ADVERTISEMENT

ಸರ್ವಾಧಿಕಾರಿಗಳ ಜೊತೆ ಮೈತ್ರಿ ಬಗ್ಗೆ ನಾಯ್ಡು,ನಿತೀಶ್ ನಿರ್ಧರಿಸಲಿ: ಸಂಜಯ್ ರಾವುತ್

ಪಿಟಿಐ
Published 5 ಜೂನ್ 2024, 7:27 IST
Last Updated 5 ಜೂನ್ 2024, 7:27 IST
ಸಂಜಯ್ ರಾವುತ್ 
ಸಂಜಯ್ ರಾವುತ್    

ಮುಂಬೈ: ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರು, ಸರ್ವಾಧಿಕಾರಿಗಳ ಜೊತೆ ಮೈತ್ರಿ ಬಗ್ಗೆ ಯೋಚಿಸಬೇಕಿದೆ ಎಂದು ಶಿವಸೇನಾ(ಯುಬಿಟಿ) ಬಣದ ನಾಯಕ ಸಂಯಯ್ ರಾವುತ್ ಹೇಳಿದ್ದಾರೆ.

ಬಿಜೆಪಿಯನ್ನು ಪರೋಕ್ಷವಾಗಿ ಸರ್ವಾಧಿಕಾರಿ ಎಂದು ಕರೆದಿರುವ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಧಾನಿಯಾಗಿ ಇಂಡಿಯಾ ಬಣದ ಸರ್ಕಾರವನ್ನು ಮುನ್ನಡೆಸುವುದಾದರೆ ನಾವು ವಿರೋಧಿಸುವುದಿಲ್ಲ ಎಂದು ಹೇಳಿದ್ದಾರೆ.

ಇಂದು ದೆಹಲಿಯಲ್ಲಿ ಸಭೆ ಸೇರಲಿರುವ ‘ಇಂಡಿಯಾ’ ಬಣದ ನಾಯಕರು, ಮುಂದಿನ ಕಾರ್ಯತಂತ್ರದ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ.

ADVERTISEMENT

ಬಿಜೆಪಿಯು ಸರ್ಕಾರ ರಚಿಸುವಷ್ಟು ಬಹುಮತ ಪಡೆದಿಲ್ಲ. ಪ್ರಧಾನಿ ಮೋದಿ ನೈತಿಕ ಸೋಲನ್ನು ಒಪ್ಪಿಕೊಳ್ಳಬೇಕು. ಮೋದಿ ಬ್ರಾಂಡ್ ಮುಗಿದಿದೆ ಎಂದಿದ್ದಾರೆ.

‘ನಿರಂಕುಶಾಧಿಕಾರಿಗಳ ಜೊತೆ ಮೈತ್ರಿ ಮಾಡಿಕೊಳ್ಳುವುದೇ ಅಥವಾ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಕೆಲಸ ಮಾಡುವುದೇ ಎಂಬ ಬಗ್ಗೆ ಚಂದ್ರಬಾಬು ಮತ್ತು ನಿತೀಶ್ ಕುಮಾರ್ ನಿರ್ಧರಿಸಬೇಕಿದೆ. ಸರ್ವಾಧಿಕಾರಿಗಳ ಜೊತೆ ಅವರು ಹೋಗುವುದಿಲ್ಲ ಎಂದು ನಂಬುತ್ತೇನೆ’ಎಂದು ರಾವುತ್ ಹೇಳಿದ್ದಾರೆ..

ಮಂಗಳವಾರ ಹೊರಬಿದ್ದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟಬಹುಮತಕ್ಕೆ 32 ಸ್ಥಾನಗಳ ಕೊರತೆ ಅನುಭವಿಸಿದೆ. ಟಿಡಿಪಿ, ಜೆಡಿಯು ಮತ್ತು ಇತರೆ ಪಕ್ಷಗಳ ಬೆಂಬಲ ಪಡೆದರೆ ಎನ್‌ಡಿಎ ಅಧಿಕಾರಕ್ಕೆ ಬೇಕಾದಷ್ಟು ಸಂಖ್ಯೆಯನ್ನು ಮುಟ್ಟುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.