ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನವು ಇಂದು ನಡೆಯುತ್ತಿದೆ. ಈ ಹಂತದಲ್ಲಿ ಒಟ್ಟು 58 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 889 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಈ 58 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಒಂದೂ ಸ್ಥಾನ ಗೆದ್ದಿರಲಿಲ್ಲ. ಆದರೆ ಈ ಬಾರಿ ದೆಹಲಿ, ಹರಿಯಾಣ, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಕೆಲವು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದೆ. ಬಿಜೆಪಿಯು ಕಳೆದ ಬಾರಿ 40 ಸ್ಥಾನಗಳನ್ನು ಜಯಿಸಿತ್ತು. ಎಸ್‌ಪಿ ಒಂದು ಸ್ಥಾನವನ್ನು ಗೆದ್ದಿತ್ತಾದರೂ, ಉಪ ಚುನಾವಣೆಯಲ್ಲಿ ಅದನ್ನು ಕಳೆದುಕೊಂಡಿತ್ತು.
ಮನೋಹರಲಾಲ್ ಖಟ್ಟರ್ (ಕರ್ನಾಲ್), ದೀಪೇಂದರ್ ಹೂಡಾ (ರೋಹ್ಟಕ್), ಮೇನಕಾ ಗಾಂಧಿ (ಸುಲ್ತಾನ್‌ಪುರ) ಮತ್ತು ಮೆಹಬೂಬಾ ಮುಫ್ತಿ (ಅನಂತನಾಗ್–ರಜೌರಿ) ಅವರು ಆರನೇ ಹಂತದಲ್ಲಿ ಕಣದಲ್ಲಿರುವ ಪ್ರಮುಖರಾಗಿದ್ದಾರೆ.
ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ,
ಬಿಜೆಪಿ ನಾಯಕ ಗೌತಮ್ ಗಂಭೀರ್,
ಕೇಂದ್ರ ಸಚಿವ ಎಸ್. ಜೈಶಂಕರ್,
ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್,
ಜಾರ್ಖಂಡ್ ಗವರ್ನರ್ ಸಿ.ಪಿ. ರಾಧಾಕೃಷ್ಣನ್,
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ,
ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್,
ಬಿಜೆಪಿ ನಾಯಕ ಸಂಬಿಬ್ ಪಾತ್ರಾ,
ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವಿಂದರ್ ರೈನಾ,
ಜೆಜೆಪಿ ನಾಯಕ ದುಶ್ಯಂತ್ ಚೌಟಾಲ,
ದೆಹಲಿ ಸಚಿವೆ ಆತಿಶಿ
ಇವಿಎಂ ಹ್ಯಾಕ್ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಐದು ಮತಯಂತ್ರಗಳಲ್ಲಿ ಬಿಜೆಪಿ ಟ್ಯಾಗ್ ಕಂಡುಬಂದಿದೆ ಎಂದು ಹೇಳಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವದೆಹಲಿ ಲೋಕಸಭಾ ಕ್ಷೇತ್ರದಲ್ಲಿ ಇಂದು ಬೆಳಿಗ್ಗೆ ಮತ ಚಲಾಯಿಸಿದ್ದಾರೆ.
ಇಂದು ಬೆಳಿಗ್ಗೆಯಿಂದ ಮೊಬೈಲ್ ಕರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ. ಅನಂತ್‌ನಾಗ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಮುಫ್ತಿ, ಪಿಡಿಪಿ ಕಾರ್ಯಕರ್ತರು ಹಾಗೂ ಬೂತ್ ಏಜೆಂಟರನ್ನು ವಶದಲ್ಲಿರಿಸಲಾಗಿದೆ ಎಂದು ಸಹ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳ:
ಎಂಟು ಲೋಕಸಭಾ ಕ್ಷೇತ್ರಗಳಿಗೆ ಶೇ 16.54ರಷ್ಟು ಮತದಾನ.
ಉತ್ತರ ಪ್ರದೇಶ:
14 ಲೋಕಸಭಾ ಕ್ಷೇತ್ರಗಳಿಗೆ ಶೇ 12.33ರಷ್ಟು ಮತದಾನ.
