ADVERTISEMENT

Exit Poll Results 2024: ನರೇಂದ್ರ ಮೋದಿ ಸರ್ಕಾರಕ್ಕೆ ಹ್ಯಾಟ್ರಿಕ್ ಗೆಲುವು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜೂನ್ 2024, 16:08 IST
Last Updated 1 ಜೂನ್ 2024, 16:08 IST
<div class="paragraphs"><p>ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ</p></div>

ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ

   

(ಪಿಟಿಐ ಚಿತ್ರ)

ಮತಚಲಾವಣೆಯ ಅವಧಿ ಮುಗಿಯುತ್ತದ್ದಂತೆ ವಿವಿಧ ವಿದ್ಯುನ್ಮಾನ ಮಾಧ್ಯಮಗಳು ಸಂಸ್ಥೆಗಳೊಂದಿಗೆ ನಡೆಸಿದ ಮತಗಟ್ಟೆ ಸಮೀಕ್ಷೆ ಪ್ರಕಟುಗೊಂಡಿದ್ದು, ದೇಶದ ಮತದಾರರು ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷವನ್ನು ಗದ್ದುಗೆಯ ಸನಿಹಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ ಎಂದೇ ಹೇಳಿವೆ.

ಮತಗಟ್ಟೆ ಸಮೀಕ್ಷೆಯತ್ತ ಚಿತ್ತ

ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಗೆ ಇಂದು ತೆರೆಬೀಳಲಿರುವುದರಿಂದ ಎಲ್ಲರ ಗಮನ ಮತಗಟ್ಟೆ ಸಮೀಕ್ಷೆಯತ್ತ ನೆಟ್ಟಿದೆ. ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಮಾಧ್ಯಮಗಳು ಜೂನ್‌ 1ರ ಸಂಜೆ 6.30ರ ಬಳಿಕ ಮತಗಟ್ಟೆ ಸಮೀಕ್ಷೆಯ ವಿವರಗಳನ್ನು ಪ್ರಸಾರ ಮಾಡಬಹುದಾಗಿದೆ.

ADVERTISEMENT

ಮತದಾನ ಕುರಿತು ಚರ್ಚೆಗಳಲ್ಲಿ ಭಾಗವಹಿಸಲ್ಲ: ಕಾಂಗ್ರೆಸ್

ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳ ಕುರಿತ ಸುದ್ದಿ ವಾಹಿನಿಗಳ ಚರ್ಚೆಗಳಲ್ಲಿ ಭಾಗವಹಿಸದಿರಲು ಕಾಂಗ್ರೆಸ್ ಪಕ್ಷವು ನಿರ್ಧರಿಸಿದೆ.

2014, 2019ರ ಮತಗಟ್ಟೆ ಸಮೀಕ್ಷೆಗಳೆಷ್ಟು ನಿಜವಾಗಿದ್ದವು?

Exit Polls: 2019 ಹಾಗೂ 2014ರ ಚುನಾವಣೋತ್ತರ ಸಮೀಕ್ಷಾ ಫಲಿತಾಂಶಗಳು ವಾಸ್ತವಿಕ ಫಲಿತಾಂಶಕ್ಕೆ ಎಷ್ಟು ದೂರ ಅಥವಾ ಎಷ್ಟು ಹತ್ತಿರವಾಗಿದ್ದವು ಎಂಬ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಮತಗಟ್ಟೆ ಸಮೀಕ್ಷೆ ಕುರಿತ ಚರ್ಚೆಯಲ್ಲಿ ಭಾಗವಹಿಸಲು 'ಇಂಡಿಯಾ' ಮೈತ್ರಿಕೂಟ ನಿರ್ಧಾರ

