ಜಿ.ಎಂ. ಸಿದ್ದೇಶ್ವರ, ದಾವಣಗೆರೆ
ತಮಗೆ ಟಿಕೆಟ್ ನಿರಾಕರಿಸಿದ್ದರೂ, ಪತ್ನಿಯನ್ನೇ ಕ್ಷೇತ್ರದಲ್ಲಿ ಕಣಕ್ಕಿಳಿಸಿರುವುದರಿಂದ ಚುನಾವಣೆಯಲ್ಲಿ ಸಕ್ರಿಯ. ಪತ್ನಿಯನ್ನು ಗೆಲುವಿನ ದಡ ಮುಟ್ಟಿಸಬೇಕೆಂದು ಅವಿರತ ಶ್ರಮ ಹಾಕಿದ್ದಾರೆ.
****
ಶಿವಕುಮಾರ್ ಉದಾಸಿ, ಹಾವೇರಿ
ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ. ಆರಂಭದಿಂದ ಕೊನೆಯ ದಿನದವರೆಗೆ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಪ್ರಚಾರದಲ್ಲಿ ಸಕ್ರಿಯ
****
ಕರಡಿ ಸಂಗಣ್ಣ, ಕೊಪ್ಪಳ
ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಬಂಡಾಯ ಎದ್ದು, ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆ. ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ಪೂರ್ಣ ಸಕ್ರಿಯ
****
ಮಂಗಲಾ ಅಂಗಡಿ, ಬೆಳಗಾವಿ
ತಮಗೆ ಟಿಕೆಟ್ ನಿರಾಕರಿಸಿದ್ದರೂ ಬೀಗರಾದ ಜಗದೀಶ ಶೆಟ್ಟರ್ ಅವರನ್ನೇ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವುದರಿಂದ ಪ್ರಚಾರದಲ್ಲಿ ಸಕ್ರಿಯೆ
****
ಅನಂತಕುಮಾರ್ ಹೆಗಡೆ, ಉತ್ತರ ಕನ್ನಡ
ಟಿಕೆಟ್ ನಿರಾಕರಿಸಿದ ಬಳಿಕ ಬಿಜೆಪಿಯಿಂದ ಸಂಪೂರ್ಣ ದೂರ. ಚುನಾವಣಾ ಪ್ರಚಾರದ ಯಾವುದೇ ಕೆಲಸಗಳಲ್ಲಿ ಭಾಗಿಯಾಗಿಲ್ಲ
****
ವೈ.ದೇವೇಂದ್ರಪ್ಪ, ಬಳ್ಳಾರಿ
ಟಿಕೆಟ್ ನಿರಾಕರಣೆ ಬಳಿಕ ಪಕ್ಷದ ಪರ ಪ್ರಚಾರದಲ್ಲಿ ಭಾಗಿಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಸಭೆಯಲ್ಲಷ್ಟೇ ಭಾಗಿ
ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆ
227: ಒಟ್ಟು ಅಭ್ಯರ್ಥಿಗಳು:
206: ಪುರುಷರು
21: ಮಹಿಳೆಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.