ADVERTISEMENT

ಬಿಜೆಪಿ ಪ್ರಣಾಳಿಕೆ: ‘ವಿಕಸಿತ ಭಾರತ’ಕ್ಕೆ ಪ್ರಮುಖ ಸ್ಥಾನ

ಪಿಟಿಐ
Published 1 ಏಪ್ರಿಲ್ 2024, 15:57 IST
Last Updated 1 ಏಪ್ರಿಲ್ 2024, 15:57 IST
<div class="paragraphs"><p>ನವದೆಹಲಿಯಲ್ಲಿ ಸೋಮವಾರ ನಡೆದ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಸಮಿತಿಯ ಮೊದಲ ಸಭೆಯಲ್ಲಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ, ಮುಖಂಡರಾದ ರವಿಶಂಕರ್ ಪ್ರಸಾದ್ ಮತ್ತು ಪಕ್ಷದ ಇತರ ಮುಖಂಡರು ಭಾಗವಹಿಸಿದ್ದರು.</p></div>

ನವದೆಹಲಿಯಲ್ಲಿ ಸೋಮವಾರ ನಡೆದ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಸಮಿತಿಯ ಮೊದಲ ಸಭೆಯಲ್ಲಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ, ಮುಖಂಡರಾದ ರವಿಶಂಕರ್ ಪ್ರಸಾದ್ ಮತ್ತು ಪಕ್ಷದ ಇತರ ಮುಖಂಡರು ಭಾಗವಹಿಸಿದ್ದರು.

   

ಪಿಟಿಐ ಚಿತ್ರ

ನವದೆಹಲಿ: ಬಿಜೆಪಿಯ ಚುನಾವಣಾ ಪ್ರಣಾಳಿಕೆ ಸಮಿತಿಯು ಸೋಮವಾರ ಮೊದಲ ಬಾರಿಗೆ ಸಭೆ ಸೇರಿದ್ದು, ‘ವಿಕಸಿತ ಭಾರತ’ದ ಕಾರ್ಯಸೂಚಿಗೆ ನೀಲನಕ್ಷೆ ರೂಪಿಸುವ ಬಗ್ಗೆ ಮುಖ್ಯವಾಗಿ ಚರ್ಚೆ ನಡೆಸಿತು. ಸಭೆಯಲ್ಲಿ ಎಂಟು ಮಂದಿ ಕೇಂದ್ರ ಸಚಿವರು ಸೇರಿದಂತೆ ಪಕ್ಷದ ಇತರ ಮುಖಂಡರು ಲೋಕಸಭಾ ಚುನಾವಣೆಯ ಪ್ರಮುಖ ಭರವಸೆಗಳ ಬಗ್ಗೆ ಮಾತುಕತೆ ನಡೆಸಿದರು.

ADVERTISEMENT

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಿಸ್ಡ್ ಕಾಲ್ ಸೇವೆಯ ಮೂಲಕ ಪಕ್ಷವು 3.75 ಲಕ್ಷಕ್ಕೂ ಹೆಚ್ಚು ಮತ್ತು ‘ನಮೋ’ ಆ್ಯಪ್ ಮೂಲಕ ಸುಮಾರು 1.70 ಲಕ್ಷದಷ್ಟು ಸಲಹೆಗಳನ್ನು ಸ್ವೀಕರಿಸಿದೆ. ಜನರಿಂದ ಸ್ವೀಕರಿಸಿದ ಎಲ್ಲ ಸಲಹೆಗಳನ್ನು ವಿವಿಧ ವಿಭಾಗಗಳ ಅಡಿ ವರ್ಗೀಕರಿಸಿ, ಸಮಿತಿಯ ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್ ತಿಳಿಸಿದರು.

ಸಮಿತಿಯ ಸಹ ಸಂಚಾಲಕರೂ ಆಗಿರುವ ಗೋಯಲ್, ದೇಶದ 3,500 ವಿಧಾನಸಭಾ ಕ್ಷೇತ್ರಗಳಲ್ಲಿ 916 ವಿಡಿಯೊ ವ್ಯಾನ್‌ಗಳು ಜನರನ್ನು ಸಂಪರ್ಕಿಸುತ್ತಿದ್ದು, ಪ್ರಣಾಳಿಕೆಗಾಗಿ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿವೆ ಎಂದು ಹೇಳಿದರು.

ಬಿಜೆಪಿಯು 27 ಮಂದಿಯ ಪ್ರಣಾಳಿಕೆ ಸಮಿತಿಯನ್ನು ಶನಿವಾರ ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.