ಮತಗಟ್ಟೆ ಸಮೀಕ್ಷೆ ಕುರಿತ ಇಂದು ನಡೆಯಲಿರುವ ಟೆಲಿವಿಷನ್ ಚರ್ಚೆಯಲ್ಲಿ ಭಾಗವಹಿಸಲು 'ಇಂಡಿಯಾ' ಮೈತ್ರಿಕೂಟ ಒಮ್ಮತದ ನಿರ್ಧಾರ ತೆಗೆದುಕೊಂಡಿದೆ. ಪರ ಹಾಗೂ ವಿರುದ್ಧ ಅಂಶಗಳನ್ನು ಪರಿಗಣಿಸಿದ ಬಳಿಕ ಬಿಜೆಪಿಯನ್ನು ಬಯಲು ಮಾಡಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಪವನ್ ಖೇರಾ ಹೇಳಿದ್ದಾರೆ.

ಲೋಕಸಭೆಗೆ ನಡೆದ ಏಳನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಮತಗಟ್ಟೆ ಸಮೀಕ್ಷೆ ಹೊರಬೀಳಲಿದೆ. ಅಧಿಕಾರ ಯಾರಿಗೆ ಸಿಗಲಿದೆ ಎಂಬುದು ಕುತೂಹಲವೆನಿಸಿದೆ. ಇದು ಎಷ್ಟು ನಿಜವಾಗಲಿದೆ ಎಂಬುದನ್ನು ತಿಳಿಯಬೇಕಾದರೆ ಜೂನ್ 4ರವರೆಗೆ ಕಾಯಬೇಕಿದೆ.

ಇಂಡಿಯಾಟುಡೇ-ಆ್ಯಕ್ಸಿಸ್ ಪ್ರಕಾರ ಇಂಡಿಯಾ ಮೈತ್ರಿಕೂಟ ತಮಿಳುನಾಡಿನಲ್ಲಿ 33ರಿಂದ 37 ಮತ್ತು ಎನ್‌ಡಿಎ 2ರಿಂದ 4 ಸ್ಥಾನಗಳಲ್ಲಿ ಗೆಲ್ಲಲಿದೆ.

ನ್ಯೂಸ್ ಡಿ ಡೈನಾಮಿಕ್ಸ್ - ಎನ್‌ಡಿಎಗೆ ಸ್ಪಷ್ಟ ಬಹುಮತ

ನ್ಯೂಸ್ ಡಿ ಡೈನಾಮಿಕ್ಸ್ ಮತಗಟ್ಟೆ ಸಮೀಕ್ಷೆ ಪ್ರಕಾರ ಬಿಜೆಪಿ 371 ಸ್ಥಾನಗಳಲ್ಲಿ ಗೆಲುವು ಗಳಿಸಿದ್ದು, ಮತ್ತೆ ಅಧಿಕಾರಕ್ಕೆ ಬರಲಿದೆ. ಇಂಡಿಯಾ ಮೈತ್ರಿಕೂಟ ಕೇವಲ 125 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ವರದಿ ಹೇಳಿದೆ.

ಜನ್ ಕೀ ಬಾತ್

ಎನ್‌ಡಿಎ: 377

ಇಂಡಿಯಾ: 151

ಇತರೆ: 15

ಮಾಟ್ರೈಝ್

ಎನ್‌ಡಿಎ: 352-368

ಇಂಡಿಯಾ: 118-133

ಇತರೆ: 43-48

ಪಿ ಮಾರ್ಕ್

ಎನ್‌ಡಿಎ: 359

ಇಂಡಿಯಾ: 154

ಇತರೆ: 30

ಕರ್ನಾಟಕದಲ್ಲಿ ಯಾರಿಗೆ ಮುನ್ನಡೆ?

