ADVERTISEMENT

ಎಂಥಾ ಮಾತು: ಯೋಗಿ ಆದಿತ್ಯನಾಥ ಮತ್ತು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಮೇ 2024, 3:06 IST
Last Updated 14 ಮೇ 2024, 3:06 IST
   

ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ಭಗವಾನ್‌ ರಾಮನ ಇಚ್ಛೆಯಾಗಿದೆ. ನಾಲ್ಕನೇ ಹಂತದ ಮತದಾನದ ಬಳಿಕ ಮೋದಿ ಅಲೆ, ಸುನಾಮಿಯಾಗಿ ಬದಲಾಗಿದೆ. ‘ರಾಮದ್ರೋಹಿ’ಗಳು ಮಾತ್ರ ಮೋದಿ ಅವರನ್ನು ವಿರೋಧಿಸುತ್ತಿದ್ದಾರೆ. ರಾಹುಲ್ ಗಾಂಧಿಗೂ, ಪಾಕಿಸ್ತಾನಕ್ಕೂ ಏನು ಸಂಬಂಧ ಎಂಬುದೇ ನನಗೆ ತಿಳಿಯುತ್ತಿಲ್ಲ. ಭಾರತದಲ್ಲಿ ನೆಲೆಸಿ, ರಾಯ್‌ಬರೇಲಿಯಲ್ಲಿ ಮತ ಕೇಳುವ ಅವರು ಪಾಕಿಸ್ತಾನದಿಂದ ಬೆಂಬಲ ಪಡೆಯುತ್ತಾರೆ – ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ

ಹೇಮಂತ್‌ ಸೊರೇನ್‌ ಅವರನ್ನು ನೀವು ಬಂಧಿಸಿದ್ದೀರಿ. ಅದಾನಿ ಮತ್ತು ಅಂಬಾನಿ ಅವರನ್ನು ಏಕೆ ಬಂಧಿಸುತ್ತಿಲ್ಲ? ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಬಂಧನಕ್ಕೊಳಗಾಗಿರುವ ‘ಇಂಡಿಯಾ’ ಕೂಟದ ಎಲ್ಲಾ ನಾಯಕರನ್ನು ನಾವು ಅಧಿಕಾರಕ್ಕೆ ಬಂದರೆ ಬಂಧಮುಕ್ತಗೊಳಿಸಲಾಗುವುದು. ಮೋದಿ ಅವರು ಮತ್ತೊಂದು ಅವಧಿಗೆ ಅಧಿಕಾರಕ್ಕೇರಿದರೆ, ಭವಿಷ್ಯದಲ್ಲಿ ಈ ದೇಶದಲ್ಲಿ ಚುನಾವಣೆಯೇ ನಡೆಯದು. ಪ್ರಜಾಪ್ರಭುತ್ವ ಮತ್ತು ಸಂವಿಧಾನವು ಅಪಾಯದಲ್ಲಿದೆ. ನೀವು ಮೂಲಭೂತ ಹಕ್ಕುಗಳನ್ನು ಕಳೆದುಕೊಂಡರೆ ಗುಲಾಮರಾಗಿ ಬದಲಾಗುತ್ತೀರಿ – ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT