ADVERTISEMENT

ಖಜುರಾಹೊ: ಕಣದಲ್ಲಿರುವ ಅಭ್ಯರ್ಥಿಗೆ ‘ಇಂಡಿಯಾ’ ಬೆಂಬಲ

ಪಿಟಿಐ
Published 6 ಏಪ್ರಿಲ್ 2024, 16:27 IST
Last Updated 6 ಏಪ್ರಿಲ್ 2024, 16:27 IST
...
...   

ಭೋಪಾಲ್: ಖಜುರಾಹೊ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ (ಎಸ್‌ಪಿ) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮೀರಾ ಯಾದವ್ ಅವರ ನಾಮಪತ್ರ ತಿರಸ್ಕೃತಗೊಂಡಿರುವುದರಿಂದ ಕ್ಷೇತ್ರದಲ್ಲಿ ಉಳಿದವರ ಪೈಕಿ ಒಬ್ಬರನ್ನು ಬೆಂಬಲಿಸುವುದಾಗಿ ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು ಶನಿವಾರ ಹೇಳಿಕೆ ನೀಡಿದೆ.

ಮೈತ್ರಿ ಒಪ್ಪಂದದ ಭಾಗವಾಗಿ ಕಾಂಗ್ರೆಸ್ ಈ ಕ್ಷೇತ್ರವನ್ನು ಎಸ್‌ಪಿಗೆ ಬಿಟ್ಟುಕೊಟ್ಟಿತ್ತು. ಶುಕ್ರವಾರ ಚುನಾವಣಾಧಿಕಾರಿಯು ಮೀರಾ ಅವರ ನಾಮಪತ್ರ ತಿರಸ್ಕರಿಸಿದ್ದರು. ‘ಬಿಜೆಪಿ ವಿರುದ್ಧವಾಗಿ ಯಾರಾದರೊಬ್ಬ ಅಭ್ಯರ್ಥಿಯನ್ನು ನಾವು ಬೆಂಬಲಿಸುತ್ತೇವೆ. ಬಿಜೆಪಿಗೆ ಪಾಠ ಕಲಿಸುತ್ತೇವೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದರು.

‘ಚುನಾವಣಾಧಿಕಾರಿಯೂ ಆಗಿರುವ ಪನ್ನಾ ಜಿಲ್ಲಾಧಿಕಾರಿ ಶುಕ್ರವಾರ ಮೂರು ಗಂಟೆಗಳ ಕಾಲ ಕಚೇರಿಯಲ್ಲಿ ಇರಲಿಲ್ಲ. ಮೀರಾ ಮಧ್ಯಾಹ್ನ 12 ಗಂಟೆಯಿಂದಲೇ ಕಾಯುತ್ತಿದ್ದರೂ ಜಿಲ್ಲಾಧಿಕಾರಿ ಬರಲಿಲ್ಲ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ಜಿತು ‍ಪಟ್ವಾರಿ ಹೇಳಿದ್ದಾರೆ. ಮೀರಾ ಅವರು ಜಿಲ್ಲಾಧಿಕಾರಿಗೆ ಹಲವು ಬಾರಿ ಕರೆ ಮಾಡಿದರೂ ಪ್ರಯೋಜವಾಗಲಿಲ್ಲ’ ಎಂದು ಅವರು ಆರೋಪಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.