ADVERTISEMENT

ಮಿತ್ರಪಕ್ಷಗಳ ಮನಸ್ತಾಪದಿಂದ ‘ಇಂಡಿಯಾ’ ಸೋಲು: ಸುಧಾಂಶು ತ್ರಿವೇದಿ

ಪಿಟಿಐ
Published 28 ಮೇ 2024, 14:14 IST
Last Updated 28 ಮೇ 2024, 14:14 IST
<div class="paragraphs"><p>ಸುಧಾಂಶು ತ್ರಿವೇದಿ</p></div>

ಸುಧಾಂಶು ತ್ರಿವೇದಿ

   

ನವದೆಹಲಿ: ಮಿತ್ರಪಕ್ಷಗಳ ನಡುವಿನ ಮನಸ್ತಾಪಗಳಿಂದ ‘ಇಂಡಿಯಾ’ ಕೂಟದ ನಿರೀಕ್ಷೆಗಳು ಫಲಿಸುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ದೊಡ್ಡ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ಮಂಗಳವಾರ ಪ್ರತಿಪಾದಿಸಿದೆ.     

ಪಕ್ಷದ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, ‘ಪಂಜಾಬ್‌ನಲ್ಲಿ ಕಾಂಗ್ರೆಸ್ ಎಎಪಿಯೊಂದಿಗೆ ಸಂಘರ್ಷಕ್ಕಿಳಿಯುವ ಮೂಲಕ ಮತ್ತು ಜೂನ್ 1ರಂದು ನಡೆಯುತ್ತಿರುವ ಕೂಟದ ಸಭೆಗೆ ಮಮತಾ ಬ್ಯಾನರ್ಜಿ ಗೈರಾಗುವ ಮೂಲಕ ‘ಇಂಡಿಯಾ’ ಕೂಟದಲ್ಲಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡಿವೆ. ಹೀಗಾಗಿ ಪಂಜಾಬ್ ಮತ್ತು ಪಶ್ಚಿಮ ಬಂಗಾಳದ ಜನ ಯಾರಿಗೆ ಮತ ಹಾಕಬೇಕು ಎನ್ನುವ ಬಗ್ಗೆ ಚಿಂತಿಸಬೇಕಿದೆ’ ಎಂದು ತಿಳಿಸಿದರು.

ADVERTISEMENT

‘ದೇಶದಲ್ಲಿ ಆರು ಹಂತದ ಮತದಾನ ಮುಗಿದಿದ್ದು, ಎನ್‌ಡಿಎ ಗೆಲುವಿನ ಹಾದಿಯಲ್ಲಿದೆ ಎನ್ನುವುದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.