ADVERTISEMENT

ಶತ್ರುಗಳ ಜತೆ ಕೈಜೋಡಿಸಿದ ಕಾಂಗ್ರೆಸ್‌: ಯೋಗಿ ಆದಿತ್ಯನಾಥ್

ಪಿಟಿಐ
Published 3 ಮೇ 2024, 12:46 IST
Last Updated 3 ಮೇ 2024, 12:46 IST
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್   

ಲಖನೌ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ‘ಇಂಡಿಯಾ’ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ‘ಕಾಂಗ್ರೆಸ್‌ ಪಕ್ಷವು ದೇಶದ ಶತ್ರುಗಳ ಜತೆ ಕೈಜೋಡಿಸಿದೆ’ ಎಂದು ಆರೋಪಿಸಿದರು.

ಶುಕ್ರವಾರ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ನ ‘ಕೈ’ (ಪಕ್ಷದ ಚಿಹ್ನೆ) ದೇಶದ ಶತ್ರುಗಳ ಜತೆಗಿದೆ’ ಎಂದು ಟೀಕಿಸಿದರು.

ಇಮ್ರಾನ್‌ ಖಾನ್‌ ಅವರು ಪಾಕಿಸ್ತಾನದ ಪ್ರಧಾನಿಯಾಗಿದ್ದ ಅವಧಿಯಲ್ಲಿ ಸಚಿವರಾಗಿದ್ದ ಚೌಧರಿ ಫವಾದ್‌ ಹುಸೇನ್‌ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ರಾಹುಲ್‌ ಗಾಂಧಿಗೆ ಸಂಬಂಧಿಸಿದ ವಿಡಿಯೊವನ್ನು ಪೋಸ್ಟ್‌ ಮಾಡಿ, ಅವರನ್ನು ಹೊಗಳಿರುವುದನ್ನು ಉಲ್ಲೇಖಿಸಿ ಈ ಪ್ರತಿಕ್ರಿಯೆ ನೀಡಿದ್ದಾರೆ. 

ADVERTISEMENT

‍‘ಪಾಕಿಸ್ತಾನವು ರಾಹುಲ್ ಗಾಂಧಿ ಅವರನ್ನು ಯಾವ ರೀತಿ ಒಪ್ಪಿಕೊಂಡಿದೆ ಎಂಬುದನ್ನು ದೇಶದ ಜನರು ಗಮನಿಸಬೇಕು. ಪುಲ್ವಾಮಾ ಘಟನೆಯನ್ನು ಬೆಂಬಲಿಸಿದ್ದ ಪಾಕಿಸ್ತಾನ ಸರ್ಕಾರದ ಮಾಜಿ ಸಚಿವರೊಬ್ಬರು ಈಗ ರಾಹುಲ್ ಅವರನ್ನು ಬಹಿರಂಗವಾಗಿ ಹೊಗಳುತ್ತಿದ್ದಾರೆ. ಕಾಂಗ್ರೆಸ್‌ನ ‘ಕೈ’ ಮತ್ತು ದೇಶದ ಶತ್ರುಗಳ ಕೈಗಳು ಒಟ್ಟಿಗೆ ಇರುವುದನ್ನು ಇದು ತೋರಿಸುತ್ತದೆ’ ಎಂದು ಹೇಳಿದರು.

‘ಮೋದಿ ಮತ್ತು ಬಿಜೆಪಿ ಗೆದ್ದರೆ ದೇಶದಲ್ಲಿ ದೀಪಾವಳಿ ಆಚರಿಸಲಾಗುತ್ತದೆ. ಆದರೆ, ಕಾಂಗ್ರೆಸ್ ಗೆದ್ದರೆ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆ ನಡೆಯುತ್ತದೆ. ದೇಶದ ಜನರು ಈ ವ್ಯತ್ಯಾಸವನ್ನು ಅರ್ಥಮಾಡಿಕೊಂಡು ದೇಶವಿರೋಧಿ ಶಕ್ತಿಗಳನ್ನು ತಿರಸ್ಕರಿಸಬೇಕು’ ಎಂದು ಕೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.