ADVERTISEMENT

ಎಂಥಾ ಮಾತು | ಎಸ್‌. ಜೈಶಂಕರ್‌ ಮತ್ತು ಅಖಿಲೇಶ್‌ ಯಾದವ್‌ ಹೇಳಿಕೆಗಳು

​ಪ್ರಜಾವಾಣಿ ವಾರ್ತೆ
Published 29 ಮೇ 2024, 0:28 IST
Last Updated 29 ಮೇ 2024, 0:28 IST
ಎಸ್‌. ಜೈಶಂಕರ್‌
ಎಸ್‌. ಜೈಶಂಕರ್‌   

ವಿಶ್ವದಾದ್ಯಂತ ಉದ್ವಿಗ್ನ ಸ್ಥಿತಿ ಇದ್ದು, ರಷ್ಯಾ–ಉಕ್ರೇನ್, ಇಸ್ರೇಲ್‌– ಗಾಜಾ–ಇರಾನ್‌ ನಡುವಿನ ಬಿಕ್ಕಟ್ಟು ಸದ್ಯಕ್ಕೆ ಶಮನವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ದೇಶಕ್ಕೆ ಸ್ಥಿರ ಸರ್ಕಾರ ಮತ್ತು ಬಲಿಷ್ಠ ನಾಯಕನ ಅಗತ್ಯವಿದೆ. ರಷ್ಯಾ–ಉಕ್ರೇನ್‌ ಯುದ್ಧದ ಸಂದರ್ಭದಲ್ಲಿ ನಿಮ್ಮ ಕುಟುಂಬದವರು ಉಕ್ರೇನ್‌ನಲ್ಲಿ ಇದ್ದಿದ್ದರೆ, ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರಿರಬೇಕೆಂದು ಬಯಸುವಿರೋ ಅಥವಾ ಬೇರೆ ಯಾರಾದರೂ ಇರಬೇಕೆಂದು ಬಯಸುವಿರೋ? 

- ಎಸ್‌. ಜೈಶಂಕರ್‌, ಕೇಂದ್ರ ಸಚಿವ 

ಆಡಳಿತಾರೂಢ ಪಕ್ಷವು ಸದಾ ತನ್ನ ಬುಲ್ಡೋಜರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟುಕೊಂಡಿರುತ್ತದೆ. ಆದರೆ ಅದನ್ನು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಶಾಮೀಲಾಗಿರುವವರ ವಿರುದ್ಧ ಬಳಸಲ್ಲ. ಜೂನ್‌ 4ರ ನಂತರ ಸಂತೋಷದ ದಿನಗಳು ಬರಲಿವೆ. ಕೇಂದ್ರದ ‘ಮಂತ್ರಿ ಮಂಡಲ’ ಮತ್ತು ‘ಮಾಧ್ಯಮ ಮಂಡಲ’ ಬದಲಾಗಲಿದೆ. ಈ ಬಾರಿಯ ಚುನಾವಣೆಯು ಸಂವಿಧಾನವನ್ನು ರಕ್ಷಿಸಲಿದೆ. ಕೇಂದ್ರದಲ್ಲಿ ‘ಇಂಡಿಯಾ’ ಸರ್ಕಾರ ರಚನೆಯಾಗಲಿದೆ

ADVERTISEMENT

- ಅಖಿಲೇಶ್‌ ಯಾದವ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ

ಅಖಿಲೇಶ್ ಯಾದವ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.