ADVERTISEMENT

ಆಂಧ್ರಪ್ರದೇಶ: ವಿಜಯವಾಡ ಲೋಕಸಭಾ ಕ್ಷೇತ್ರದಲ್ಲಿ ಅಣ್ಣ–ತಮ್ಮನ ನಡುವೆ ಭರ್ಜರಿ ಕಾಳಗ!

ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರಗಳ ಜೊತೆಗೆ ಆಂಧ್ರಪ್ರದೇಶ ವಿಧಾನಸಭೆಯ 175 ಕ್ಷೇತ್ರಗಳಿಗೂ ಇಂದೇ ಚುನಾವಣೆ ನಡೆಯುತ್ತಿದ್ದು ಮತದಾನ ಜೋರಾಗಿ ಸಾಗಿದೆ.

ಪಿಟಿಐ
Published 13 ಮೇ 2024, 3:26 IST
Last Updated 13 ಮೇ 2024, 3:26 IST
<div class="paragraphs"><p>ಕೆ. ಶ್ರೀನಿವಾಸ್,&nbsp;ಕೆ. ಶಿವನಾಥ್</p></div>

ಕೆ. ಶ್ರೀನಿವಾಸ್, ಕೆ. ಶಿವನಾಥ್

   

ವಿಜಯವಾಡ, ಆಂಧ್ರಪ್ರದೇಶ: ಇಂದು ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಅರಂಭವಾಗಿದ್ದು, ಆಂಧ್ರಪ್ರದೇಶವೂ ಸೇರಿದಂತೆ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಆಂಧ್ರಪ್ರದೇಶದ 25 ಲೋಕಸಭಾ ಕ್ಷೇತ್ರಗಳ ಜೊತೆಗೆ ಆಂಧ್ರಪ್ರದೇಶ ವಿಧಾನಸಭೆಯ 175 ಕ್ಷೇತ್ರಗಳಿಗೂ ಇಂದೇ ಚುನಾವಣೆ ನಡೆಯುತ್ತಿದ್ದು ಮತದಾನ ಜೋರಾಗಿ ಸಾಗಿದೆ. ಈಗಾಗಲೇ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಸಿಎಂ ಜಗನ್ಮೋಹನ್ ರೆಡ್ಡಿ ಸೇರಿದಂತೆ ಅನೇಕರು ಮತ ಚಲಾಯಿಸಿದ್ದಾರೆ.

ADVERTISEMENT

ಇನ್ನೊಂದೆಡೆ ಆಂಧ್ರಪ್ರದೇಶದ ವಿಜಯವಾಡ ಲೋಕಸಭಾ ಕ್ಷೇತ್ರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಏಕೆಂದರೆ ಈ ಕ್ಷೇತ್ರದಲ್ಲಿ ಅಣ್ಣ–ತಮ್ಮರ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ಇತ್ತೀಚೆಗೆ ಟಿಡಿಪಿ ತೊರೆದು ವೈಎಸ್‌ಆರ್‌ಸಿಪಿ ಸೇರಿರುವ ಸಂಸದ ಕೆ. ಶ್ರೀನಿವಾಸ್ (ನಾನಿ) ವಿಜಯವಾಡದಿಂದ ವೈಎಸ್‌ಆರ್‌ಸಿಪಿ ಅಭ್ಯರ್ಥಿ. ಇವರ ಎದುರು ಇವರ ಕಿರಿಯ ಸಹೋದರ ಕೆ. ಶಿವನಾಥ್ (ಚಿನ್ನಿ) ಟಿಡಿಪಿ ಅಭ್ಯರ್ಥಿ.

ಸುಮಾರು ವರ್ಷಗಳಿಂದ ರಾಜಕಾರಣದಲ್ಲಿರುವ ಕೆ. ಶ್ರೀನಿವಾಸ್ ಅವರು ಟಿಡಿಪಿಯಿಂದ ಎರಡು ಬಾರಿ ಸಂಸದ ಆಗಿದ್ದರು. ಅಲ್ಲದೇ ಉದ್ಯಮಿಯೂ ಆಗಿ ಗುರುತಿಸಿಕೊಂಡಿರುವ ಇವರು ಕೇಸಿನೇನಿ ಟ್ರಾವೆಲ್ಸ್ ಕಂಪನಿ ಮಾಲೀಕರೂ ಹೌದು.

ಕೆ. ಶಿವನಾಥ್ ಇಲ್ಲಿ ಅಚ್ಚರಿ ಅಭ್ಯರ್ಥಿ. ಅವರ ಸಹೋದರ ಕೆ.ಶ್ರೀನಿವಾಸ್ ಟಿಡಿಪಿ ತೊರೆದಿದ್ದರಿಂದ ಟಿಡಿಪಿ ಶಿವನಾಥ್ ಅವರನ್ನೇ ಅವರ ಎದುರು ಕಣಕ್ಕಳಿಸಿದೆ. ಹೀಗಾಗಿ ಈ ಕ್ಷೇತ್ರ ಹೈ ವೋಲ್ಟೆಜ್ ಕ್ಷೇತ್ರವಾಗಿ ಮಾರ್ಪಟ್ಟಿದ್ದೆ. ಇಬ್ಬರ ಸಹೋದರರ ನಡುವೆಯೂ ತೀವ್ರ ಪೈಪೋಟಿ ಏರ್ಪಟ್ಟಿದೆ.

ಕೆ. ಶಿವನಾಥ್ ಕೂಡ ಉದ್ಯಮಿಯಾಗಿದ್ದು, ರಾಜಕಾರಣದಿಂದ ದೂರ ಉಳಿದ್ದರು. ಆದರೆ, ಬದಲಾದ ಸನ್ನಿವೇಶದಲ್ಲಿ ಅವರು ಅಣ್ಣನ ವಿರುದ್ಧವೇ ಕಣಕ್ಕಿಳಿದಿದ್ದಾರೆ.

ಜೂನ್ 4ರಂದು ಚುನಾವಣಾ ಫಲಿತಾಂಶ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.