ADVERTISEMENT

ಎಂಥಾ ಮಾತು!

​ಪ್ರಜಾವಾಣಿ ವಾರ್ತೆ
Published 21 ಮೇ 2024, 23:30 IST
Last Updated 21 ಮೇ 2024, 23:30 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌    

ಹೇಮಂತ್ ಸೊರೇನ್‌ ಪತ್ನಿ ಕಲ್ಪನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಝಾನ್ಸಿ ರಾಣಿ’ಯ ರೀತಿಯಲ್ಲಿ ಸವಾಲು ಹಾಕುತ್ತಿದ್ದಾರೆ. ಹೇಮಂತ್‌ ಅಥವಾ ನಾನು ತಪ್ಪಿತಸ್ಥ ಎಂದು ಯಾವ ನ್ಯಾಯಾಲಯವೂ ಹೇಳಿಲ್ಲ. ಎಎಪಿ ಮತ್ತು ಜೆಎಂಎಂಅನ್ನು ನಾಶ ಮಾಡಲು ಪ್ರಧಾನಿ ಸಂಚು ರೂಪಿಸಿದ್ದರು. ಆದರೆ ನಾವು ಶಕ್ತಿ ಹೆಚ್ಚಿಸಿಕೊಂಡೆವು. ದೆಹಲಿ, ಪಂಜಾಬ್‌ ಮತ್ತು ಜಾರ್ಖಂಡ್‌ನಲ್ಲಿ ಸರ್ಕಾರ ಉರುಳಿಸುವ
ಬಿಜೆಪಿ ತಂತ್ರ ಫಲಿಸಲಿಲ್ಲ

ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

(ಜಾರ್ಖಂಡ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ)

ADVERTISEMENT
ರಾಜನಾಥ್‌ ಸಿಂಗ್

ಪುಲ್ವಾಮಾ ಮತ್ತು ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನದ ಸಂಘಟನೆಗಳ ಕೈವಾಡವಿದೆ ಎಂದು ಪಾಕ್‌ನ ಮಾಜಿ ಸಚಿವ ಫವಾದ್‌ ಹುಸೇನ್‌ ಈ ಹಿಂದೆ ಹೇಳಿದ್ದರು. ಅದೇ ಫವಾದ್‌ ಹುಸೇನ್‌ ಪ್ರಧಾನಿ ಮೋದಿ ಅವರನ್ನು ಹೊಗಳುತ್ತಿಲ್ಲ. ಅದರ ಬದಲು ರಾಹುಲ್‌ ಬಗ್ಗೆ ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ. ನಮ್ಮ ಶತ್ರುಗಳಿಂದ ಹೊಗಳಿಕೆಗೆ ಒಳಗಾಗಿರುವ ನಾಯಕನಿಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕೇ?

ರಾಜನಾಥ್‌ ಸಿಂಗ್, ರಕ್ಷಣಾ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.