ADVERTISEMENT

ಎಂಥಾ ಮಾತು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 1:14 IST
Last Updated 30 ಏಪ್ರಿಲ್ 2024, 1:14 IST
<div class="paragraphs"><p><strong>ಅಮಿತ್‌ ಶಾ, ಕೇಂದ್ರ ಗೃಹ ಸಚಿವ ಮತ್ತು&nbsp;ಸುಪ್ರಿಯಾ ಶ್ರೀನೇತ್‌, ಕಾಂಗ್ರೆಸ್‌ ವಕ್ತಾರೆ</strong></p></div>

ಅಮಿತ್‌ ಶಾ, ಕೇಂದ್ರ ಗೃಹ ಸಚಿವ ಮತ್ತು ಸುಪ್ರಿಯಾ ಶ್ರೀನೇತ್‌, ಕಾಂಗ್ರೆಸ್‌ ವಕ್ತಾರೆ

   

ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಮರಳುವುದು ಖಚಿತ. ಅಕಸ್ಮಾತ್, ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಏನಾಗಬಹುದು ಎಂದು ಯೋಚಿಸಿ. ಆಗ ಪ್ರಧಾನಿ ಯಾರಾಗುತ್ತಾರೆ? ಸ್ಟಾಲಿನ್, ಶರದ್ ಪವಾರ್, ಮಮತಾ ಬ್ಯಾನರ್ಜಿ ಅಥವಾ ರಾಹುಲ್ ಗಾಂಧಿ ಪ್ರಧಾನಿ ಆಗುವರೇ? ಅವರೆಲ್ಲರೂ ಪ್ರಧಾನಿ ಹುದ್ದೆಯನ್ನು ತಲಾ ಒಂದು ವರ್ಷ ಹಂಚಿಕೊಳ್ಳಲು ಬಯಸುತ್ತಾರೆ. ಅವರು ದೇಶವನ್ನು ಯಾವ ರೀತಿ ಮುನ್ನಡೆಸಬಹುದು? ನಮಗೆ ‘ಮಜ್‌ಬೂತ್’ (ಬಲಿಷ್ಠ) ಪ್ರಧಾನಿ ಬೇಕೇ ಹೊರತು, ‘ಮಜ್‌ಬೂರ್’ (ದುರ್ಬಲ) ಪ್ರಧಾನಿ ಅಲ್ಲ

ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ADVERTISEMENT

‘ಇಂಡಿಯಾ ಮೈತ್ರಿಕೂಟದಿಂದ ಸಂಭವನೀಯ ಪ್ರಧಾನಿ ಅಭ್ಯರ್ಥಿ ಯಾರಾಗಬಹುದು ಎಂಬುದರ ಬಗ್ಗೆ ಗೃಹ ಸಚಿವರು ಮಾತನಾಡುತ್ತಿರುವುದು ನನಗೆ ತುಂಬಾ ಖುಷಿ ತಂದಿದೆ. ಕನಿಷ್ಠ ಪಕ್ಷ ಮೋದಿ ಅವರು ಅಧಿಕಾರಕ್ಕೆ ಬರುತ್ತಿಲ್ಲ ಎಂಬುದು ಅವರಿಗೆ ಅರಿವಾಗಿದೆ. ನಮಗೆ 400 ಸ್ಥಾನಗಳು ಸಿಗಲಿದೆ ಎಂದು ಹೇಳುತ್ತಿದ್ದವರು ಈಗ, ಮುಂದಿನ ಸರ್ಕಾರ ಇಂಡಿಯಾ ಮೈತ್ರಿಕೂಟದ್ದು ಎಂಬುದನ್ನು ಒಪ್ಪಿಕೊಳ್ಳುತ್ತಿದ್ದಾರೆ

ಸುಪ್ರಿಯಾ ಶ್ರೀನೇತ್‌, ಕಾಂಗ್ರೆಸ್‌ ವಕ್ತಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.