ನವದೆಹಲಿ: ಚುನಾವಣಾ ಬಾಂಡ್ ಯೋಜನೆಯು ಸ್ವತಂತ್ರ ಭಾರತದಲ್ಲಿ ನಡೆದಿರುವ ಅತ್ಯಂತ ಕೆಟ್ಟ, ಮೆಗಾ ಭ್ರಷ್ಟಾಚಾರ ಹಗರಣವಾಗಿದೆ. ಇದರಲ್ಲಿ ಮಾಫಿಯಾ ಮಾದರಿಯ ಸುಲಿಗೆ ನಡೆದಿದೆ ಎಂದು ಸಿಪಿಐ ನಾಯಕ ಸೀತಾರಾಂ ಯೆಚೂರಿ ಆರೋಪಿಸಿದ್ದಾರೆ.
‘ಕಪ್ಪುಹಣವನ್ನು ನಿಭಾಯಿಸುವ ಅಥವಾ ಅದನ್ನು ತಡೆಯುವ ಬದಲು, ಸರ್ಕಾರ ಹಣ ವರ್ಗಾವಣೆಗೆ ಈ ಮೂಲಕ ಅನುಮತಿ ನೀಡಿತ್ತು. ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸಲು ಮತ್ತು ಆ ಮೂಲಕ ನ್ಯಾಯಸಮ್ಮತವಾಗಿ ದಾನ ಮಾಡಲು ಅನುಕೂಲ ಕಲ್ಪಿಸಿತ್ತು. ಕೆಲ ಕಂಪನಿಗಳು ತಮ್ಮ ವಾರ್ಷಿಕ ಲಾಭಕ್ಕಿಂತಲೂ ಹೆಚ್ಚು ಮೊತ್ತದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ’ ಎಂದು ಅವರು ದೂರಿದ್ದಾರೆ.
ಹಣ ವರ್ಗಾವಣೆಗೆ ನಕಲಿ ಕಂಪನಿಗಳನ್ನು ಬಳಸಲಾಗಿದೆ ಎಂದು ಆರೋಪಿಸಿದ ಅವರು, ವಿವಿಧ ತನಿಖಾ ಏಜೆನ್ಸಿಗಳ ಅಡಿಯಲ್ಲಿ ತನಿಖೆ ಎದುರಿಸುತ್ತಿರುವ ಕಂಪನಿಗಳು ದೇಣಿಗೆ ನೀಡಿವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.