ADVERTISEMENT

ಮುಖಾಮುಖಿ | ಜೋಧಪುರ ಲೋಕಸಭಾ ಕ್ಷೇತ್ರ: ಗಜೇಂದ್ರ ಸಿಂಗ್‌ Vs ಕರಣ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 0:11 IST
Last Updated 23 ಮಾರ್ಚ್ 2024, 0:11 IST
<div class="paragraphs"><p>ಗಜೇಂದ್ರ ಸಿಂಗ್‌ ಶೆಖಾವತ್‌</p></div>

ಗಜೇಂದ್ರ ಸಿಂಗ್‌ ಶೆಖಾವತ್‌

   

ಗಜೇಂದ್ರ ಸಿಂಗ್‌ ಶೆಖಾವತ್‌(ಬಿಜೆಪಿ)

ಗಜೇಂದ್ರ ಸಿಂಗ್‌ ಶೆಖಾವತ್‌ ಅವರು ಬಿಜೆಪಿಯ ಅಧಿಕಾರದ ಏಣಿಯ ಮೂಲಕ ಮೇಲೇರಿ ಬಂದ ಮುಖಂಡ. ಸದ್ಯ ಕೇಂದ್ರ ಜಲಶಕ್ತಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಪಕ್ಷದ ವರಿಷ್ಠರ ನೆಚ್ಚಿನ ಅಭ್ಯರ್ಥಿಯೂ ಹೌದು. ರಾಜಸ್ಥಾನದಲ್ಲಿ 2023ರಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೇರಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಶೆಖಾವತ್‌ ಅವರ ಹೆಸರು ಕೇಳಿಬಂದಿತ್ತು. ಜಲಜೀವನ ಅಭಿಯಾನವನ್ನು ಸಮರ್ಥವಾಗಿ ನಿಭಾಯಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಶಂಸೆಗೂ ಪಾತ್ರರಾಗಿದ್ದಾರೆ.

ADVERTISEMENT

ರಜಪೂತ ಕುಟಂಬದಿಂದ ಬಂದಿರುವ ಶೆಖಾವತ್‌, 1992ರಲ್ಲಿ ಜೋಧಪುರದ ಜಯ ನಾರಾಯಣ ವ್ಯಾಸ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದಾಗಲೇ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ್ದರು. ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ತತ್ವಶಾಸ್ತ್ರದಲ್ಲಿ ಎಂ.ಫಿಲ್‌ ಪಡೆದಿದ್ದಾರೆ. 2014ರಲ್ಲಿ ಜೋಧಪುರ ಲೋಕಸಭಾ ಕ್ಷೇತ್ರದಿಂದ 4 ಲಕ್ಷ ಮತಗಳಿಗಿಂತಲೂ ಹೆಚ್ಚು ಅಂತರದಲ್ಲಿ ಗೆದ್ದು ಸಂಸತ್‌ ಪ್ರವೇಶಿಸಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕ ಅಶೋಕ್‌ ಗೆಹಲೋತ್‌ ಅವರ ಮಗ ವೈಭವ್‌ ಅವರನ್ನು ಪರಾಭವಗೊಳಿಸಿ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದರು.

ಕರಣ್‌ ಸಿಂಗ್‌ ಉಚಿಯಾರ್ಡ (ಕಾಂಗ್ರೆಸ್‌)

ಕರಣ್‌ ಸಿಂಗ್‌ ಉಚಿಯಾರ್ಡ ಅವರು ರಾಜಕೀಯದಲ್ಲಿ ಅನನುಭವಿಯಾದರೂ ಸಾಕಷ್ಟು ಹಣದ ಬಲ ಹೊಂದಿರುವವರು. ಆರಂಭದಲ್ಲಿ ಕಾಂಪೌಂಡರ್ ಕೆಲಸ ಮಾಡಿದ್ದ ಅವರು, 1996ರಿಂದಲೂ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ದೈತ್ಯರಾಗಿ ಬೆಳೆದಿದ್ದಾರೆ. ಕರಣ್‌ ಸಿಂಗ್‌ ಅವರ ಆಶಾಪೂರ್ಣ ಬಿಲ್ಡ್‌ಕಾನ್‌ ಕಂಪನಿಯು ಐಷಾರಾಮಿ ಮನೆ, ಬಂಗಲೆಗಳನ್ನು ನಿರ್ಮಿಸುವಲ್ಲಿ ಹೆಸರುವಾಸಿಯಾಗಿದೆ. ಗಾಳಿಯಂತ್ರ (ವಿಂಡ್‌ಮಿಲ್‌) ಯೋಜನೆಯನ್ನೂ ಅವರು ಕೈಗೆತ್ತಿಕೊಂಡಿದ್ದಾರೆ.

ಹಣಬಲವು ಕರಣ್‌ ಸಿಂಗ್‌ ಪರವಾಗಿದ್ದರೂ ಅವರು ಗೆಲ್ಲುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗಿದೆ. ಕಾಂಗ್ರೆಸ್‌ ನಾಯಕ ಅಶೋಕ್‌ ಗೆಹಲೋತ್‌ ಅವರನ್ನು ಕಡೆಗಣಿಸಿ ಸಚಿನ್‌ ಪೈಲಟ್‌ ಅವರೊಂದಿಗೆ ಕರಣ್‌  ಗುರುತಿಸಿಕೊಂಡಿದ್ದಾರೆ. ಇವರು ಕೂಡ ರಜಪೂತರಾದರೂ ಶೆಖಾವತ್‌ ಅವರ ಗೆಲುವಿನ ಅಂತರವನ್ನು ಕಡಿಮೆಗೊಳಿಸಬಹುದಷ್ಟೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯ ಪ್ರಬಲ ಅಭ್ಯರ್ಥಿಯ ವಿರುದ್ಧ ಅಖಾಡಕ್ಕೆ ಇಳಿದಿರುವ ಕರಣ್‌ ಸಿಂಗ್‌ ಅವರು ಹರಕೆಯ ಕುರಿಯಾಗಲು ಸಂತೋಷವಾಗಿಯೇ ಒಪ್ಪಿಕೊಂಡಿದ್ದಾರೆ. ಶೆಖಾವತ್‌ ವಿರುದ್ಧ ಸ್ಪರ್ಧಿಸಲು ಗೆಹಲೋತ್‌ ನಿರಾಕರಿಸಿದ ಕಾರಣ, 55 ವರ್ಷದ ಕರಣ್‌ ಅವರು ಕಾಂಗ್ರೆಸ್‌ನ ಏಕೈಕ ಆಯ್ಕೆಯಾಗಿದ್ದರು.

ಕರಣ್‌ ಸಿಂಗ್‌ ಉಚಿಯಾರ್ಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.