂ ಸರ್ಕಾರ ರಚಿಸಲು ಬೇಕಿದ್ದ ಸರಳ ಬಹುಮತಕ್ಕಿಂತ ಹೆಚ್ಚು ಸ್ಥಾನಗಳು ಬಿಜೆಪಿ ಬಳಿ ಇವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.