ADVERTISEMENT

LS | 10-11 ಲಕ್ಷ ಮತಗಳ ಅಂತರ: ಹೆಚ್ಚು ಅಂತರದಿಂದ ಗೆದ್ದ ಟಾಪ್ 5 ಅಭ್ಯರ್ಥಿಗಳು

ಪಿಟಿಐ
Published 5 ಜೂನ್ 2024, 2:50 IST
Last Updated 5 ಜೂನ್ 2024, 2:50 IST
   

ನವದೆಹಲಿ: ನಾಲ್ವರು ಬಿಜೆಪಿ ಅಭ್ಯರ್ಥಿಗಳು ಸೇರಿ ಐದು ಮಂದಿ ಈ ಹಿಂದಿನ ಲೋಕಸಭಾ ಚುನಾವಣೆಯ ದಾಖಲೆಯನ್ನು ಮೀರಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಪೈಕಿ ಇಂದೋರ್ ಬಿಜೆಪಿ ಸಂಸದ ಶಂಕರ್ ಲಾಲ್ವಾನಿ ಅಗ್ರಸ್ಥಾನದಲ್ಲಿದ್ದಾರೆ. ಅವರು 11.72 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ರಕಿಬುಲ್ ಹುಸೇನ್ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಕಂಡ ಅಭ್ಯರ್ಥಿಗಳ ಪೈಕಿ 2ನೇ ಸ್ಥಾನದಲ್ಲಿದ್ದಾರೆ. ಅಸ್ಸಾಂನ ಧುಬ್ರಿ ಕ್ಷೇತ್ರದಲ್ಲಿ ಅವರು 10.12 ಲಕ್ಷ ಅಂತರದಿಂದ ಜಯ ಗಳಿಸಿದ್ದಾರೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ವಿದಿಶಾ ಕ್ಷೇತ್ರದಿಂದ 8.21 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ 3ನೇ ಸ್ಥಾನದಲ್ಲಿದ್ದಾರೆ. ಗುಜರಾತ್‌ನ ನವಸಾರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಆರ್‌. ಪಾಟೀಲ್ 7.73 ಲಕ್ಷ ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದು, ಅತಿ ಹೆಚ್ಚು ಅಂತರದಿಂದ ಗೆದ್ದ 4ನೇ ಅಭ್ಯರ್ಥಿಯಾಗಿದ್ದಾರೆ.

ADVERTISEMENT

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಗುಜರಾತ್‌ನ ಗಾಂಧಿನಗರ ಕ್ಷೇತ್ರದಿಂದ 7.44 ಲಕ್ಕಕ್ಕೂ ಅಧಿಕ ಮತಗಳ ಅಂತರದಿಂದ ಆಯ್ಕೆಯಾಗುವ ಮೂಲಕ ಟಾಪ್ 5ರಲ್ಲಿ ಸ್ಥಾನ ಪಡೆದಿದ್ದಾರೆ.

ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯ ಪ್ರದೇಶದ ಗುಣ ಕ್ಷೇತ್ರದಿಂದ 5.40 ಲಕ್ಷ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ಅತ್ಯಧಿಕ ಅಂತರದಿಂದ ಗೆದ್ದ ಅಭ್ಯರ್ಥಿಗಳ ಪಟ್ಟಿ ಇಂತಿದೆ.

* ವಡೋದರದಲ್ಲಿ ಬಿಜೆಪಿಯ ಹೇಮಾಂಗ್ ಜೋಶಿ ಗೆಲುವು – 5.82 ಲಕ್ಷ

* ಗುಜರಾತ್‌ನ ಪಂಚಮಹಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಾಜ್‌ಪಾಲ್ ಸಿಂಗ್ ಜಾಧವ್ – 5.06 ಲಕ್ಷ

* ಭೋಪಾಲ್‌ನ ಬಿಜೆಪಿ ಅಭ್ಯರ್ಥಿಗಳಾದ ಅಲೋಕ ಶರ್ಮಾ– ಅಂತರ‘ 5.01 ಲಕ್ಷ ಅಂತರ ಮತ್ತು

* ಮಂಡ್ಸೌರ್ ಬಿಜೆಪಿ ಅಭ್ಯರ್ಥಿ ಸುಧೀರ್ ಗುಪ್ತಾ – ಅಂತರ – 5 ಲಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.