ಜಾರ್ಖಂಡ್:
4 ಲೋಕಸಭಾ ಕ್ಷೇತ್ರಗಳಿಗೆ ಶೇ 11.74ರಷ್ಟು ಮತದಾನ
ಆರನೇ ಹಂತದಲ್ಲಿ ಬೆಳಗ್ಗೆ 9ರವರೆಗೆ ಶೇ 10.82ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ರಾಜ್ಯವಾರು ಮತದಾನದ ವಿವರ (ಬೆಳಿಗ್ಗೆ 9 ಗಂಟೆವರೆಗೆ):
ಬಿಹಾರ: 9.66%
ಹರಿಯಾಣ: 8.31%
ಜಮ್ಮು ಮತ್ತು ಕಾಶ್ಮೀರ: 8.89%
ಜಾರ್ಖಂಡ್: 11.74%
ದೆಹಲಿ: 8.94%
ಒಡಿಶಾ: 7.43%
ಉತ್ತರ ಪ್ರದೇಶ: 12.33
ಪಶ್ಚಿಮ ಬಂಗಾಳ: 16.54%
ನಿರುದ್ಯೋಗ, ಹಣದುಬ್ಬರದಂತಹ ನೈಜ ಸಮಸ್ಯೆಗಳ ಬಗ್ಗೆ ಬಿಜೆಪಿ ನಾಯಕರು ಚರ್ಚಿಸುತ್ತಿಲ್ಲ ಎಂಬ ಭಾವನೆ ಜನರಲ್ಲಿದೆ. ಆರಂಭದಿಂದಲೂ 'ಇಂಡಿಯಾ' ಮೈತ್ರಿಕೂಟ ಜನರ ನೈಜ ಸಮಸ್ಯೆಗಳಿಗೆ ಆದ್ಯತೆ ಕೊಟ್ಟಿದೆ-ಪ್ರಿಯಾಂಕಾ ಗಾಂಧಿ ವಾದ್ರಾ
ಸರ್ವಾಧಿಕಾರ, ಹಣದುಬ್ಬರ ಮತ್ತು ನಿರುದ್ಯೋಗದ ವಿರುದ್ಧ ಮತ ಚಲಾಯಿಸಿದ್ದೇನೆ.-ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ
ಮೊದಲ ಐದು ಹಂತದ ಮತದಾನದಲ್ಲಿ ದೇಶದ ಜನರು ಸುಳ್ಳು, ದ್ವೇಷ ಮತ್ತು ಅಪಪ್ರಚಾರವನ್ನು ತಿರಸ್ಕರಿಸಿದ್ದಾರೆ. ಬದುಕಿಗೆ ಸಂಬಂಧಿಸಿದ ತಳಮಟ್ಟದ ನೈಜ ಸಮಸ್ಯೆಗಳಿಗೆ ಆದತ್ಯೆ ನೀಡಿದ್ದಾರೆ.ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಆರನೇ ಹಂತದಲ್ಲಿ ಬೆಳಗ್ಗೆ 11ರವರೆಗೆ ಶೇ 25.76ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ರಾಜ್ಯವಾರು ಮತದಾನದ ವಿವರ:
ಬಿಹಾರ: 23.67%
ಹರಿಯಾಣ: 22.09%
ಜಮ್ಮು ಮತ್ತು ಕಾಶ್ಮೀರ: 23.11%
ಜಾರ್ಖಂಡ್: 27.80%
ದೆಹಲಿ: 21.69%
ಒಡಿಶಾ: 21.30%
ಉತ್ತರ ಪ್ರದೇಶ: 27.06%
ಪಶ್ಚಿಮ ಬಂಗಾಳ: 36.88%
ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ದಿನದ 24 ಗಂಟೆಯೂ ಜನರಿಗಾಗಿ ದುಡಿಯುತ್ತಾರೆ. 2047ರ ವೇಳೆಗೆ 'ವಿಕಸಿತ ಭಾರತ', 'ಸ್ವಾವಲಂಬಿ ಭಾರತ' ಮತ್ತು 'ಅಭಿವೃದ್ಧಿ ಭಾರತ'ದತ್ತ ನಿರಂತರ ಪರಿಶ್ರಮವನ್ನು ಮುಂದುವರಿಸಿದ್ದಾರೆ. ಮತ್ತೊಂದೆಡೆ 'ಇಂಡಿ' ಮೈತ್ರಿಕೂಟಕ್ಕೆ ಯಾವುದೇ ಕೆಲಸವಿಲ್ಲ. ಸುಳ್ಳುಗಳನ್ನೇ ಹೇಳುತ್ತಿದೆ.-ನರೇಂದ್ರ ಮೋದಿ, ಪ್ರಧಾನಿ.
