ವಯನಾಡ್: ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಒಟ್ಟು ₹20 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.
ನಿನ್ನೆ (ಬುಧವಾರ) ವಯನಾಡ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದರು. ಈ ವೇಳೆ ₹9.2 (9,24,59,264) ಕೋಟಿ ಚರಾಸ್ತಿ ಮತ್ತು ತಮ್ಮ ಸ್ಥಿರಾಸ್ತಿಗಳ ಖರೀದಿ ಮೌಲ್ಯವು ₹7.9 (7,93,03,977) ಕೋಟಿ ಇದೆ ಎಂದು ತೋರಿಸಿದ್ದಾರೆ.
ಸ್ಥಿರಾಸ್ತಿಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯವು ₹9.4 ಕೋಟಿ ಮತ್ತು ಪಿತ್ರಾರ್ಜಿತ ಆಸ್ತಿಗಳ ಮೌಲ್ಯ ₹2.1 ಕೋಟಿ ಎಂದು ಅಫಿಡವಿಟ್ ತೋರಿಸಿದೆ. ಸದ್ಯ ತಮ್ಮ ಕೈಯಲ್ಲಿ ₹55,000 ನಗದನ್ನು ಹೊಂದಿದ್ದು, ₹49 ಲಕ್ಷ ಸಾಲ ಹೊಂದಿರುವುದಾಗಿ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ₹15.8 (15,88,77,083) ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ರಾಹುಲ್ ಗಾಂಧಿ ಘೋಷಿಸಿದ್ದರು. 2014ರಲ್ಲಿ ಆಸ್ತಿಯ ಮೌಲ್ಯವು ₹9.4 ಕೋಟಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.