ADVERTISEMENT

ಎಂಥಾ ಮಾತು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 1:06 IST
Last Updated 20 ಏಪ್ರಿಲ್ 2024, 1:06 IST
ಶರದ್‌ ಪವಾರ್‌
ಶರದ್‌ ಪವಾರ್‌   

ಅಯೋಧ್ಯೆಯ ರಾಮ ಮಂದಿರ ವಿಚಾರವನ್ನು ಯಾರೊಬ್ಬರೂ ಚರ್ಚಿಸುತ್ತಿಲ್ಲ. ಅದು ಮುಗಿದು ಹೋದ ವಿಷಯ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಇದರಿಂದ ಯಾವುದೇ ರಾಜಕೀಯ ಲಾಭ ದೊರಕದು. ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ್ದರೂ ಸೀತಾ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿಲ್ಲ ಎಂದು ಕೆಲವು ಮಹಿಳೆಯರು ನನ್ನಲ್ಲಿ ದೂರಿದ್ದಾರೆ

ಶರದ್‌ ಪವಾರ್‌, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ

ಶರದ್‌ ಪವಾರ್‌ ಅವರು ಅಯೋಧ್ಯೆಯ ರಾಮ ಮಂದಿರದ ಕುರಿತು ಮಾಹಿತಿ ಸಂಗ್ರಹಿಸಿ, ಬಳಿಕ ಹೇಳಿಕೆ ನೀಡಬೇಕಿತ್ತು. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಿರುವುದು ಬಾಲ ರಾಮನ ಮೂರ್ತಿ. ಪವಾರ್‌ ಅವರು ಅಯೋಧ್ಯೆ ವಿಚಾರವಾಗಿ ರಾಜಕೀಯ ಮಾಡಲು ಆಸಕ್ತರಾಗಿದ್ದಾರೆ. ತಮ್ಮ ಸೊಸೆಯನ್ನು ಹೊರಗಿನವರು ಎಂದು ಹೇಳಿದ್ದ ಪವಾರ್‌ ಅವರು, ಈಗ ಸೀತಾ ಮಾತೆಯ ಬಗ್ಗೆ ಕಾಳಜಿ ತೋರಿಸುತ್ತಿದ್ದಾರೆ. ಇದು ಕಪಟತನದ ಪರಮಾವಧಿ

ADVERTISEMENT

ಚಂದ್ರಶೇಖರ್‌ ಭಾವಂಕುಲೆ, ಬಿಜೆಪಿ ಮಹಾರಾಷ್ಟ್ರ ರಾಜ್ಯ ಘಟಕ ಅಧ್ಯಕ್ಷ

ಚಂದ್ರಶೇಖರ್‌ ಭಾವಂಕುಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.