ಇಂಡಿಯಾ ಟಿವಿ

ಬಿಜೆಪಿ: 18-22

ಜೆಡಿಎಸ್: 1-3

ಕಾಂಗ್ರೆಸ್: 4-8

ಪೋಲ್ ಸ್ಟ್ರ್ಯಾಟ್

ಬಿಜೆಪಿ: 18

ಜೆಡಿಎಸ್: 2

ಕಾಂಗ್ರೆಸ್: 8

ಇಂಡಿಯಾ ಟುಡೇ

ಬಿಜೆಪಿ: 20-22

ಜೆಡಿಎಸ್: 2-3

ಕಾಂಗ್ರೆಸ್: 3-5

ಪೋಲ್ ಹಬ್

ಬಿಜೆಪಿ: 21-24

ಜೆಡಿಎಸ್: 1-2

ಕಾಂಗ್ರೆಸ್: 3-7

ಸಿಎನ್ಎನ್

ಬಿಜೆಪಿ: 23-26

ಜೆಡಿಎಸ್: 00

ಕಾಂಗ್ರೆಸ್: 3-7

ರಿಪಬ್ಲಿಕ್ ಭಾರತ್-ಪಿ ಮಾರ್ಕ್

ಎನ್‌ಡಿಎ: 359

ಇಂಡಿಯಾ: 154

ಸಿಎನ್‌ಎನ್-ನ್ಯೂಸ್18 ಪ್ರಕಾರ ಕೇರಳದಲ್ಲಿ ಯುಡಿಎಫ್ 15ರಿಂದ 18, ಎಲ್‌ಡಿಎಫ್ 2ರಿಂದ 5 ಮತ್ತು ಬಿಜೆಪಿ 1ರಿಂದ 3 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.

ಜನ್ ಕೀ ಬಾತ್ ಮತಗಟ್ಟೆ ಸಮೀಕ್ಷೆ ಪ್ರಕಾರ ಬಿಜೆಪಿ 362ರಿಂದ 392 ಮತ್ತು 'ಇಂಡಿಯಾ' ಮೈತ್ರಿಕೂಟ 141ರಿಂದ 161 ಸ್ಥಾನಗಳನ್ನು ಗಳಿಸಲಿದೆ.

ಇಂಡಿಯಾ ನ್ಯೂಸ್

ಎನ್‌ಡಿಎ: 371

ಇಂಡಿಯಾ: 125

ಇತರೆ: 47

ಲೋಕ್ ಪೋಲ್

ಎನ್‌ಡಿಎ: 325-335

ಇಂಡಿಯಾ: 155-165

ಇತರೆ: 48-55

ಪೋಲ್ ಆಫ್ ಪೋಲ್ಸ್

ಇಂಡಿಯಾ ನ್ಯೂಸ್ ಡಿ-ಡೈನಾಮಿಕ್ಸ್

ಎನ್‌ಡಿಎ: 371

ಇಂಡಿಯಾ: 125

ಇತರೆ: 47

ಜನ್ ಕೀ ಬಾತ್

ಎನ್‌ಡಿಎ: 362-392

ಇಂಡಿಯಾ: 141-161

ಇತರೆ: 10-20

ನ್ಯೂಸ್ ನೇಷನ್

ಎನ್‌ಡಿಎ: 342-378

ಇಂಡಿಯಾ: 153-169

ಇತರೆ: 21-23

ರಿಪಬ್ಲಿಕ್ ಭಾರತ್-ಮ್ಯಾಟ್ರಿಝ್

ಎನ್‌ಡಿಎ: 353-368

ಇಂಡಿಯಾ: 118-133

ಇತರೆ: 43-48

ದೈನಿಕ್ ಬಾಸ್ಕರ್

ಎನ್‌ಡಿಎ: 281-350

ಇಂಡಿಯಾ: 145-201

ಇತರೆ: 33-49

ನ್ಯೂಸ್ ನೇಷನ್

ಎನ್‌ಡಿಎ: 342-378

ಇಂಡಿಯಾ: 153-169

ಇತರೆ: 21-23

ಬಿಹಾರದಲ್ಲಿ 'ಇಂಡಿಯಾ' ಮೈತ್ರಿಗೆ 7ರಿಂದ 10 ಸ್ಥಾನ?