ರಾಷ್ಟ್ರಪತಿ ದ್ರೌಪದಿ ಮುರ್ಮು,
ಉಪರಾಷ್ಟ್ರಪತಿ ಜಗದೀಪ್ ಧನಕರ್,
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ,
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ,
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,
ದೆಹಲಿ ಸಚಿವೆ ಆತಿಶಿ,
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್,
ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್,
ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ,
ರಾಜ್ಯಸಭಾ ಸಂಸದ ಕಪಿಲ್ ಸಿಬಲ್,
ಬಿಜೆಪಿ ನಾಯಕ ಗೌತಮ್ ಗಂಭೀರ್,
ಕೇಂದ್ರ ಸಚಿವ ಎಸ್. ಜೈಶಂಕರ್,
ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್,
ಜಾರ್ಖಂಡ್ ಗವರ್ನರ್ ಸಿ.ಪಿ. ರಾಧಾಕೃಷ್ಣನ್,
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ,
ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್,
ಬಿಜೆಪಿ ನಾಯಕ ಸಂಬಿಬ್ ಪಾತ್ರ,
ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವಿಂದರ್ ರೈನಾ,
ಜೆಜೆಪಿ ನಾಯಕ ದುಶ್ಯಂತ್ ಚೌಟಾಲ,
ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ,
ಮಾಜಿ ಕ್ರಿಕೆಟಿಗ ಕಪಿಲ್ ದೇವ್,
ಕೇರಳ ಗವರ್ನರ್ ಆರಿಫ್ ಮೊಹಮ್ಮದ್ ಖಾನ್,
ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ,
ದೆಹಲಿ ಸಚಿವ ಕೈಲಾಶ್ ಗೆಹಲೋತ್,
ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ,
ಬಿಜೆಪಿ ನಾಯಕ ಸುವೇಂದು ಅಧಿಕಾರಿ,
ಸಿಪಿಎಂ ನಾಯಕಿ ಬೃಂದಾ ಕಾರಟ್,
ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ.
ಆರನೇ ಹಂತದ ಮತದಾನದ ದಿನವಾದ ಇಂದು ಪಕ್ಷದ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ. ಇದನ್ನು ಖಂಡಿಸಿ ಮುಫ್ತಿ ಅವರು, ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಕಾರ್ಯಕರ್ತರೊಂದಿಗೆ ಪ್ರತಿಭಟಿಸಿದ್ದಾರೆ.
ತಮ್ಮ ಮೊಬೈಲ್‌ನಿಂದ ಕರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಹ ಮುಫ್ತಿ ಆರೋಪ ಮಾಡಿದ್ದಾರೆ. ಪಕ್ಷದ ಬೂತ್ ಏಟೆಂಟರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮುಫ್ತಿ ಹೇಳಿದ್ದಾರೆ. ಮುಫ್ತಿ ಅರು ಅನಂತ್‌ನಾಗ್-ರಜೌರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಕೋಲ್ಕತ್ತ: ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಗರ್ಬೇಟಾ ಪ್ರದೇಶದಲ್ಲಿ ತಮ್ಮ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಲಾಗಿದೆ ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಜಾರ್‌ಗಾಮ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಣತ್ ಟುಡು ಶನಿವಾರ ಹೇಳಿದ್ದಾರೆ.
ಕೆಲವು ಮತಗಟ್ಟೆಗಳಲ್ಲಿ ಬಿಜೆಪಿ ಏಜೆಂಟರಿಗೆ ಪ್ರವೇಶವಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಅಂತಹ ಮತಗಟ್ಟೆಗಳಿಗೆ ನಾನು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ನಮ್ಮ ಬೆಂಗಾವಲು ತಕ್ಷಣಕ್ಕೆ ಧಾವಿಸಿ ರಕ್ಷಣೆ ಮಾಡಿದರು ಎಂದು ಪಿಟಿಐಗೆ ಅವರು ಹೇಳಿದರು.
