ADVERTISEMENT

ಎಂಥಾ ಮಾತು!

​ಪ್ರಜಾವಾಣಿ ವಾರ್ತೆ
Published 16 ಮೇ 2024, 4:38 IST
Last Updated 16 ಮೇ 2024, 4:38 IST
<div class="paragraphs"><p>ತೇಜಸ್ವಿ ಯಾದವ್</p></div>

ತೇಜಸ್ವಿ ಯಾದವ್

   

ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ನಾನು ನಡೆಸುತ್ತಿರುವ ಹೋರಾಟಕ್ಕೆ ನಿತೀಶ್‌ ಕುಮಾರ್‌ (ಜೆಡಿಯು ಅಧ್ಯಕ್ಷ) ಅವರ ಪೂರ್ಣ ಬೆಂಬಲ ಇದೆ. ‘ಚಾಚಾ’ (ನಿತೀಶ್) ಅವರನ್ನು ಬಿಜೆಪಿ ಹೈಜಾಕ್‌ ಮಾಡಿರಬಹುದು. ಆದರೆ 2014ರಿಂದ ದೇಶದ ಆಡಳಿತ (ಬಿಜೆಪಿ) ನಡೆಸುತ್ತಿರುವವರನ್ನು ಅಧಿಕಾರದಿಂದ ದೂರವಿಡುವುದರ ಮಹತ್ವವನ್ನು ಅವರು ನನಗೆ ಕಲಿಸಿಕೊಟ್ಟಿದ್ದರು. ಆ ಹೋರಾಟವನ್ನು ಮುನ್ನಡೆಸುತ್ತಿರುವ ಕಾರಣ ಅವರ ಆಶೀರ್ವಾದ ನನ್ನೊಂದಿಗೆ ಇದೆ. ಪ್ರಧಾನಿ ಅವರು ನಾಮಪತ್ರ ಸಲ್ಲಿಸುವ ದಿನದಂದೇ ನಿತೀಶ್ ಅನಾರೋಗ್ಯಕ್ಕೆ ಒಳಗಾಗಿದ್ದನ್ನು ನೀವು ಗಮನಿಸಿರಬಹುದು. ನಾನು ಅವರಿಂದ ಪೂರ್ಣ ಬೆಂಬಲ ಪಡೆಯುತ್ತಿದ್ದೇನೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ

ತೇಜಸ್ವಿ ಯಾದವ್, ಆರ್‌ಜೆಡಿ ಮುಖಂಡ

ADVERTISEMENT

ತೇಜಸ್ವಿ ಯಾದವ್ ಅವರು ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಹೀನಾಯ ಸೋಲು ಎದುರಾಗಲಿದೆ ಎಂಬುದು ನಾಲ್ಕು ಹಂತಗಳ ಮತದಾನದ ಬಳಿಕ ಇಂಡಿಯಾ ಮೈತ್ರಿಕೂಟದ ನಾಯಕರಿಗೆ ಸ್ಪಷ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್‌ಡಿಎಯು 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರ ಸಮರ್ಥ ನಾಯಕತ್ವದಲ್ಲಿ ಬಿಹಾರದಲ್ಲಿ ಎಲ್ಲ 40 ಸ್ಥಾನಗಳನ್ನೂ ಎನ್‌ಡಿಎ ತನ್ನದಾಗಿಸಿಕೊಳ್ಳಲಿದೆ. ತೇಜಸ್ವಿ ಆತಂಕಕ್ಕೆ ಒಳಗಾಗಿದ್ದಾರೆ

ಗಿರಿರಾಜ್‌ ಸಿಂಗ್, ಕೇಂದ್ರ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.