ಇಂಡಿಯಾ ಟುಡೇ-ಆಕ್ಸಿಸ್ ಮತಗಟ್ಟೆ ಸಮೀಕ್ಷೆ ಪ್ರಕಾರ ಬಿಹಾರದಲ್ಲಿ 'ಇಂಡಿಯಾ' ಮೈತ್ರಿಕೂಟ 7ರಿಂದ 10 ಸ್ಥಾನ ಮಾತ್ರ ಪಡೆಯಲಿದೆ. ಇದರಿಂದ ಮತ್ತೆ ಹಿನ್ನಡೆ ಎದುರಾಗುವ ಭೀತಿ ಇದೆ. ಬಿಜೆಪಿ-ಜೆಡಿಯು ಒಕ್ಕೂಟ 29ರಿಂದ 33 ಸ್ಥಾನಗಳನ್ನು ಗಳಿಸಲಿದೆ.

ಐದು ಮತಗಟ್ಟೆ ಸಮೀಕ್ಷೆಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ

ಐದು ಮತಗಟ್ಟೆ ಸಮೀಕ್ಷೆಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಹೇಳಿದೆ. ಎನ್‌ಡಿಎ ಒಕ್ಕೂಟವು ಜನ್ ಕಿ ಬಾತ್ ಪ್ರಕಾರ 362ರಿಂದ 392, ಇಂಡಿಯಾ ನ್ಯೂಸ್ ಡಿ ಡೈನಾಮಿಕ್ಸ್ ಪ್ರಕಾರ 371, ರಿಪಬ್ಲಿಕ್ ಟಿವಿ-ಪಿ ಮಾರ್ಕ್ ಪ್ರಕಾರ 359, ರಿಪಬ್ಲಿಕ್ ಟಿವಿ-ಮ್ಯಾಟ್ರಿಝ್ ಪ್ರಕಾರ 353ರಿಂದ 368 ಮತ್ತು ನ್ಯೂಸ್ ನೇಷನ್ ಪ್ರಕಾರ 342ರಿಂದ 378 ಸ್ಥಾನಗಳನ್ನು ಗಳಿಸಲಿದೆ.

ಮತಗಟ್ಟೆ ಸಮೀಕ್ಷೆಗಳಲ್ಲಿ ನನಗೆ ನಂಬಿಕೆಯಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಎರಡಂಕಿ ದಾಟಲಿದೆ ಎಂದು ವಿಶ್ವಾಸದಿಂದ ಹೇಳುತ್ತೇನೆ.
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ಜನಾದೇಶಕ್ಕಾಗಿ ಸ್ವಲ್ಪ ಕಾಯೋಣ. ನಮ್ಮ ಸಂಪೂರ್ಣ ನಂಬಿಕೆಯಿದೆ. ನಾವು ಪ್ರಗತಿಪರ ರಾಜಕೀಯ, ಉದ್ಯೋಗ, ವಿದೇಶಾಂಗ ನೀತಿ ಮತ್ತು ರಾಷ್ಟ್ರದ ಪ್ರಗತಿಪರ ವಿಚಾರಗಳ ಬಗ್ಗೆ ಮಾತನಾಡಿದ್ದೇನೆ. ದೇಶದ ಜನತೆ 'ಇಂಡಿಯಾ' ಮೈತ್ರಿಕೂಟಕ್ಕೆ ಮತ ಚಲಾಯಿಸಿದ್ದಾರೆ.
-ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ನಾಯಕ

ಬಂಗಾಳದಲ್ಲಿ ಬಿಜೆಪಿಗೆ ಬಹುಮತ?

ರಿಪಬ್ಲಿಕ್ ಟಿವಿ-ಮ್ಯಾಟ್ರಿಝ್ ಮತಗಟ್ಟೆ ಸಮೀಕ್ಷೆ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 21ರಿಂದ 25 ಮತ್ತು ತೃಣಮೂಲ ಕಾಂಗ್ರೆಸ್ 16ರಿಂದ 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.

