ಮರಾಠ ಸಮುದಾಯಕ್ಕೆ ಮೀಸಲಾತಿ ನಿರಾಕರಿಸಿರುವುದಕ್ಕೆ ಮತ್ತು ಪ್ರತಿಭಟನಕಾರರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿರುವುದಕ್ಕೆ, ಆ ಸಮುದಾಯದವರು ‘ಮಹಾಯುತಿ’ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ರಾಜ್ಯದ ಬಿಜೆಪಿ ಮುಖಂಡರಿಂದಾಗಿ ಮೋದಿ ಅವರಿಗೆ ಕಷ್ಟಕಾಲ ಬಂದಿದೆ. ಈ ಕಾರಣಕ್ಕೆ ಅವರು ರಾಜ್ಯದಾದ್ಯಂತ ಚುನಾವಣಾ ರ‍್ಯಾಲಿಗಳನ್ನು ನಡೆಸುತ್ತಿದ್ದಾರೆ. ‘ಮಹಾಯುತಿ’ ಮೈತ್ರಿಕೂಟ ಮಾತ್ರವಲ್ಲ, ‘ಮಹಾ ವಿಕಾಸ್ ಆಘಾಡಿ’ ಕೂಡ ಮರಾಠ ಸಮುದಾಯಕ್ಕೆ ಅನ್ಯಾಯ ಮಾಡಿದೆ-ಮನೋಜ್ ಜರಾಂಗೆ, ಹೋರಾಟಗಾರ
ಪಿಲಿಭಿತ್‌ನಿಂದ ಸ್ಪರ್ಧಿಸಲು ವರುಣ್ ಗಾಂಧಿಗೆ ಟಿಕೆಟ್ ಕೈತಪ್ಪಲು ಕೇಂದ್ರ ಸರ್ಕಾರವನ್ನು ಟೀಕಿಸಿರುವ ಆತನ ಬರಹಗಳೇ ಕಾರಣವಾಗಿರಬಹುದು. ಪಿಲಿಭಿತ್‌ನಿಂದ ವರುಣ್ ಸ್ಪರ್ಧಿಸಿದ್ದರೆ ಚೆನ್ನಾಗಿರುತ್ತಿತ್ತು, ಆದರೆ ಅದು ಪಕ್ಷದ ನಿರ್ಧಾರವಾಗಿತ್ತು. ಟಿಕೆಟ್ ಸಿಗದಿದ್ದರೂ ಆತ ಚೆನ್ನಾಗಿ ಕೆಲಸ ಮಾಡಬಲ್ಲ-ಮೇನಕಾ ಗಾಂಧಿ, ಬಿಜೆಪಿ ನಾಯಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.