ಮತ್ತೊಂದು ಘಟನೆಯಲ್ಲಿ ಘಟಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಿರನ್ ಚಟರ್ಜಿ ವಿರುದ್ಧ ಜನರ ಪ್ರತಿಭಟನೆ ನಡೆಸಿದ್ದಾರೆ.
6ನೇ ಹಂತದಲ್ಲಿ ಬೆಳಗ್ಗೆ 1ರವರೆಗೆ ಶೇ 39.13ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ರಾಜ್ಯವಾರು ಮತದಾನದ ವಿವರ:
ಬಿಹಾರ: 36.48%
ಹರಿಯಾಣ: 36.48%
ಜಮ್ಮು ಮತ್ತು ಕಾಶ್ಮೀರ: 35.22%
ಜಾರ್ಖಂಡ್: 42.54%
ದೆಹಲಿ: 34.37%
ಒಡಿಶಾ: 35.69%
ಉತ್ತರ ಪ್ರದೇಶ: 37.23%
ಪಶ್ಚಿಮ ಬಂಗಾಳ: 54.8%
ದೇಶದ ಎಲ್ಲಾ ನಾಗರೀಕರು ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಬೇಕೆಂದು ನಾವು ಬಯಸುತ್ತೇನೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್ ಹೇಳಿದರು. ಮತದಾನ ಮಾಡಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
6ನೇ ಹಂತದಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಶೇ 49.2ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ರಾಜ್ಯವಾರು ಮತದಾನದ ವಿವರ:
ಬಿಹಾರ: 45.21%
ಹರಿಯಾಣ: 46.26%
ಜಮ್ಮು ಮತ್ತು ಕಾಶ್ಮೀರ: 44.41%
ಜಾರ್ಖಂಡ್: 54.34%
ದೆಹಲಿ: 44.58%
ಒಡಿಶಾ: 48.44%
ಉತ್ತರ ಪ್ರದೇಶ: 43.95%
ಪಶ್ಚಿಮ ಬಂಗಾಳ: 70.19%
ಜಮ್ಮು: ಅನಂತನಾಗ್-ರಾಜೌರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪೂಂಚ್‌ನ ಮತಗಟ್ಟೆಯಲ್ಲಿ ಇಬ್ಬರು ಅಭ್ಯರ್ಥಿಗಳ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿದ್ದು ಘಟನೆಯಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 6 ಜನರಿಗೆ ಗಾಯಗಳಾಗಿವೆ.
ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಎರಡು ಗುಂಪುಗಳನ್ನು ಚದುರಿಸಿದರು. ನಂತರ ಶಾಂತಿಯುತವಾಗಿ ಮತದಾನ ನಡೆಯಿತು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರ ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದೆ. ಸ್ಥಳೀಯ ಪೂಜೆ ಅಭ್ಯರ್ಥಿ ಮೇಲೆ ಟಿಎಂಸಿ ಗೂಂಡಾಗಳು ದಾಳಿ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಅಮೀತ್ ಮಾಳವೀಯ ಆ ಘಟನೆಯ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
6ನೇ ಹಂತದ ಮತದಾನಲ್ಲಿ ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳದಲ್ಲಿ ಅಲ್ಲಲ್ಲಿ ಸಣ್ಣ–ಪುಟ್ಟ ಗಲಾಟೆಗಳನ್ನು ಹೊರತುಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆಯಿತು.
ರಾಜ್ಯವಾರು ಮತದಾನದ ವಿವರ:
ಬಿಹಾರ: 52.24%
ಹರಿಯಾಣ: 55.93 %
ಜಮ್ಮು ಮತ್ತು ಕಾಶ್ಮೀರ: 51.35%
ಜಾರ್ಖಂಡ್:61.41%
ದೆಹಲಿ: 53.73%
ಒಡಿಶಾ: 59.60%
ಉತ್ತರ ಪ್ರದೇಶ: 52.02%
ಪಶ್ಚಿಮ ಬಂಗಾಳ: 77.99 %
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.