ದೆಹಲಿಯಲ್ಲಿ ಬಿಜೆಪಿ

ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ ಮತಗಟ್ಟೆ ಸಮೀಕ್ಷೆ ಪ್ರಕಾರ ದೆಹಲಿಯಲ್ಲಿ ಬಿಜೆಪಿ 6ರಿಂದ 7 ಸ್ಥಾನಗಳನ್ನು ಗೆಲ್ಲಲಿದೆ. 'ಇಂಡಿಯಾ' ಮೈತ್ರಿಕೂಟ ಒಂದು ಸ್ಥಾನ ಮಾತ್ರ ಗೆಲ್ಲುವ ಸಾಧ್ಯತೆಯಿದೆ.

*ಪಿಎಂಎಆರ್‌ಕ್ಯೂ ಮತಗಟ್ಟೆ ಸಮೀಕ್ಷೆ ಪ್ರಕಾರ ಎನ್‌ಡಿಎ 359, ಇಂಡಿಯಾ ಮೈತ್ರಿಕೂಟ 154 ಹಾಗೂ ಇತರರು 30 ಸ್ಥಾನಗಳನ್ನು ಗಳಿಸಲಿವೆ.  

*ಡಿ-ಡೈನಾಮಿಕ್ಸ್ ಮತಗಟ್ಟೆ ಸಮೀಕ್ಷೆ ಪ್ರಕಾರ, ಎನ್‌ಡಿಎ 371, 'ಇಂಡಿಯಾ' ಮೈತ್ರಿಕೂಟ 47 ಸ್ಥಾನಗಳನ್ನು ಗಳಿಸಲಿವೆ.

*ಮ್ಯಾಟ್ರಿಝ್ ಮತಗಟ್ಟೆ ಸಮೀಕ್ಷೆ ಪ್ರಕಾರ' ಎನ್‌ಡಿಎ 353-368, 'ಇಂಡಿಯಾ' ಮೈತ್ರಿಕೂಟ 118-133 ಹಾಗೂ ಇತರರು 43-48 ಸ್ಥಾನಗಳನ್ನು ಗಳಿಸಲಿವೆ.

*ಜನ್ ಕೀ ಬಾತ್ ಮತಗಟ್ಟೆ ಸಮೀಕ್ಷೆ ಪ್ರಕಾರ' ಎನ್‌ಡಿಎ 377, 'ಇಂಡಿಯಾ' ಮೈತ್ರಿಕೂಟ 151 ಹಾಗೂ ಇತರರು 15 ಸ್ಥಾನಗಳನ್ನು ಗಳಿಸಲಿವೆ.

*ನ್ಯೂಸ್ ನೇಷನ್ ಮತಗಟ್ಟೆ ಸಮೀಕ್ಷೆ ಪ್ರಕಾರ' ಎನ್‌ಡಿಎ 360 ಹಾಗೂ 'ಇಂಡಿಯಾ' ಮೈತ್ರಿಕೂಟ 161 ಸ್ಥಾನಗಳನ್ನು ಗಳಿಸಲಿವೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ‘ಹ್ಯಾಟ್ರಿಕ್‌’ ಗೆಲುವಿನತ್ತ ಮುನ್ನಡೆಯಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಕರ್ನಾಟಕದಲ್ಲೂ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ತಮಿಳುನಾಡು ಹಾಗೂ ಕೇರಳದಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎಂದು ಹೇಳಿದೆ. ಹಾಗಿದ್ದರೂ ಬಿಹಾರ, ರಾಜಸ್ಥಾನ, ಹರಿಯಾಣದಲ್ಲಿ ಅಲ್ಪ ಹಿನ್ನಡೆ ಅನುಭವಿಸಲಿದೆ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.