ADVERTISEMENT

Karnataka Election 2023: ಹಾವೇರಿ ಜಿಲ್ಲೆಯ ಕ್ಷೇತ್ರದ ಕೂಗು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2023, 21:23 IST
Last Updated 23 ಏಪ್ರಿಲ್ 2023, 21:23 IST
ಹಾವೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ ನಾಮಪತ್ರ ಸಲ್ಲಿಸುವ ಮುನ್ನ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. (ಪ್ರಾತಿನಿಧಿಕ)
ಹಾವೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ ನಾಮಪತ್ರ ಸಲ್ಲಿಸುವ ಮುನ್ನ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. (ಪ್ರಾತಿನಿಧಿಕ)   

ಕ್ಷೇತ್ರ:  ಶಿಗ್ಗಾವಿ–ಸವಣೂರು

l ಶಾಸಕ: ಬಸವರಾಜ ಬೊಮ್ಮಾಯಿ (ಬಿಜೆಪಿ)

4 ಜಾನಪದ ವಿಶ್ವವಿದ್ಯಾಲಯ ಆರಂಭವಾಗಿ 10 ವರ್ಷ ಕಳೆದರೂ ಕಾಯಂ ಸಿಬ್ಬಂದಿ ನೇಮಕವಾಗಿಲ್ಲ ಹಾಗೂ ಹೆಚ್ಚಿನ ಅನುದಾನವಿಲ್ಲದೆ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿವೆ. ಜಾನಪದ ಕಲಾವಿದರ ತವರೂರು ಎನಿಸಿದ ಶಿಗ್ಗಾವಿ ಪಟ್ಟಣದಲ್ಲಿ ಕಲಾಮಂದಿರ ನಿರ್ಮಾಣವಾಗಬೇಕು. ಬಂಕಾಪುರದಲ್ಲಿ ಕ್ರೀಡಾಂಗಣ ನಿರ್ಮಾಣವಾಗಬೇಕು ಹಾಗೂ ನವಿಲುಧಾಮ ಅಭಿವೃದ್ಧಿಪಡಿಸಬೇಕು.

ADVERTISEMENT

l ಕ್ಷೇತ್ರ: ಹಾವೇರಿ

l ಶಾಸಕ: ನೆಹರು ಓಲೇಕಾರ (ಬಿಜೆಪಿ)

4ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ 24x7 ಕುಡಿಯುವ ನೀರಿನ ಯೋಜನೆ ಮತ್ತು ಒಳಚರಂಡಿ ಯೋಜನೆ ನನೆಗುದಿಗೆ ಬಿದ್ದಿವೆ. ಹಾವೇರಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಸ್ಥಾಪನೆಯಾಗಬೇಕು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. 

l ಕ್ಷೇತ್ರ: ಹಿರೇಕೆರೂರು

l ಶಾಸಕ: ಬಿ.ಸಿ.ಪಾಟೀಲ (ಬಿಜೆಪಿ)

4ನೂತನ ತಾಲ್ಲೂಕು ಕೇಂದ್ರವಾಗಿ ರಟ್ಟೀಹಳ್ಳಿ ನಾಲ್ಕು ವರ್ಷ ಪೂರೈಸಿದರೂ ಇಲ್ಲಿ ತಾಲ್ಲೂಕುಮಟ್ಟದ ಸರ್ಕಾರಿ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಕೈಗಾರಿಕಾ ವಲಯ ಸ್ಥಾಪನೆಯಾಗಬೇಕು. ಬಡವಿದ್ಯಾರ್ಥಿಗಳಿಗಾಗಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಯ ವ್ಯಾಪ್ತಿಯ ವಸತಿ ನಿಲಯಗಳನ್ನು ಸ್ಥಾಪಿಸಬೇಕು.

l ಕ್ಷೇತ್ರ: ರಾಣೆಬೆನ್ನೂರು

l ಶಾಸಕ: ಅರುಣಕುಮಾರ ಪೂಜಾರ (ಬಿಜೆಪಿ)

4ತುಂಗಾ ಮೇಲ್ದಂಡೆ ಕಾಲುವೆಗೆ ಜಮೀನು ಕಳೆದುಕೊಂಡ ತಾಲ್ಲೂಕಿನ ರೈತರಿಗೆ ಭೂ ಪರಿಹಾರ ಸಿಕ್ಕಿಲ್ಲ. ನಗರದ ಸುತ್ತ ವರ್ತುಲ ರಸ್ತೆ ನಿರ್ಮಾಣವಾಗಬೇಕು. ತುಂಗಭದ್ರಾ ನದಿಗೆ ಅಡ್ಡಲಾಗಿ ಮುದೇನೂರು ಬಳಿ ಚೆಕ್‌ ಡ್ಯಾಂ ನಿರ್ಮಾಣ ಮಾಡಬೇಕು. ‘ಮೆಕ್ಕೆಜೋಳ ಪಾರ್ಕ್‌’ ನಿರ್ಮಾಣವಾಗಬೇಕು. ಕೃಷ್ಣಮೃಗ ಅಭಯಾರಣ್ಯ ಅಭಿವೃದ್ಧಿಪಡಿಸಬೇಕು. 

l ಕ್ಷೇತ್ರ: ಬ್ಯಾಡಗಿ

l ಶಾಸಕ: ವಿರೂಪಾಕ್ಷಪ್ಪ ಬಳ್ಳಾರಿ (ಬಿಜೆಪಿ)

4ಬ್ಯಾಡಗಿ ಪಟ್ಟಣದ ಮುಖ್ಯರಸ್ತೆ ಕಿರಿದಾಗಿರುವ ಕಾರಣ ನಿತ್ಯ ಸಂಚಾರ ದಟ್ಟಣೆ ಉಂಟಾಗಿ, ಜನರು ರೋಸಿ ಹೋಗಿದ್ದಾರೆ. ಮುಖ್ಯರಸ್ತೆ ವಿಸ್ತರಣೆಯಾಗಬೇಕು ಎಂದು 12 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸರ್ವಿಸ್‌ ರಸ್ತೆಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.  

l ಕ್ಷೇತ್ರ:ಹಾನಗಲ್

l ಶಾಸಕ: ಶ್ರೀನಿವಾಸ್ ಮಾನೆ (ಕಾಂಗ್ರೆಸ್)

4ಹಾನಗಲ್ ಪಟ್ಟಣದ ಮುಖ್ಯರಸ್ತೆಯನ್ನು ವಿಸ್ತರಣೆ ಮಾಡುವ ಮೂಲಕ ಅಭಿವೃದ್ಧಿಪಡಿಸಬೇಕು. ಪಟ್ಟಣಕ್ಕೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ‘ಒಂದು ಜಿಲ್ಲೆ ಹಲವು ಬೆಳೆ’ ಯೋಜನೆಯಡಿ ಘೋಷಣೆಯಾದ ಮಾವು ಬೆಳೆಗೆ ಹಾನಗಲ್ ಕ್ಷೇತ್ರದಲ್ಲಿ ಪ್ರೋತ್ಸಾಹ ಮತ್ತು ಮಾವು ಸಂಸ್ಕರಣಾ ಘಟಕ ನಿರ್ಮಾಣಗೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.