ADVERTISEMENT

ಕೇರಳದಲ್ಲಿ ಅರಳಿದ ಕಮಲ: ತ್ರಿಶೂರಿನಲ್ಲಿ ಗೆಲುವಿನತ್ತ ಸುರೇಶ್ ಗೋಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜೂನ್ 2024, 10:01 IST
Last Updated 4 ಜೂನ್ 2024, 10:01 IST
<div class="paragraphs"><p>ಸುರೇಶ್ ಗೋಪಿ</p></div>

ಸುರೇಶ್ ಗೋಪಿ

   

(ಪಿಟಿಐ ಚಿತ್ರ)

ತಿರುವನಂತಪುರ: ಲೋಕಸಭೆ ಚುನಾವಣೆ 2024 ಫಲಿತಾಂಶ ಹೊರಬೀಳುತ್ತಿದ್ದು, ಕೇರಳದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಖಾತೆ ತೆರೆಯುವುದು ಬಹುತೇಕ ಖಚಿತವಾಗಿದೆ.

ADVERTISEMENT

ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ನಟ ಸುರೇಶ್ ಗೋಪಿ ಗೆಲುವು ಬಹುತೇಕ ನಿಶ್ಚಿತವಾಗಿದೆ. ಈ ಕ್ಷೇತ್ರದಲ್ಲಿ ಸುರೇಶ್ ಗೋಪಿ ಅವರು 73,954 ಮತಗಳ ಮುನ್ನಡೆಯಲ್ಲಿದ್ದಾರೆ.

ಗೆಲುವು ಖಚಿತವಾಗುತ್ತಿದ್ದಂತೆಯೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸುರೇಶ್ ಗೋಪಿ, 'ನಾನು ತ್ರಿಶೂರ್ ಜನರಿಗೆ ಕೈಮುಗಿದು ಧನ್ಯವಾದ ಸಲ್ಲಿಸುತ್ತೇನೆ. ಅವರಿಂದಾಗಿಯೇ ಈ ಗೆಲುವು ಸಾಧ್ಯವಾಗಿದೆ' ಎಂದು ಹೇಳಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ ನನ್ನ ರಾಜಕೀಯ ಗುರು. ನಾನು ಪ್ರಣಾಳಿಕೆಯನ್ನಷ್ಟೇ ನಂಬಿ ಕೂರುವುದಿಲ್ಲ. ಕೇರಳದ ಸಂಸದನಾಗಿ, ಕೇರಳದ ಎಲ್ಲ ಜನರಿಗಾಗಿ ದುಡಿಯುತ್ತೇನೆ' ಎಂದು ಹೇಳಿದ್ದಾರೆ.

20 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಕೇರಳದಲ್ಲಿ 17ರಲ್ಲಿ ಯುಡಿಎಫ್, 2ರಲ್ಲಿ ಎಲ್‌ಡಿಎಫ್ ಹಾಗೂ ಒಂದು ಕ್ಷೇತ್ರದಲ್ಲಿ ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.