ನವದೆಹಲಿ: ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬ ನಡೆಯುತ್ತಿದ್ದು, ಈ ಚುನಾವಣೆಯ ಮೂಲಕ ಭವಿಷ್ಯದತ್ತ ಹೊಸ ಪ್ರಯಾಣ ಆರಂಭವಾಗಲಿದೆ ಎಂದು ಇಡೀ ದೇಶವೇ ನಂಬಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಭಗವಾನ ಮಹಾವೀರ ತೀರ್ಥಂಕರರ 2550ನೇ ನಿರ್ವಾಣ ಮಹೋತ್ಸವದಲ್ಲಿ ಮಾತನಾಡಿದ ಅವರು, ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಾಗಿ ದೇಶ ಈಗ ಸತ್ಯ ಮತ್ತು ಅಹಿಂಸೆಯ ಮಂತ್ರಗಳನ್ನು ಬಿಂಬಿಸುತ್ತಿದೆ ಎಂದು ಹೇಳಿದ್ದಾರೆ.
ಯೋಗ ಹಾಗೂ ಆಯುರ್ವೇದದಂತಹ ಭಾರತದ ಪರಂಪರೆಯನ್ನು ಪ್ರೋತ್ಸಾಹಿಸಲಾಗಿದೆ. ಭಾರತದ ಸಾಂಸ್ಕೃತಿಕ ಚಿತ್ರಣವು ಮಹತ್ವದ ಪಾತ್ರವನ್ನು ವಹಿಸಿದೆ ಎಂದು ಅವರು ಉಲ್ಲೇಖ ಮಾಡಿದರು.
ಜಾಗತಿಕ ಸಂಘರ್ಷಗಳ ನಡುವೆ ಆಧ್ಯಾತ್ಮಿಕ ಜೈನ ಗುರುಗಳಾದ ತೀರ್ಥಂಕರರ ಬೋಧನೆಗಳು ಹೆಚ್ಚು ಪ್ರಸ್ತುತವೆನಿಸಿವೆ ಎಂದು ಅವರು ತಿಳಿಸಿದರು.
ಭಗವಾನ ಮಹಾವೀರ ಅವರ ಶಾಂತಿ, ಸಹಾನುಭೂತಿ ಮತ್ತು ಸಹೋದರತ್ವದ ಸಂದೇಶವು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.